ಬೆಳ್ಳಾರೆ: ಕುಕ್ಕುಜಡ್ಕ ಒಕ್ಕೂಟದ ದೊಡ್ಡಹಿತ್ಲು ನಿವಾಸಿ ಕೃಷ್ಣಪ್ಪ ಗೌಡರ ಮಗ ಲಕ್ಷಣ ಗೌಡರು ಮರದಿಂದ ಆಯತಪ್ಪಿ ಬಿದ್ದು ಕಳೆದ 10ವರ್ಷಗಳಿಂದ ಮಲಗಿದ ಸ್ಥಿತಿಯಲ್ಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಬಾಹುಬಲಿ ಮಹಾಮಸ್ತಕಾಭಿಷೇಕದ ನೆನಪಿಗಾಗಿ ಪೂಜ್ಯ ಖಾವಂದರು ಆರಂಭಿಸಿದ್ದ ಜನಚೇತನ ಯೋಜನೆಯಡಿಯಲ್ಲಿ ಲಕ್ಷ್ಮಣ ಗೌಡರಿಗೆ ವಾಟರ್ ಬೆಡ್ ನ್ನು ನೀಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ವಾಟರ್ ಬೆಡ್ ನ್ನು ಲಕ್ಷ್ಮಣ ಗೌಡ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು. ತಾಲೂಕು ಯೋಜನಾಧಿಕಾರಿ ಸಂತೋಷ್ ರೈ, ಊರಿನ ಹಿರಿಯ ವೆಂಕಟ್ರಮಣ ಇಟ್ಟಿಗುಂಡಿ, ವಲಯ ಮೇಲ್ವಿಚಾರಕ ಮುರಳೀಧರ ಎ, ಕುಕ್ಕುಜಡ್ಕ ಒಕ್ಕೂಟದ ಅಧ್ಯಕ್ಷ ಸುಬ್ರಾಯ ನಾಯ್ಕ, ಪೈಲಾರು ಒಕ್ಕೂಟದ ಅಧ್ಯಕ್ಷ ನಾರಾಯಣ ಕೋಡ್ತುಗುಳಿ, ಸೇವಾಪ್ರತಿನಿಧಿ ಗಾಯತ್ರಿ ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel