ಕುಮಾರಪರ್ವತ ಚಾರಣದ ವೇಳೆ ಯುವಕ ನಾಪತ್ತೆ ಪ್ರಕರಣ : ಗಿರಿಗದ್ದೆ ಬಳಿ ಹುಡುಕಾಟ

September 17, 2019
12:08 PM

ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣಕ್ಕೆ ಹೋದ 12 ಜನ  ಯುವಕರ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್  ಭಾನುವಾರ ಸಂಜೆ ನಾಪತ್ತೆಯಾಗಿದ್ದಾರೆ. ಇದೀಗ ಹುಡುಕಾಟ ಆರಂಭವಾಗಿದ್ದು ಗಿರಿಗದ್ದೆ ಬಳಿ 9 ಜನರ ತಂಡ ಹುಡುಕಾಟ ನಡೆಸುತ್ತಿದೆ.

Advertisement
Advertisement
Advertisement

ಬೆಂಗಳೂರಿನ 12 ಜನರ ಚಾರಣಿಗರ ತಂಡವು ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಬೆಳೆಸಿ ರಾತ್ರಿ ಗಿರಿಗದ್ದೆಯಲ್ಲಿ  ವಾಸ್ತವ್ಯ ಹೂಡಿ ಭಾನುವಾರ ಬೆಳಗ್ಗೆ ಕುಮಾರಪರ್ವತ ಏರಿತ್ತು. ಮಧ್ಯಾಹ್ನದ ನಂತರ ವಾಪಾಸು ಗಿರಿಗದ್ದೆಗೆ ಬಂದು ಸಂಜೆ ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸಿತ್ತು.  ಮಳೆ ಸುರಿದ ಹಿನ್ನೆಲೆಯಲ್ಲಿ  ಜಾಕೆಟ್ ಬದಲಿಸಲೆಂದು ನಿಂತಿದ್ದ ಸಂತೋಷ್ ಬಳಿಕ ಪತ್ತೆಯಾಗಲಿಲ್ಲ ಎಂದು ತಂಡದ ಸದಸ್ಯರು ಹೇಳಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ ಬೆಳ್ಳಾರೆ ,ಸುಳ್ಯ , ಸುಬ್ರಹ್ಮಣ್ಯ ಹಾಗೂ ಪುತ್ತೂರು ಪೊಲೀಸರ ತಂಡ ಹಾಗೂ ಅರಣ್ಯ ಇಲಾಖೆಯ ಸಿಬಂದಿಗಳ ತಂಡ ಪರ್ವತದ ವಿವಿಧ ಕಡೆಗಳಲ್ಲಿ  ಹುಡುಕಾಟ ಆರಂಭಿಸಿದೆ. ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಇದೀಗ ಒಂದು ತಂಡ ಗಿರಿಗದ್ದೆ ಬಳಿ ಹುಡುಕಾಟ ನಡೆಸುತ್ತಿದೆ. 9 ಜನರ ತಂಡ ಇಲ್ಲಿದೆ. ಈ ತಂಡದಲ್ಲಿ  ಪುತ್ತೂರು ಎಸ್ ಐ ರಾಜ್ ಕುಮಾರ್ , ಸುಬ್ರಹ್ಮಣ್ಯ ಠಾಣೆಯ  ತಾರನಾಥ್ , ಸಂಪ್ಯ ಪೊಲೀಸ್ ಠಾಣೆಯ ಕಾನ್ಟೇಬಲ್ ಗಳು ಹಾಗೂ ಸ್ಥಳೀಯರಾದ ಸುಬ್ರಹ್ಮಣ್ಯ ಗ್ರಾಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಸಂಪತ್, ಜಯಪ್ರಕಾಶ್ ಸೇರಿದಂತೆ ಸ್ಥಳೀಯರು ಜೊತೆಗಿದ್ದಾರೆ.

Advertisement

ಬೆಳಗ್ಗಿನಿಂದ 5 ತಂಡಗಳಲ್ಲಿ ಹುಡುಕಾಟ ಆರಂಭವಾಗಿದೆ. ಪುತ್ತೂರು ಡಿ.ವೈ.ಎಸ್.ಪಿ ದಿನಕರ ಶೆಟ್ಟಿ,  ಬೆಳ್ಳಾರೆಯ ಎಸ್.ಐ ಈರಯ್ಯ, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್, ಸುಬ್ರಹ್ಮಣ್ಯ ಎ.ಎಸ್.ಐ ಚಂದಪ್ಪ, ಎಸ್.ಐ.ಹರೀಶ್ , ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದಲ್ಲಿ ಹುಡುಕಾಟ ನಡೆಯುತ್ತಿದೆ. ಚಾರಣ ನಡೆಸಿದ ಯುವಕರ ತಂಡ ಸುಬ್ರಹ್ಮಣ್ಯದಲ್ಲಿ ಹಾಗೂ ಕೆಲವು ಯುವಕರು ಹುಡುಕಾಟಕ್ಕಾಗಿ ಜೊತೆಯಲ್ಲಿ ತೆರಳಿದ್ದಾರೆ.

 

Advertisement

 

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆಗೆ 67 ಕೋಟಿ ರೂಪಾಯಿ ನಿರೀಕ್ಷೆ | ಕರ್ನಾಟಕ ಸರ್ಕಾರದಿಂದಲೂ ತನ್ನ ಪಾಲನ್ನು ಮೀಸಲಿಡಲು ಒತ್ತಾಯ |
January 24, 2025
8:57 PM
by: ದ ರೂರಲ್ ಮಿರರ್.ಕಾಂ
ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |
January 24, 2025
11:33 AM
by: ದ ರೂರಲ್ ಮಿರರ್.ಕಾಂ
ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ
January 24, 2025
6:49 AM
by: The Rural Mirror ಸುದ್ದಿಜಾಲ
ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror