ಕಲ್ಮಡ್ಕದಲ್ಲಿ ಆಪರೇಶನ್ “ಪೆರ್ಮರಿ” : ನಾಯಿಯ ಕಾಡಿದ ಹೆಬ್ಬಾವು ಕಾಡಿಗೆ..!

August 28, 2019
6:19 PM

ಕಲ್ಮಡ್ಕ: ಸುಳ್ಯ ತಾಲೂಕಿನ ಕಲ್ಮಡ್ಕದ ಕೈಲಾರು ಈಶ್ವರ ಭಟ್ ಅವರ ತೋಟದಲ್ಲಿ  ಒಂದೇ ಸಮನೆ  ನಾಯಿ ಬೊಗಳುತ್ತಿತ್ತು. ಹೋಗಿ ನೋಡಿದಾಗ ಅವರ ಸಾಕು ನಾಯಿಯೊಂದನ್ನು ಹೆಬ್ಬಾವು ಹಿಡಿದು ತಿನ್ನುವ ಸ್ಥಿತಿಯಲ್ಲಿತ್ತು, ನಾಯಿ ಬದುಕಿಗಾಗಿ ಹೋರಾಟ ಮಾಡುತ್ತಿತ್ತು. ಇತರ  ನಾಯಿಗಳು ಬೊಗಳುತ್ತಾ  ರಕ್ಷಣೆಗೆ ಮುಂದಾಗುತ್ತಾ ಸಹಾಯಕ್ಕಾಗಿ ಯಜಮಾನನ್ನು  ಕರೆಯುತ್ತಿತ್ತು.

Advertisement
Advertisement

ಏನಿದು ನಾಯಿ ವಿಪರೀತ ಬೊಗಳುತ್ತದೆ ಎಂದು ಈಶ್ವರ ಭಟ್ಟರು ತೋಟಕ್ಕೆ ಹೋದಾಗ ಹೆಬ್ಬಾವು ನಾಯಿಯನ್ನು ಕಾಡುತ್ತಿತ್ತು, ಹೋರಾಟ ನಡೆಯುತ್ತಿತ್ತು. ಈಶ್ವರ ಭಟ್ ಸ್ಥಳಕ್ಕೆ ಬಂದಾಗ ಹೆಬ್ಬಾವು ನಾಯಿಯನ್ನು ಬಿಟ್ಟು ತೆಂಗಿನ ಮರದ ಬುಡದ ಕಸದೆಡೆಯಲ್ಲಿ ಅವಿತು ಕುಳಿತಿತ್ತು. ಇದನ್ನು ಅರಿತ ಈಶ್ವರ ಭಟ್  ಹೆಬ್ಬಾವನ್ನು ಕಾರ್ಮಿಕರೊಂದಿಗೆ ಸೇರಿ ಹಿಡಿದು ಗೋಣಿ ಚೀಲದಲ್ಲಿ ತುಂಬಿ ಕಲ್ಮಡ್ಕದ ಬಂಟಮಲೆ ತಪ್ಪಲಿನ ಕಾಡಿಗೆ ಸುರಕ್ಷಿತವಾಗಿ ಬಿಟ್ಟು ತನ್ನ ಪರಿಸರ ಪ್ರೇಮವನ್ನು ಮತ್ತು ಪ್ರಾಣಿ ದಯೆಯನ್ನು ಮೆರೆದರು. ಈಗ ಎರಡೂ ಪ್ರಾಣಿಗಳು ಸೇಫ್ ಮೋಡ್ ನಲ್ಲಿ…!. ಈಶ್ವರ ಭಟ್ಟದ ಪರಿಸರ ಪ್ರೇಮ, ಹಾವು ಹಿಡಿಯುವ ಧೈರ್ಯ ಮೆಚ್ಚುಗೆಗೆ ಕಾರಣವಾಯಿತು.

(Photo : ಸುರೇಶ್ಚಂದ್ರ ಕಲ್ಮಡ್ಕ)

 

Advertisement

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group