ಕಾಣಿಯೂರು: ಬಿಜೆಪಿ ಕಾರ್ಯಕರ್ತರಿಂದ ನೆರೆಸಂತ್ರಸ್ತ ಪ್ರದೇಶದಲ್ಲಿ ಶ್ರಮದಾನ

August 24, 2019
2:00 PM

ಕಾಣಿಯೂರು: ಬೆಳ್ತಂಗಡಿ ತಾಲೂಕಿನ ದಿಡುಪೆ ಹಾಗೂ ಚಾರ್ಮಾಡಿ ಗ್ರಾಮಗಳಲ್ಲಿ ಇತ್ತೀಚೆಗೆ ನೆರೆ ಉಂಟಾಗಿ ಸಂತ್ರಸ್ತರಾದವರ ಮನೆ ಹಾಗೂ ಕೃಷಿ ತೋಟಗಳಿಗೆ  ತೆರಳಿದ ಕಾಣಿಯೂರು ಬಿಜೆಪಿ ಹಾಗೂ ಸಂಘಪರಿವಾರ ಕಾರ್ಯಕರ್ತರು ಸಂತ್ರಸ್ತರಿಗೆ ಅಕ್ಕಿ ಸಮಾಗ್ರಿಗಳನ್ನು ವಿತರಸಿ, ಶ್ರಮದಾನ ಮೂಲಕ ಕೃಷಿ ತೋಟಗಳನ್ನು ಸ್ವಚ್ಛಗೊಳಿಸಿದರು.

Advertisement
Advertisement

ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಪ್ರಮುಖರು ತೆರಳಿ ನೆರೆ ಸಂತ್ರಸ್ತರಿಗೆ ನೆರವಾದರು. ಸಂಪರ್ಕ ಕಡಿತಕೊಂಡಿರುವ ಚಾರ್ಮಾಡಿ ಹಾಗೂ ದಿಡುಪೆ ಗ್ರಾಮದ ಕೆಲವು ಮನೆಗಳಿಗೆ ಸುಮಾರು ಒಂದು ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಿ , ಸುಮಾರು ಏಳು ಕಿಂಟ್ವಾಲ್ ಅಕ್ಕಿ , ಎಪ್ಪತೈದು ಕೆ.ಜಿ ಸಕ್ಕರೆ ಹಾಗೂ ಇನ್ನಿತರ ಆಹಾರ ಸಾಮಾಗ್ರಿಗಳನ್ನು ಹೊತ್ತೊಕೊಂಡು ತೆರಳಿ ಮನೆಗಳಿಗೆ ವಿತರಿಸಿ ಮಾನವೀಯತೆ ಮೆರೆದರು.
ಪ್ರಮುಖವಾಗಿ ನೆರೆಯಿಂದಾಗಿ ಮನೆ ಮಠ, ಕೃಷಿ ಎಲ್ಲವನ್ನು ಕಳೆದುಕೊಂಡ ಕೆಲವು  ಕುಟುಂಬಗಳಿಗೆ, ವಿಕಲಚೇತನರ ಮನೆಗಳಿಗೆ, ಮಹಿಳೆಯರೇ ಇರುವ ಅಸಾಯಕ ಕುಟುಂಬಗಳ ಮನೆಗಳಿಗೆ, ದಿಕ್ಕು ದೆಸೆಯಿಲ್ಲದ ಕುಟುಂಬಗಳ ಒಟ್ಟು 30 ಮನೆಗಳಿಗೆ ಅಕ್ಕಿ ಆಹಾರ ಸಮಾಗ್ರಿಗಳನ್ನು ವಿತರಿಸಿದರು.
ನೆರೆಯಲ್ಲಿ ಕೃಷಿಯನ್ನು ಕಳೆದುಕೊಂಡು ಎರಡು ಕುಟುಂಬಗಳ ಅಳಿದುಳಿದ ಮುನ್ನೂರು ಅಡಕೆ ತೋಟ ತುಂಬಾ ಮರಳು ತುಂಬಿರುವುದನ್ನು ಕಾರ್ಯಕರ್ತರು ತೆಗೆದು ಶುಚಿಗೊಳಿಸಿದರು. ಆಹಾರ ಸಾಮಾಗ್ರಿಗಳನ್ನು ಒದಗಿಸುವಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘ, ಕಾಣಿಯೂರು ಗ್ರಾಮ ಪಂಚಾಯತ್ ಸಹಕರಿಸಿದೆ. ಕಾಣಿಯೂರು ವಾಹನ ಮಾಲಕ, ಚಾಲಕರು, ಅಟೋ ಚಾಲಕ ಮಾಲಕರು ಆಹಾರ ಸಮಾಗ್ರಿಗಳನ್ನು ಸಾಗಿಸುವಲ್ಲಿ ಸಹಕರಿಸಿದರು.

Advertisement

ಬಿಜೆಪಿ ಸುಳ್ಯ ಮಂಡಲ ಸದಸ್ಯ, ಪುತ್ತೂರು ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಗಣೇಶ್ ಉದನಡ್ಕ ಅವರ ನೇತೃತ್ವದಲ್ಲಿ ಸಂತ್ರಸ್ತರ ಪ್ರದೇಶಗಳಿಗೆ ತೆರಳಿದ ತಂಡದಲ್ಲಿ ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಮಾಧವಿ ಕೋಡಂದೂರು, ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ನಿರ್ದೇಶಕರಾದ ಧರ್ಮೇಂದ್ರ ಕಟ್ಟತ್ತಾರು, ವಿಶ್ವನಾಥ ದೇವಿನಗರ, ಹರೀಶ್ ಅಂಬುಲ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಸದಾಶಿವ ಮೀಯೋಳ್ಪೆ, ಮಾಧವ ಎಣ್ಮೂರು, ಕಾಣಿಯೂರು ಗ್ರಾ.ಪಂ, ಸದಸ್ಯರಾದ ಸುರೇಶ್ ಓಡಬಾಯಿ, ವೀರಪ್ಪ ಉದ್ಲಡ್ಡ, ಬಿಜೆಪಿ ಮುಖಂಡ ಪ್ರದೀಪ್ ಬೊಬ್ಬೆಕೇರಿ, ಕಾಣಿಯೂರು ಗ್ರಾ.ಪಂ ಮಾಜಿ ಅಧ್ಯಕ್ಷ ಹರಿಶ್ಚಂದ್ರ ನೀಟಡ್ಕ, ನೋಣಪ್ಪ ಕೀಲೆ, ಚಾರ್ವಾಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಬಾರೆಂಗಳ, ರಾಮಚಂದ್ರ ಕೋಲ್ಪೆ ಮತ್ತಿತರರು ಭಾಗವಹಿಸಿದ್ದರು. ರಾಜೇಶ್ ಕೋರಿಕಾರ್, ರೋಹಿತ್ ಅಗಳಿ, ನವೀನ್ ಮುದುವ, ವಿದ್ಯಾನಂದ ಪಂಜ, ದಿನೇಶ್ ಕಾನಾವು ಇವರು ವಾಹನಗಳನ್ನು ನೀಡಿ ಸಹಕರಿಸಿದರು.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ

You cannot copy content of this page - Copyright -The Rural Mirror