ಮುಂಬಯಿ: ಮುಂಬಯಿಯ ಆಹಾರ ಮತ್ತು ಔಷಧ ವಿಭಾಗದ ನಾಗ್ಪುರ ವಿಭಾಗದ ಆಹಾರ ಸುರಕ್ಷತಾ ಅಧಿಕಾರಿಗಳು ಸುಮಾರು 11, 496 ಕೆಜಿ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ.
ಕಳಪೆ ಗುಣಮಟ್ಟ ಹಾಗೂ ಕಲಬೆರಕೆ ಮಾಡಲಾಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ತನಿಖೆಯ ವೇಳೆ ಕಳಪೆ ಗುಣಮಟ್ಟದ ಅಡಿಕೆಯನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ 32,68,860 ರೂ.ಗಳ 11,496 ಕೆಜಿ ತೂಕದ ಅಡಿಕೆ ದಾಸ್ತಾನು ವಶಪಡಿಸಿಕೊಂಡಿದ್ದಾರೆ.
ಆದರೆ ಇದೇ ಮೊದಲಲ್ಲ ಈ ಹಿಂದೆಯೂ ಆಹಾರ ಮತ್ತು ಔಷಧ ವಿಭಾಗದ ಅಧಿಕಾರಿಗಳು ಕಳಪೆ ಗುಣಮಟ್ಟದ ಅಡಿಕೆ ವಶಕ್ಕೆ ಪಡೆದಿದ್ದರು. ಈ ವರ್ಷ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ, 11 ವಿವಿಧ ಸ್ಥಳಗಳಲ್ಲಿ 2,69,70,842 ರೂ ಮೌಲ್ಯದ 1,10,599 ಕೆಜಿ ತೂಕದ ಅಡಿಕೆ ವಶಪಡಿಸಿಕೊಂಡಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel