ಕುಕ್ಕೆ ಸುಬ್ರಹ್ಮಣ್ಯಕ್ಕೆ ಶೀಘ್ರದಲ್ಲಿ ಬರಲಿದೆ ಬ್ರಹ್ಮರಥ

August 29, 2019
9:00 AM

ಸುಬ್ರಹ್ಮಣ್ಯ :ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾನಿಗಳ ನೆರವಿನಿಂದ ನಿರ್ಮಾಣವಾಗುತ್ತಿರುವ ನೂತನ ಬ್ರಹ್ಮರಥವನ್ನು ಮುಂದಿನ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ  ತರುವ ನಿರ್ಧಾರ ಹಾಗೂ ಮುಂದಿನ ತಿಂಗಳಲ್ಲಿ ಆದಿ ಸುಬ್ರಹ್ಮಣ್ಯದಲ್ಲಿ ನೂತನವಾಗಿ ನಿರ್ಮಾಣವಾದ 182 ಕೊಠಡಿಗಳಿರುವ ನೂತನ ವಸತಿಗೃಹವನ್ನು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

Advertisement
Advertisement
Advertisement
Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಚೇರಿಯ ಎರಡನೆ ಮಹಡಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆ ಬಳಿಕ ಅವರು ಸಭೆಯಲ್ಲಿ ಕೈಗೊಂಡ ಕೆಲ ನಿರ್ಧಾರಗಳ ಬಗ್ಗೆ ತಿಳಿಸಿದರು.ಕುಂದಾಪುರ ಕೋಟೇಶ್ವರದಲ್ಲಿ ನೂತನ ಬ್ರಹ್ಮರಥ ನಿರ್ಮಾಣವಾಗುತ್ತಿದ್ದು ರಥದ ಕೆಲಸ ಬಹುತೇಕ ಅಂತಿಮಗೊಂಡಿದೆ. ರಥವನ್ನು ಕುಕ್ಕೆಗೆ ಮುಂದಿನ ತಿಂಗಳು ತರುವ ಕುರಿತು ನಿರ್ಧರಿಸಲಾಗಿದೆ. ಆ.31 ರಂದು ದೇವಸ್ಥಾನದ ಆಡಳಿತ ಸಮಿತಿ ನೇತೃತ್ವದಲ್ಲಿ ನಿಯೋಗ ಕೋಟೇಶ್ವರಕ್ಕೆ ತೆರಳಲಿದೆ. ರಥ ತರುವ ರಸ್ತೆ- ಹೆದ್ದಾರಿ ಅನುಮತಿ ಇತ್ಯಾದಿಗಳ ಕುರಿತು ರಥ ಶಿಲ್ಪಿ, ರಥದ ದಾನಿಗಳ ಜತೆ ಅಲ್ಲಿ ಚರ್ಚೆ ನಡೆಸಿ ಬಳಿಕ ದಿನ ನಿಗದಿಪಡಿಸಿ ಶುಭಮಹೂರ್ತದಲ್ಲಿ ತರುವ ಕೆಲಸ ನಡೆಯುತ್ತದೆ ಎಂದರು.

Advertisement

ದೇವಸ್ಥಾನದ ಹೊರಾಂಗಣ ಸುತ್ತುಪೌಳಿ ಮರು ದುರಸ್ತಿ ಕಾರ್ಯವು ಟೆಂಡರು ಹಂತದಲ್ಲಿದೆ. ಅದು ಪ್ರಕ್ರಿಯೆ ಪೂರ್ಣಗೊಂಡಲ್ಲಿ ಅದರ ಕಾರ್ಯವನ್ನು ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ. ಕುಮಾರಸ್ವಾಮಿ ಅವರ ಮಹತ್ವಕಾಂಕ್ಷೆಯ ಚಿಣ್ಣದ ರಥ ನಿರ್ಮಾಣಕ್ಕೆ ಸಂಬಂದಿಸಿ ಶೀಘ್ರ ಅನುಮತಿ ದೊರೆತಲ್ಲಿ ನಿರ್ಮಾಣ ಕೆಲಸ ಆರಂಭಿಸಲಾಗುತ್ತದೆ. ರಥದ ಪೌಂಡೆಶನ್ ಇತ್ಯಾದಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.

ಆದಿ ಸುಬ್ರಹ್ಮಣ್ಯದಲ್ಲಿ ನೂತನವಾಗಿ 182 ಕೊಠಡಿಯ ವಸತಿಗೃಹ ನಿರ್ಮಾಣವಾಗಿ ಉದ್ಘಾಟನೆ ಬಾಕಿ ಉಳಿದಿದ್ದು ಅದನ್ನು ಅಕ್ಟೋಬರ್ ಮೊದಲ ವಾರದಲ್ಲಿ ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ. ವಸತಿಗೃಹಕ್ಕೆ ಪೀಠೋಪಕರಣ ಅಳವಡಿಸಲು ಗುತ್ತಿಗೆ ನೀಡಲಾಗಿದ್ದು ಜೋಡಿಸುವ ಕೆಲಸ ನಡೆಯುತ್ತಿದೆ. ತಿಂಗಳೊಳಗೆ ಪೂರ್ಣಗೊಳಿಸಿ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

Advertisement

ದೇಗುಲಕ್ಕೆ ಆಗಮಿಸುವ ಭಕ್ತರ ಹಿತ ಕಾಯುವ ಸಲುವಾಗಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು ಅವುಗಳಲ್ಲಿ ಹೆಚ್ಚಿನ ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಉಳಿದ ಕಾಮಗಾರಿಗಳಿಗೆ ವೇಗ ನೀಡುವ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ಅವರು ತಿಳಿಸಿದರು.

ದೇವಸ್ಥಾನದ ಕಾರ್ಯನಿರ್ವಾಹಣಾ„ಕಾರಿ ರವೀಂದ್ರ ಎಂ.ಎಚ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಕೇನ್ಯ ರವೀಂದ್ರನಾಥ ಶೆಟ್ಟಿ, ಮಹೇಶ್ ಕುಮಾರ್ ಕರಿಕ್ಕಳ, ರಾಜೀವಿ ರೈ ಆರ್, ದಮಯಂತಿ ಕೂಜುಗೋಡು, ಮಾಧವ. ಡಿ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |
February 25, 2025
8:40 PM
by: The Rural Mirror ಸುದ್ದಿಜಾಲ
ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ
February 25, 2025
7:10 AM
by: The Rural Mirror ಸುದ್ದಿಜಾಲ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror