ಸುಬ್ರಹ್ಮಣ್ಯ: ಐತಿಹಾಸಿಕ ಕುಲ್ಕುಂದದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಪ್ರಯುಕ್ತ ಮಹಾಗಣಪತಿ ಹೋಮ, ವರುಣ ಜಪ ಸಹಿತ ಪರ್ಜನ್ಯ ಹೋಮ,ಶ್ರೀ ಬಸವೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನೆರವೇರಿತು. ಅಲ್ಲದೆ ವಿಶೇಷವಾಗಿ ಏಕಾದಶ ರುದ್ರಾಭಿಷೇಕ, ಮಹಾಗಣಪತಿ ಹೋಮ, ಪರ್ಜನ್ಯ ಹೋಮ, ರಂಗಪೂಜೆ ಮತ್ತು ನಾಗತಂಬಿಲ ಸೇವೆಗಳು ನಡೆಯಿತು.
ಅಧಿಕಾರ ಸ್ವೀಕಾರ:
ಇದೇ ಸಂದರ್ಭದಲ್ಲಿ ಶ್ರೀ ದೇವಳದ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಸಮಾರಂಭ ನೆರವೇರಿತು.ಆಡಳಿತ ಮಂಡಳಿ ನೂತನ ಅಧ್ಯಕ್ಷ ಗಿರಿಧರ ಸ್ಕಂಧ ಅವರಿಗೆ ನಿರ್ಗಮನ ಅಧ್ಯಕ್ಷ ಶಿವಣ್ಣ ಗೌಡ ಜಾಡಿಮನೆ ಅಧಿಕಾರ ಹಸ್ತಾಂತರಿಸಿದರು.ಅಲ್ಲದೆ ವಾರ್ಷಿಕ ಲೆಕ್ಕಪತ್ರ ಮಂಡನೆ ನೆರವೇರಿತು.ಸಮಾರಂಭದಲ್ಲಿ ಶ್ರೀ ಬಸವೇಶ್ವರ ದೇವಳದ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ್ ಸ್ಕಂಧ ವಹಿಸಿದ್ದರು.ವಾಸ್ತುಶಿಲ್ಪಿ ಎಸ್.ಎಂ.ಪ್ರಸಾದ್ ಮುನಿಯಂಗಳ, ಕಲಾವಿದ ಕೆ.ಯಜ್ಞೇಶ್ ಆಚಾರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದೇವರಾಜ್ ಕೆ.ಎಸ್, ಅಧ್ಯಕ್ಷ ಎನ್.ಕೆ.ಮನೋಹರ ನಾಳ, ಬ್ರಹ್ಮಕಲಶೋತ್ಸವ ಸಮಿತಿಯ ಎ.ವೆಂಕಟ್ರಾಜ್, ರವೀಂದ್ರ ಕುಮಾರ್ ರುದ್ರಪಾದ, ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಶಿವಣ್ಣ ಗೌಡ ಜಾಡಿಮನೆ, ದಿನೇಶ್ ಬಿ.ಎನ್, ನಾಗೇಶ್ ಕೈಕಂಬ, ಗುಡ್ಡಪ್ಪ ಗೌಡ ಬೀಡಿನಗದ್ದೆ, ಶೀನಪ್ಪ ಗೌಡ ನಡುತೋಟ, ಶಿವರಾಮ ಪಳ್ಳಿಗದ್ದೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.