ಕುಂಬ್ರದಲ್ಲಿ ಸರಣಿ ಅಪಘಾತ: ಇಬ್ಬರಿಗೆ ಗಾಯ

June 17, 2019
5:45 PM

ಪುತ್ತೂರು: ಮಾಣಿ- ಮೈಸೂರು  ಹೆದ್ದಾರಿಯ ಶೇಖಮಲೆ ತಿರುವಿನಲ್ಲಿ ಸೋಮವಾರ   ಓವರ್‍ಟೇಕ್ ಮಾಡುವ ಭರಾಟೆಯಲ್ಲಿ ಸರಣಿ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

Advertisement
Advertisement
Advertisement

ಸುಳ್ಯ ಕಡೆಯಿಂದ ಬರುತ್ತಿದ್ದ ಜಿಪ್ಸಿ- ಬೈಕ್ ಹಾಗೂ ಪುತ್ತೂರಿನಿಂದ ಸುಳ್ಯ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸು  ನಡುವೆ ಅಪಘಾತ ಸಂಭವಿಸಿದೆ. ರಸ್ತೆಯ ತಿರುವು ಅಪಾಯಕಾರಿಯಾಗಿದ್ದು ಈ ತಿರುವಿನಲ್ಲಿ ಸುಳ್ಯ ಕಡೆಯಿಂದ ಬರುತ್ತಿದ್ದ ವಾಹನ ಓವರ್‍ಟೇಕ್ ಮಾಡಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಭಾರೀ ಅಪಘಾತವನ್ನು ತಪ್ಪಿಸುವ ಉದ್ದೇಶದಲ್ಲಿ ಬಸ್ಸು ಚಾಲಕ ಬಸ್ಸನ್ನು ರಸ್ತೆಯ ಬದಿಯ ಇಳಿಜಾರಿಗೆ ಚಲಾಯಿಸಿದ್ದಾರೆ. ಅಪಘಾತದಿಂದ ಜಿಪ್ಸಿಯಲ್ಲಿದ್ದ  ಮಹಿಳೆ ಮತ್ತು ಬೈಕ್ ಸಹಸವಾರೆ ಕಾಸರಗೋಡು ಜಿಲ್ಲೆಯ ದೇಲಂಪಾಡಿ ನಿವಾಸಿ ಸವಿತಾರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಗಂಭೀರ ಗಾಯಗೊಂಡಿರುವ ಮಹಿಳೆಯೋರ್ವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹಂಪ್ಸ್ ಅಳವಡಿಸಲು ಒತ್ತಾಯ:

ಶೇಖಮಲೆಯ ಈ ತಿರುವ ಅಪಾಯಕಾರಿಯಾಗಿದ್ದು ಈ ಹಿಂದೆಯೂ ಹಲವು ಬಾರಿ ಅಪಘಾತಗಳು ಸಂಭವಿಸಿದೆ. ಕುಂಬ್ರ ಕಡೆಯಿಂದ ತೆರಳುವ ವಾಹನಗಳಿಗೆ ತಿರುವಿನಲ್ಲಿ ಸುಳ್ಯ ಕಡೆಯಿಂದ ಬರುವ ವಾಹನಗಳು ಕಾಣದೆ ಇರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ರಸ್ತೆ ಅಗಲವಾಗಿರುವ ಕಾರಣ ವಾಹನಗಳನ್ನು ಅತೀ ವೇಗದಿಂದ ಚಲಾಯಿಸುವ ಕಾರಣ ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೆ ಅಪಘಾತಗಳು ಸಂಭವಿಸುತ್ತಿದೆ. ವೇಗ ನಿಯಂತ್ರಣಕ್ಕೆ ಎರಡೂ ಕಡೆಗಳಲ್ಲಿ ಹಂಪ್ಸ್ ಅಳವಡಿಸಬೇಕೆಂದು ವಾಹನ ಚಾಲಕರು ಒತ್ತಾಯಿಸಿದ್ದಾರೆ. ಹಂಪ್ಸ್ ಹಾಕಲು ಸಾಧ್ಯವಿಲ್ಲದೇ ಇದ್ದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಪಘಾತವನ್ನು ನಿಯಂತ್ರಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೆಚ್ಚುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳು | ಸಾರ್ವಜನಿಕರ ಜಾಗೃತಿಗಾಗಿ ಅರಿವು ಕಾರ್ಯಕ್ರಮ
November 15, 2024
10:56 PM
by: The Rural Mirror ಸುದ್ದಿಜಾಲ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ
ಕೀನ್ಯಾದಲ್ಲಿ ಕಾಗೆಗಳನ್ನು ಕೊಲ್ಲಲು ಆದೇಶ | ಈಗ ಅಮೇರಿಕಾದಲ್ಲಿ ನಾಲ್ಕೂವರೆ ಲಕ್ಷ ಗೂಬೆಗಳನ್ನು ಕೊಲ್ಲಲು ಆದೇಶ..! | ಕಾರಣ ಏನು ಗೊತ್ತಾ..?
July 6, 2024
12:06 PM
by: The Rural Mirror ಸುದ್ದಿಜಾಲ
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ | ಬರೋಬ್ಬರಿ 2 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ |
May 10, 2024
12:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror