ಕಿದು ಕೃಷಿ ಸಂಶೋಧನಾ ಕೇಂದ್ರ ಉಳಿಸಲು ವಿದ್ಯಾಪ್ರಸನ್ನ ಶ್ರೀ ಒತ್ತಾಯ

June 29, 2019
9:00 AM

ಸುಬ್ರಹ್ಮಣ್ಯ : ಕಿದು ಕೃಷಿ ಸಂಶೋಧನಾ ಕೇಂದ್ರವನ್ನು ಅರಣ್ಯ ಇಲಾಖೆ ವಾಪಸ್ ಪಡೆಯದೆ ವಿನಾಯಿತಿ ನೀಡುವಂತೆ ಮತ್ತು ಇರುವ ನವೀಕರಣ ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿ ಮಾಡುವೆ ಎಂದು  ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀಗಳು ಹೇಳಿದರು.

Advertisement
Advertisement
Advertisement

ಅರಣ್ಯ ಇಲಾಖೆಯಿಂದ ಭೂಮಿಯನ್ನು ಲೀಸಿಗೆ ಪಡೆದು ಕೃಷಿ ಸಂಶೋಧನೆಗಾಗಿ ಕಡಬ ತಾಲೂಕಿನ ಕಿದುವಿನಲ್ಲಿ ಸ್ಥಾಪನೆಯಾಗಿರುವ ಕಿದು ತೆಂಗು ಜಿನ್ ಬ್ಯಾಂಕನ್ನು ನವೀಕರಿಸದೆ ಇರುವುದು ಮತ್ತು ನವೀಕರಣ ಹಣ ಪಾವತಿಸದೆ ಕೃಷಿಕರಿಗೆ ಆಗುತ್ತಿರುವ ತೊಂದರೆ ಹಿನ್ನಲೆಯಲ್ಲಿ ಸಹಕಾರಿ ಧುರೀಣ ಬಾಲಕೃಷ್ಣ ವಾಲ್ತಾಜೆ ಮತ್ತಿತರ ಕೃಷಿ ಮುಖಂಡರ ನಿಯೋಗ ಶುಕ್ರವಾರ ಸುಬ್ರಹ್ಮಣ್ಯಕ್ಕೆ ಮಠಕ್ಕೆ ತೆರಳಿ ಯತಿಳನ್ನು ಬೇಟಿಯಾಗಿ ಸಮಸ್ಯೆ ಇತ್ಯರ್ಥಕ್ಕೆ ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಿತು.

Advertisement

ಈ ವೇಳೆ ಯತಿಗಳು ಈ ಹಿಂದೆಯು ಇಂತಹದ್ದೆ ಸಮಸ್ಯೆ ಬಂದಿದ್ದಾಗ ತಾನು ಕೇಂದ್ರ ಹಾಗೂ ರಾಜ್ಯದ ಸಚಿವರಿಗೆ, ಸಂಸದರಿಗೆ ಮನವಿ ಮಾಡಿದ್ದೆ ಎಂದು ಹೇಳಿದರು. ಸ್ಥಳದಿಂದಲೇ ಅವರು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ  ಬಿ ಎಲ್ ಸಂತೋಷ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದರು. ಕಿದು ಕೇಂದ್ರದ ಸಮಸ್ಯೆ ಇತ್ಯರ್ಥ ಪಡಿಸಿ ಶಾಶ್ವತ ಪರಿಹಾರ ಕ್ರಮಕ್ಕೆ ಸರಕಾರವೇ ಮುತುವರ್ಜಿ ವಹಿಸಿ ರೈತರ ಹಿತ ಕಾಯುವಂತೆ ಅವರಿಬ್ಬರಲ್ಲಿ ಶ್ರೀಗಳು ಮನವಿ ಮಾಡಿದರು. ಇದಕ್ಕೆ ಇಬ್ಬರು ಸಕರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮದ ಭರವಸೆಯನ್ನು ಅವರು ಯತಿಗಳಿಗೆ ನೀಡಿದರು.

ಬಳಿಕ ಮಾತನಾಡಿದ ಶ್ರೀಗಳು ಜಿನ್ ಬ್ಯಾಂಕು ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರಕಾರದ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಿ ಚರ್ಚಿಸುವೆ ಎಂದರು. ಇಲ್ಲಿನ ಅಂತರಾಷ್ಟ್ರೀಯ ಸಂಶೋಧನ ಕೇಂದ್ರದಿಂದ ದೇಶದ ಕೃಷಿಕರಿಗೆ ಬಹಳಷ್ಟು ಪ್ರಯೋಜನಕಾರಿ. ಕೃಷಿ ಪ್ರಧಾನವಾದ ಈ ಭಾಗದಲ್ಲಿ ಇರುವ ಏಕೈಕ ಕೇಂದ್ರವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸುವುದಾಗಿ ಅವರು ಭರವಸೆ ಇತ್ತರು. ಈ ವೇಳೆ ಕೃಷಿಕ ನಾಗೇಶ್ ಕೈಕಂಬ ಮತ್ತಿತರ ಕೃಷಿಕರು ಉಪಸ್ಥಿತರಿದ್ದರು.
ತೆಂಗು ಸಂಶೋಧನಾ ಕೇಂದ್ರ ಕ ತಪ್ಪುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಹಿಂದೆ ತಾನು ಕೇಂದ್ರ ಕೃಷಿ ಸಚಿವರ ಜತೆ ಅಧಿಕಾರಿಗಳ ಸಮ್ಮುಖವೇ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸಿದ್ದೆ. ಬಳಿಕವೂ ನೊಟೀಸ್ ಜಾರಿಯಂತ ಸಮಸ್ಯೆ ಪುನಾರವರ್ತನೆ ಆಗುತ್ತಿದೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror