ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಅಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭವು ಸುಬ್ರಹ್ಮಣ್ಯ ರಾಜೀವಗಾಂಧಿ ಸಭಾಂಗಣದಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಎನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್ ಎಸ್, ಕಲಾವಿದ ಯಜ್ಞೇಶ್ ಆಚಾರ್ಯ ಸುಬ್ರಹ್ಮಣ್ಯ ಠಾಣೆಯ ಉಪಠಾಣಾಧಿಕಾರಿ ಚಂದಪ್ಪ, ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ನೂತನ ಅಧ್ಯಕ್ಷ ಪುಟ್ಟಣ್ಣ ಕೆ.ಜಿ, ಕಾರ್ಯದರ್ಶಿ ಶೇಷಕುಮಾರ್ ಶೆಟ್ಟಿ, ಹಾಗೂ ನಿರ್ಗಮನ ಅಧ್ಯಕ್ಷ ಮಹಾಬಲ ರೈ, ಕಾರ್ಯದರ್ಶಿ ಸುಕುಮಾರ ಆರ್,ವಿ ಇದ್ದರು.
ಆದರ್ಶ ಸ್ವಾಗತಿಸಿ, ನವೀನ್ ಶೆಟ್ಟಿ ವಂದಿಸಿದರು. ಉಮೇಶ್ ದೇವರಗದ್ದೆ ಕಾರ್ಯಕ್ರಮ ನಿರೂಪಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel