ಕುಕ್ಕೆಯಲ್ಲಿ ತಪ್ಪಿದ ಬೆಂಕಿ ಅವಘಡ : ಅಂಗಿಯನ್ನೇ ರಕ್ಷಣಾ ಕಾರ್ಯದಲ್ಲಿ ಬಳಸಿದ ಗ್ರಾಪಂ ಸದಸ್ಯ

February 14, 2020
9:54 AM

ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯಲ್ಲಿ ಹುರಿದಿಟ್ಟ ಮಸಾಲೆ ಕಟಾರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಸಾರ್ವಜನಿಕರು,  ಗ್ರಾಪಂ ಸದಸ್ಯರೊಬ್ಬರು ಸೇರಿದಂತೆ ಸ್ಥಳೀಯ ಭಕ್ತಾದಿಗಳ ಕರ್ತವ್ಯ ಪ್ರಜ್ಞೆ ಅನಾಹುತ ತಪ್ಪಿಸಿತು.

Advertisement
Advertisement
Advertisement
Advertisement

ಆದದ್ದು ಏನು ?

Advertisement

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನಶಾಲೆಯಲ್ಲಿ ಹುರಿದಿಟ್ಟ ಮಸಾಲೆ ಕಟಾರದಲ್ಲಿ ತಡರಾತ್ರಿ  ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ಹೊತ್ತಿಕೊಂಡ ಬೆಂಕಿ ಬಳಿಯೇ ಸುಮಾರು ತುಂಬಿದ 30 ಕ್ಕೂ ಅಧಿಕ  ಗ್ಯಾಸ್ ಸಿಲಿಂಡರ್ ಕೂಡಾ ಇತ್ತು. ಅಪಾಯವನ್ನು ಅರಿತ ಸ್ಥಳೀಯರು ಜಾಗೃತರಾದರು.

ಭೋಜನಶಾಲೆಯಲ್ಲಿ ಬೆಂಕಿ ಗಮನಿಸಿದ ಸ್ಥಳೀಯರೊಬ್ಬರು ರಮೇಶ ಎನ್ನುವವರಿಗೆ ಕರೆ ಮಾಡಿದರು. ಈ ಸಂದರ್ಭ  ಸಮೀಪದ  ನೂಚಿಲದಲ್ಲಿ  ದೈವದ ನೇಮದಲ್ಲಿದ್ದ ಅವರು ಇತರರಿಗೂ ಮಾಹಿತಿ ನೀಡಿದರು. ತಕ್ಷಣವೇ ಅಲ್ಲಿದ್ದ ಸುಮಾರು 600 ರಷ್ಟು ಮಂದಿ  ದೇವಸ್ಥಾನದ ಭೋಜನ ಶಾಲೆಗೆ ಬಂದು ಬೆಂಕಿ ನಂದಿಸಿದರು. ಬಳಿಕ ಮಸಾಲೆ ಸಹಿತ ಭೋಜನಶಾಲೆಯಿಂದ ಹೊರಗೆ ತಂದು ಭೋಜನ ಶಾಲೆಯನ್ನು ಸ್ವಚ್ಛಗೊಳಿಸಲಾಯಿತು.

Advertisement

 ಬೆಂಕಿ ಹಿಡಿದ ಕಠಾರವನ್ನು ನಂದಿಸಲು ತಕ್ಷಣವೇ ಬಟ್ಟೆ ಸಿಗದೆ ಇದ್ದಾಗ ಗ್ರಾ.ಪಂ ಸದಸ್ಯ ಮಣಿಕಂಠ ಎಂಬವರು ಧರಿಸಿದ ಅಂಗಿ ಕಳಚಿ ಅದರ ಸಹಾಯದಿಂದ ಕಠಾರವನ್ನು ಹೊರಹಾಕಿದರು.

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಉತ್ಪಾದನೆ ಮತ್ತು ರಫ್ತಿಗೆ ಉತ್ತೇಜನ ನೀಡಲು ನೇಪಾಳ ಚಿಂತನೆ |
December 27, 2024
7:42 AM
by: The Rural Mirror ಸುದ್ದಿಜಾಲ
ಶಿರಾಡಿ ಘಾಟ್‌ ಸುರಂಗ ಮಾರ್ಗ | ಮತ್ತೆ ಸಮಗ್ರ ಯೋಜನಾ ವರದಿಗೆ ಜೀವ |
December 27, 2024
7:23 AM
by: The Rural Mirror ಸುದ್ದಿಜಾಲ
ಕಸ್ಟಮ್ಸ್‌ ಗೋದಾಮಿನಿಂದ ಅಡಿಕೆ ಹಾಗೂ ಕಾಳುಮೆಣಸು ಕಳವು |
December 27, 2024
6:56 AM
by: The Rural Mirror ಸುದ್ದಿಜಾಲ
ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror