ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಅಡ್ಡಿಪಡಿಸುವ ಉದ್ದೇಶವಿರಲಿಲ್ಲ: ರಿಯಾಝ್ ಕಟ್ಟೆಕ್ಕಾರ್ ಸ್ಪಷ್ಟನೆ

June 12, 2019
12:33 PM

ಸುಳ್ಯ: ಕಾಂಗ್ರೆಸ್ ಸಭೆಗೆ ತೆರಳಿ ಕಾಂಗ್ರೆಸ್ ಸಭೆಯನ್ನು ಅಡ್ಡಿಪಡಿಸುವ ಉದ್ದೇಶ ಇರಲಿಲ್ಲ ಎಂದು ನಗರ ಪಂಚಾಯತ್ ಪಕ್ಷೇತರ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ತಿಳಿಸಿದ್ದಾರೆ.

Advertisement
Advertisement
Advertisement

ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮಂಗಳವಾರ ಸುಳ್ಯಕ್ಕೆ ಭೇಟಿ‌ ನೀಡಿದರು. ಸಭೆಯ ಬಳಿಕ ಬೂಡು ವಾರ್ಡಿನ ಅಂಗನವಾಡಿಯ ತಡೆಗೋಡೆ ನಿರ್ಮಾಣದ ವಿಚಾರವಾಗಿ ಐವನ್ ಡಿಸೋಜಾ ಅವರನ್ನು ಬೂಡು ವಾರ್ಡಿಗೆ ಕರೆದುಕೊಂಡು ಹೋಗಲು ಯತ್ನಿಸಿದ್ದೆ. ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಐವನ್ ಡಿಸೋಜಾ ಅವರು ನನ್ನ ವಾರ್ಡಿಗೆ ಬರುವುದನ್ನು ತಡೆದರು. ನಂತರ ಐವನ್ ಡಿಸೋಜಾ ಅವರು ಪೂರ್ವ ನಿಗದಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ತೆರಳಿದ್ದರು.

Advertisement

ಸಭೆ ನಡೆಯುತ್ತಿದ್ದಾಗ ನಾನು ಐವನ್ ಡಿಸೋಜಾ ಅವರನ್ನು ನನ್ನ ವಾರ್ಡ್ ಗೆ ಕರೆದುಕೊಂಡು ಹೋಗಲು ನಿಂತಿದ್ದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಚಕಮಕಿ ನಡೆದು ಸಭೆ ಅರ್ಧಕ್ಕೆ ಮೊಟಕುಗೊಂಡಿತು. ನನಗೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಅಡ್ಡಿಪಡಿಸುವ ಯಾವುದೇ ಉದ್ದೇಶವಿರಲಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.10 ರಿಂದ ಜಾನುವಾರುಗಳಿಗೆ ಉಚಿತ ಕಂದು ರೋಗ ಲಸಿಕೆ
January 10, 2025
7:03 PM
by: The Rural Mirror ಸುದ್ದಿಜಾಲ
ರಾಸಾಯನಿಕ ಕೃಷಿಯಿಂದಾಗುವ ಪರಿಣಾಮಗಳ ಬಗ್ಗೆ ಭಾರತದ ರೈತರಲ್ಲೂ ಅರಿವು | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್
January 10, 2025
6:56 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಳ ಕುರಿತು ಅಧ್ಯಯನ ನಡೆಸುವಂತೆ  ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆ
January 10, 2025
6:48 AM
by: The Rural Mirror ಸುದ್ದಿಜಾಲ
ನಕ್ಸಲರ ಶರಣಾಗತಿ ಹಿನ್ನೆಲೆ | ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ತನಿಖೆ
January 10, 2025
6:45 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror