ಕರೆಂಟು ಇಲ್ಲ – ನೆಟ್ವರ್ಕ್ ಇಲ್ಲ – ಇಂಟರ್ನೆಟ್ ಇಲ್ಲ…!

June 17, 2019
9:00 AM

ಸುಳ್ಯ: ತಾಲೂಕಿನ ಗ್ರಾಮೀಣ ಭಾಗಗಳ ಸಮಸ್ಯೆ ಈಗ ಹೆಚ್ಚಾಗಿದೆ. ಕರೆಂಟ್ ಒಂದು ಮಳೆಗೇ ಕಣ್ಣಾಮುಚ್ಚಾಲೆಯಾಡುತ್ತದೆ. ಅದರ ಬೆನ್ನಿಗೇ ಬಿ ಎಸ್ ಎನ್ ಎಲ್ ನೆಟ್ವರ್ಕ್ ಹೋಗುತ್ತದೆ, ಜೊತೆಗೆ ಇಂಟರ್ನೆಟ್ಟೂ ಕೈಕೊಡುತ್ತದೆ..!. ಈ ಸಮಸ್ಯೆ ಹೇಳೋದು ಯಾರಲ್ಲಿ ಅಂತ ಜನ ಆ ಕಡೆ ಈ ಕಡೆ ನೋಡುತ್ತಿದ್ದಾರೆ.

Advertisement
Advertisement
Advertisement
Advertisement

ಇಂದಿಗೂ ಗ್ರಾಮೀಣ ಭಾಗಗಳಲ್ಲಿ  ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ರಾತ್ರಿ ವೇಳೆ ಕತ್ತಲ್ಲಲ್ಲೇ ಇರಬೇಕಾದ ಸ್ಥಿತಿ ಬಂದಿದೆ. ಒಂದು ಮಳೆ ಬಂದರೆ ಸಾಕು ವಿದ್ಯುತ್ ಕೈಕೊಡುತ್ತದೆ, ಕೇಳಿದರೆ ಮಾಮೂಲು ಉತ್ತರ,  “ಟ್ರಿಪ್ ಆಗಿದೆ”. ಯಾಕೆ ಟ್ರಿಪ್ ಆಗುತ್ತದೆ ಎಂದರೆ ಮರದ ಗೆಲ್ಲುಗಳು ತಾಗುತ್ತವೆ. ಯಾಕೆ ಮರದ ಗೆಲ್ಲುಗಳು ತಾಗುತ್ತವೆ ಎಂದರೆ ಟ್ರೀ ಕಟ್ಟಿಂಗ್ ಆಗಿಲ್ಲ. ಆದರೆ ವಾರದಲ್ಲೊಂದು ದಿನ ಇದಕ್ಕೆಂದೇ ಪವರ್ ಕಟ್ ಮಾಡುವ ಬಗ್ಗೆ ಪತ್ರಿಕಾ ಹೇಳಿಕೆಗಳು ಬರುತ್ತದೆ. ಹಾಗಿದ್ದರೂ ಯಾಕೆ ವಿದ್ಯುತ್ ಕೈಕೊಡುತ್ತದೆ…!.

Advertisement

ಉಳಿದೆಲ್ಲಾ ತಾಲೂಕುಗಳಲ್ಲಿ  ಮಳೆಗಾಲಕ್ಕೆ ಮುನ್ನ ಮುಂಜಾಗ್ರತಾ ಸಭೆಯಾಗುತ್ತದೆ. ಕೊಡಗು ಜಿಲ್ಲೆಯಲ್ಲಿ  500 ಮಂದಿ ಹೆಚ್ಚುವರಿ ಸಿಬ್ಬಂದಿಗಳನ್ನು  ಮಳೆಗಾಲದ ಅವಧಿಗೆಂದು ಸರ್ವ ಸನ್ನದ್ಧ ರೀತಿಯಲ್ಲಿ  ನಿಯೋಜನೆ ಮಾಡುತ್ತಾರೆ. ವಿದ್ಯುತ್ ಕೈಕೊಡದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಅದರಲ್ಲೂ ಸುಳ್ಯದಲ್ಲಿ ಮಾತ್ರಾ ಇದೇಕೆ ಇಂತಹ ಸಮಸ್ಯೆ..!. ಮಳೆಗಾಲದ ಮುನ್ನ ಪ್ರಕೃತಿ ವಿಕೋಪದ ಸಭೆಯಲ್ಲಿ  ಏಕೆ ಈ ಬಗ್ಗೆ ಚರ್ಚೆಯಾಗುವುದಿಲ್ಲ ಎಂಬುದಕ್ಕೂ  ಉತ್ತರವಿಲ್ಲ..!. ಉದಾಹರಣೆಗೆ ಸುಳ್ಯದಿಂದ ಗುತ್ತಿಗಾರು ಸುಬ್ರಹ್ಮಣ್ಯದ ಕಡೆಗೆ ಬರುವ ವಿದ್ಯುತ್ ಲೈನ್ ನಲ್ಲಿ  ಉಬರಡ್ಕದ ಬಳಿ ಕಳೆದ ಹಲವಾರು ವರ್ಷಗಳಿಂದ ವಿದ್ಯುತ್ ತಂತಿಗೆ ಬಿದಿರುತಾಗುತ್ತದೆ, ಕಂಬ ವಾಲಿದೆ, ಇದರ ದುರಸ್ತಿಯಾಗಿಲ್ಲ. ಹೀಗಾಗಿ ಈ ಲೈನ್ ಪದೇ ಪದೇ ಟ್ರಿಪ್ ಆಗುತ್ತದೆ..!.

