ಕುಕ್ಕೆ ಸುಬ್ರಹ್ಮಣ್ಯ: ಬ್ರಹ್ಮರಥದ ಸ್ವಾಗತ ಕಾರ್ಯಕ್ರಮದಲ್ಲಿ ದುಡಿದ ಸ್ವಯಂಸೇವಕ ಭಕ್ತರಿಗೆ ಕೃತಜ್ಞತೆಗಳು

October 12, 2019
12:36 PM

ಸುಬ್ರಹ್ಮಣ್ಯ: ಕುಕ್ಕೆ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ಆಗಮದ ಸಂದರ್ಭ ಸರ್ವ ಭಕ್ತರು ನಿರಂತರ ಸೇವೆ ಮಾಡಿದ್ದಾರೆ. ಕ್ಷೇತ್ರ ಶೃಂಗಾರ ಸೇರಿದಂತೆ, ಮೆರವಣಿಗೆ ಇತ್ಯಾದಿಗಳನ್ನು ಅತ್ಯಂತ ವೈಭವವಾಗಿ ಮಾಡಿ ಸಹಕರಿಸಿದ ಕ್ಷೇತ್ರದ ಸರ್ವ ಸ್ವಯಂಸೇವಕ ಭಕ್ತರ ಸೇವೆ ಅವಿಸ್ಮರಣೀಯ ಎಂದು ಬ್ರಹ್ಮರಥದ ಸೇವಾರ್ಥಿಗಳಲ್ಲಿ ಓರ್ವರಾದ ಯುವ ಉದ್ಯಮಿ ಅಜಿತ್ ಶೆಟ್ಟಿ ಹೇಳಿದರು.

Advertisement
Advertisement

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉದ್ಯಮಿ ಎನ್.ಮುತ್ತಪ್ಪ ರೈ ದೇರ್ಲ ಮತ್ತು ಯುವ ಉದ್ಯಮಿ ಅಜಿತ್ ಶೆಟ್ಟಿ ಕಡಬ ಸುಮಾರು ರೂ.2.50ಕೋಟಿ ವೆಚ್ಚದಲ್ಲಿ ಕಾಣಿಕೆಯಾಗಿ ಅರ್ಪಿಸಲಿರುವ ನೂತನ ಬ್ರಹ್ಮರಥದ ಪುರಪ್ರವೇಶ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣಕರ್ತರಾದ ಸ್ವಯಂಸೇವಕ ಭಕ್ತರಿಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಮತ್ತು ಬ್ರಹ್ಮರಥ ದಾನಿಗಳಿಂದ ಶುಕ್ರವಾರ ನಡೆದ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸರ್ವ ಭಕ್ತರ ಸಹಕಾರದಿಂದ ಬ್ರಹ್ಮರಥವು ಕೋಟೇಶ್ವರದಿಂದ ಕುಕ್ಕೆಯ ತನಕ ಅವಿಸ್ಮರಣೀಯ ಸ್ವಾಗತದ ಮೂಲಕ ಪುರಪ್ರವೇಶಿಸಲು ದುಡಿದ ಸರ್ವ ಭಕ್ತರಿಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಕೃಪಾಶಿರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಅಭೂತಪೂರ್ವ ಮೆರವಣಿಗೆಯೊಂದಿಗೆ ಸುಬ್ರಹ್ಮಣ್ಯಕ್ಕೆ ನೂತನ ಬ್ರಹ್ಮರಥ ಆಗಮಿಸಿದೆ.ಇದರ ಸುಸಂಪನ್ನತೆ ಸ್ವಯಂಸೇವಕ ಭಕ್ತ ವೃಂದದ ಸೇವೆ ಅವಿಸ್ಮರಣೀಯ.ಬ್ರಹ್ಮರಥದ ದಾನಿಗಳು ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಿದ ಭಕ್ತರಿಗೆ ಬೋಜನ ವ್ಯವಸ್ಥೆ ಮಾಡುವ ಮೂಲಕ ಅವರನ್ನು ಗುರುತಿಸುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ.ಸೇವೆಯನ್ನು ಗುರುತಿಸುವ ಕಾರ್ಯ ನಡೆದಾಗ ಮತ್ತಷ್ಟು ಸೇವೆ ಮಾಡಲು ಹುರುಪು ನೀಡುತ್ತದೆ. ನೂತನ ಬ್ರಹ್ಮರಥದ ಆಗಮನಕ್ಕಾಗಿ ಸೇವೆ ಸಲ್ಲಿಸಲು ದೊರಕಿರುವ ಅವಕಾಶ ನಮ್ಮೆಲ್ಲರ ಭಾಗ್ಯ.ಸರ್ವರೂ ಸೇರಿ ನಡೆಸಿದ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಂಡಿದೆ. ಕೋಟೇಶ್ವರದಿಂದ ಕುಕ್ಕೆಯ ತನಕ ಬ್ರಹ್ಮರಥದ ಪ್ರಯಾಣದ ವೇಳೆ ಅಭೂತಪೂರ್ವ ಭಕ್ತಿಪೂರ್ವಕ ಸ್ವಾಗತದೊಂದಿಗೆ ಸರ್ವ ಭಕ್ತರು ಬರಮಾಡಿಕೊಂಡ ರೀತಿಯ ಹೃದಯತುಂಬಿ ಬಂದಿದೆ.ಕುಕ್ಕೆಸುಬ್ರಹ್ಮಣ್ಯದಲ್ಲಿ ನೀಡಿದ ಅಭೂತಪೂರ್ವ ಸ್ವಾಗತ ನವ ಇತಿಹಾಸ ಸೃಷ್ಠಿಸಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ವೇದಿಕೆಯಲ್ಲಿ ಚಂದ್ರಹಾಸ ರೈ, ಡಾ.ಸ್ನೇಹಾ ಅಜಿತ್ ಶೆಟ್ಟಿ, ಬ್ರಹ್ಮರಥದ ಶಿಲ್ಪಿ ಕೋಟೇಶ್ವರ ರಾಜಗೋಪಾಲ ಆಚಾರ್ಯ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಬಳ್ಳೇರಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಕೃಷ್ಣಮೂರ್ತಿ ಭಟ್, ಮಹೇಶ್ ಕುಮಾರ್ ಕೆ.ಎಸ್ ಕರಿಕ್ಕಳ, ಮಾಧವ.ಡಿ, ರಾಜೀವಿ ಆರ್ ರೈ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಶ್ರೀ ದೇವಳದ ಅಭಿಯಂತರ ಉದಯ ಕುಮಾರ್, ಅಲಂಕಾರ ಸಮಿತಿ ಸಂಚಾಲಕ ರಾಜೇಶ್ ಎನ್.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮದಲ್ಲಿ ಸಹಕರಿಸಿದ ಪ್ರತಿಯೊಬ್ಬ ಭಕ್ತರಿಗೆ, ಸರಕಾರಿ ಇಲಾಖೆಗಳಿಗೆ, ಸಂಘ ಸಂಸ್ಥೆಗಳಿಗೆ ಕೃತಜ್ಞತೆಗಳನ್ನು ಗಣ್ಯರು ಸಮರ್ಪಿಸಿದರು.ಶಿವರಾಮ ರೈ ಸ್ವಾಗತಿಸಿದರು. ಚಂದ್ರಶೇಖರ ಪೇರಾಲ್ ವಂದಿಸಿದರು.ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group