ವಿದ್ಯುತ್ ಕೈಕೊಡುವ ಜೊತೆಗೇ ಬಿ ಎಸ್ ಎನ್ ಎಲ್ ಮೊಬೈಲ್ ಕೂಡಾ ಮಾಯವಾಗುತ್ತದೆ. ವಿದ್ಯುತ್ ಹೊಂದಿಕೊಂಡು ಇರುವ ಮೊಬೈಲ್ ಟವರ್ ಆಫ್ ಆಗುತ್ತದೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಬಿ ಎಸ್ ಎನ್ ಎಲ್ ಮೊಬೈಲ್ ಬಳಕೆ ಹೆಚ್ಚಿದೆ. ವಿದ್ಯುತ್ ಕೈಕೊಡುವ ಕಾರಣದಿಂದ ಮೊಬೈಲ್ ಕೂಡಾ ಇಲ್ಲವಾಗುತ್ತದೆ ಸಂಪರ್ಕ ಮರೆಯಾಗುತ್ತದೆ. ಬಿ ಎಸ್ ಎನ್ ಎಲ್ ಡೀಸೆಲ್ ಸರಬರಾಜು ಮಾಡದೇ ಇರುವ ಕಾರಣ ಟವರ್ ಆಫ್. ಅಲ್ಲೂ ಕಾರಣ ಕೇಳಿದರೆ ಕರೆಂಟ್ ಇಲ್ಲ…!. ಇತ್ತೀಚೆಗೆ ಅನಾರೋಗ್ಯದ ಸಂದರ್ಭದಲ್ಲೂ ತುರ್ತಾಗಿ ಸಂಪರ್ಕ ಮಾಡಬೇಕಾದರೆ ಸಂಕಷ್ಟ ಪಡಬೇಕಾದ ಸ್ಥಿತಿ ಗ್ರಾಮೀಣ ಭಾರತದ್ದು..! ನೂತನ ಸರಕಾರ ಬಂದ ಬಳಿಕ ಇದೆಲ್ಲಾ ಸರಿಯಾಗುತ್ತದೆ ಎನ್ನಲಾಗಿತ್ತು , ಈಗ ಅದಕ್ಕೂ ಚಾಲನೆ ಸಿಕ್ಕಿಲ್ಲ.

Advertisement

ಮೊಬೈಲ್ ನೆಟ್ವರ್ಕ್ ಅನ್ನೇ ಹೊಂದಿಕೊಂಡಿರುವ ಡಿಜಿಟಲ್ ಇಂಡಿಯಾದ ಭಾಗವಾಗಿರುವ ಇಂಟರ್ನೆಟ್ ಕೂಡಾ ಇಲ್ಲವಾಗುತ್ತದೆ. ಯುವಕರಿಂದ ತೊಡಗಿ ಎಲ್ಲರೂ ಇಂದು ಡಿಜಿಟಲ್ ಯುಗದತ್ತ ಹೊರಳಿರುವಾಗ,  ಇದ್ಯಾವುದೂ ಇಲ್ಲದೆ ಮೇಲೆ ಕೆಳಗೆ ನೋಡಬೇಕಾದ ಸ್ಥಿತಿ ಗ್ರಾಮೀಣ ಭಾರತದಲ್ಲಿದೆ.

ಇದೆಲ್ಲಾ ನಿವಾರಣೆಯಾಗದ ಸಮಸ್ಯೆಯಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಖಡಕ್ ಆಗಿ ಮಾತನಾಡಿದರೆ ಎಲ್ಲವೂ ಒಂದೇ ವಾರದಲ್ಲಿ ಸರಿಯಾಗಲು ಸಾಧ್ಯವಿದೆ. ರಚನಾತ್ಮಕವಾಗಿ ನೋಡಿದರೆ ಗ್ರಾಮೀಣ ಭಾರತದ  ಸುಧಾರಣೆಗೆ ಇಂದು ಕರೆಂಟು  – ನೆಟ್ವರ್ಕ್  – ಇಂಟರ್ನೆಟ್  ಅಗತ್ಯವಾಗಿದೆ. ಹೀಗಾಗಿ ಅಭಿವೃದ್ಧಿಪರವಾಗಿ ಯೋಚಿಸಿದರೆ ಈ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಿದೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |
January 26, 2025
7:35 AM
by: The Rural Mirror ಸುದ್ದಿಜಾಲ
ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ
January 26, 2025
7:14 AM
by: The Rural Mirror ಸುದ್ದಿಜಾಲ
ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಭಾರತಕ್ಕೆ ಹುರಿದ ಅಡಿಕೆ ಆಮದು | ತಕ್ಷಣವೇ ಕ್ರಮ ಕೈಗೊಳ್ಳಲು ಕ್ಯಾಂಪ್ಕೊ ಒತ್ತಾಯ|
January 25, 2025
10:39 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror