ಕೃಷಿ ಕೊಳದಲ್ಲಿ ಮೀನು ಸಾಕಾಣಿಕೆ ಸುಲಭ ಸಾಧ್ಯ…

October 19, 2019
9:00 AM

ಕೃಷಿಕರು ಅಡಿಕೆ, ಮಾವು, ಪೇರಳೆ, ಕೊಕೋ, ಲವಂಗ, ತೆಂಗು ಇತ್ಯಾದಿಗಳ ಜೊತೆಗೆ ಕೃಷಿ ನೀರುಣಿಸುವ ಕೃಷಿ ಕೊಳಗಳ ಮೂಲಕವೂ ಮೀನು ಸಾಕಾಣಿಕೆ ಮಾಡಿ ಆದಾಯ ಗಳಿಸಬಹುದಾಗಿದೆ.  ಈ ಬಗ್ಗೆ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ತಜ್ಞರು  ಕೃಷಿ ಭೂಮಿಗೆ ಭೇಟಿ ನೀಡಿ ಜಮೀನಿನ ಕೊಳಗಳಲ್ಲಿ ಮೀನು ಕೃಷಿ ಮಾಡುವ ಬಗ್ಗೆ ರೈತರಿಗೆ ಸಲಹೆ ಸೂಚನೆ ನೀಡಿದರು.

ಪ್ರೊ. ಡಾ. ರಾಮಚಂದ್ರ ನಾಯ್ಕ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಚೇತನ್ ಎನ್. ಅವರು  ಬಾಯಾರು ಗ್ರಾಮದ ನಿವಾಸಿ, ವಕೀಲ ರಾಮಚಂದ್ರ ಭಟ್ ಅವರ ಜಮೀನಿಗೆ ಭೇಟಿ ನೀಡಿದರು.    ಕ್ಷೇತ್ರದ ಭೇಟಿಯ ಸಮಯದಲ್ಲಿ ವಿವಿಧ ಕೃಷಿ ಹಾಗೂ ಕೃಷಿಯೇತರ ಪದ್ದತಿಗಳ ಅಳವಡಿಕೆಗಳ ಬಗ್ಗೆ ಜೊತೆ ಮುಕ್ತವಾಗಿ ಚರ್ಚಿಸಿದರು.

ಬಾಯಾರು ಗ್ರಾಮದ ರಾಮಚಂದ್ರ ಭಟ್ ಎಂಬವರ ಕೃಷಿ ಭೂಮಿಗೆ ಭೇಟಿ ನೀಡಿದ ತಜ್ಞರ ತಂಡ ಚರ್ಚಿಸಿದರು. ಇಲ್ಲಿನ ಕೃಷಿಕರು ಅಡಿಕೆ, ಮಾವು, ಪೇರಳೆ, ಕೊಕೋ, ಲವಂಗ, ತೆಂಗು, ಮೆಣಸು, ಹಲಸು, ಬಾಳೆ, ಪುನ್ನಾರ್ಪುಳಿ, ಜೀಗುಜ್ಜೆ, ಚಿಕ್ಕು, ಬೆಟ್ಟದನೆಲ್ಲಿ, ಮೆಣಸು, ಜೇನು, ಜಾನುವಾರು, ಇತ್ಯಾದಿ ಬಗೆಯ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಈ ಭೂಮಿಯಲ್ಲಿ ನೀರು ಶೇಖರಣೆ ಮಾಡಲು ಅಲ್ಲಲ್ಲಿ ಹೊಂಡ, ಕೊಳ, ಕೆರೆ ಇತ್ಯಾದಿಗಳನ್ನು ಸಂರಕ್ಷಿಸಿದ್ದಾರೆ. ಇವುಗಳು ಕೇವಲ ನೀರಿಗಾಗಿ ಮತ್ತು ತೋಟದ ಗಿಡ-ಮರಗಳಿಗೆ ನೀರು ಹಾಯಿಸಲು ಮಾತ್ರ ಎಂದುಕೊಂಡ ರಾಮಚಂದ್ರ ಭಟ್ ರವರು ಮೀನುಗಾರಿಕಾ ಪದವಿಧರ ಗುರುರಾಜ್ ರವಲ್ಲಿ ಆಕಸ್ಮಿಕವಾಗಿ ಚರ್ಚಿಸಿ ಸೂಕ್ತವಾಗಿ ಬಳಸಿಕೊಳ್ಳಲು ಯೋಚಿಸಿದ್ದರು.

ಅದಕ್ಕೆ ಸೂಕ್ತವಾದ ಮಾಹಿತಿ ಪಡೆಯಲು ಮೀನುಗಾರಿಕಾ ಕಾಲೇಜಿನ ವಿಷಯ ತಜ್ಞ ಹಾಗೂ ಪ್ರೊಫೆಸರ್  ಡಾ. ರಾಮಚಂದ್ರ ನಾಯ್ಕರಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ ಕ್ಷೇತ್ರ ಬೇಟಿಗೆ ಮುಂದಾದರು. ಇವರು ಕೃಷಿ ವಿಜ್ಞಾನ ಕೇಂದ್ರದ ಮಾಜಿ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ ಅನುಭವವುಳ್ಳವರು ಹಾಗೂ ರೈತರಿಗೆ ಸಮಗ್ರ ಮೀನು ಕೃಷಿ ಪದ್ದತಿಗಳನ್ನು ಅಳವಡಿಕೆಗಳಲ್ಲಿ ವೈಜ್ಞಾನಿಕ ಸಲಹೆ ನೀಡಿಕೊಂಡು ಬಂದವರು.

ಜಮೀನಿನ ಮಾಲಿಕ ರಾಮಚಂದ್ರ ಭಟ್ ಈ ರೀತಿಯ ಕೃಷಿ ಭೂಮಿಯಲ್ಲಿನ ನೀರು ಶೇಖರಣೆಯ ಪ್ರದೇಶವು ಮೀನು ಸಾಕಾಣೆಮಾಡಲು ಹೇಗೆ ಉಪಯೋಗವಾಗುತ್ತದೆಂಬ ಸಂದೇಹದಲ್ಲಿದ್ದರು. ಇದಕ್ಕೆ ಮಾಹಿತಿ ತಿಳಿಸಿದ ವಿಷಯ ತಜ್ಞರು ಈ ನೀರಿನ ಪ್ರದೇಶಗಳ ಯೋಗ್ಯತೆಯ ಬಗ್ಗೆ ಕೂಲಂಕುಷವಾಗಿ ಮಹಿತಿ ನೀಡಿ ಜಮೀನಿನ ಉದ್ದಗಲಕ್ಕೂ ತಿರುಗಿ ಸಂಪನ್ಮೂಲದ ವೀಕ್ಷಿಣೆ ಮಾಡಿ ಸೂಕ್ತ ಸಲಹೆಯನ್ನು ನೀಡಿದರು. ಸಮಗ್ರ ಕೃಷಿ ಪದ್ದತಿಯಲ್ಲಿ ಎಲ್ಲಾ ಬಗೆಯ ಬೆಳೆಗಳನ್ನು ಕಡಿಮೆ ಪ್ರದೇಶದಲ್ಲಿ ಬೆಳೆಯುವುದರಿಂದ ಹೆಚ್ಚು ಅದಾಯವನ್ನು ಪಡೆಯುವುದರೊಂದಿಗೆ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿಯಾಗಲು ನೆರವಾಗಬಹುದಾದ ಮಾಹಿತಿಯನ್ನು ತಿಳಿಸಿಕೊಟ್ಟರು. ವಿವಿಧ ಬೆಳೆಗಳಿಗೆ ನೀರನ್ನು ಬಳಸುವ ಸಲುವಾಗಿ ಮೀಸಲಿಟ್ಟ ನೀರಿರುವ ಪ್ರದೇಶಗಳನ್ನು ಸಿಹಿನೀರು ಅಥವಾ ಚಪ್ಪೆನೀರಿನ ಮೀನುಗಳನ್ನು ಸಾಕಲು ಉಪಯೊಗಿಸುವುದರಿಂದ ಅನ್ಯ ಕೃಷಿ ಬೆಳೆಗಳಿಗೆ ಯಾವುದೇ ತೊಂದರೆಮಾಡದೆ ಸಂಪನ್ಮೂಲವನ್ನು ಸದ್ಬಳಕೆ ಮಾಡಿ ವೈಜ್ಞಾನಿಕ ರೀತಿಯ ಕೃಷಿ ಬೆಳೆಗಳನ್ನು ಮಾಡಿ ಹೆಚ್ಚಿನ ಅದಾಯವನ್ನು ಪಡೆಯಬಹುದಾಗಿದೆ ಎಂದರು.

ಇಂತಹ ನೀರು ಶೇಖರಿಸಿದ ಹೊಂಡಗಳಲ್ಲಿ ಕನಿಷ್ಟ 8 ರಿಂದ 9 ತಿಂಗಳುಗಳವರೆಗೆ ನೀರಿದ್ದಲ್ಲಿ ಮೀನು ಕೃಷಿಗೆ ಸೂಕ್ತವಾದುದು. ಮೀನುಕೃಷಿಯ ಮೀನು ಮರಿಗಳನ್ನು ಕೊಳದಲ್ಲಿ ಬಿತ್ತನೆ ಮಾಡುವ ಮುನ್ನ ಹೊಂಡಗಳಲ್ಲಿನ ಕಳೆ ಮೀನು, ಭಕ್ಷಕ ಮೀನು, ಕಪ್ಪೆ, ಜಲಚಿಟ್ಟೆ ಮುಂತಾದವುಗಳನ್ನು ತೆಗೆದು ಸಮವಾದ ತಳಬಾಗವನ್ನು ರಚಿಸುವುದು ಸೂಕ್ತ.

ಮೀನುಮರಿ ಬಿತ್ತನೆ ಸಮಯಕ್ಕೆ ಸರಿಯಾಗಿ ಮೀನುಗಾರಿಕಾ ಮಹಾವಿದ್ಯಾಲಯದ ಜಲ ಪರಿಸರ ನಿರ್ವಹಣೆ ವಿಭಾಗದಲ್ಲಿ ಡಾ. ರಾಮಚಂದ್ರ ನಾಯ್ಕರವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಯ ಸಂಶೋಧನಾ ವಿದ್ಯಾರ್ಥಿಗಳಾದ  ಕಿಶೋರ್ ಸಿ. ಮತ್ತು ಪ್ರವೀಣ್ ಜೋಶಿ ಎಚ್.ಎಸ್. ಸಹಕರಿಸಿದರು.  ಸಾರ್ವಜನಿಕರು  ತಮ್ಮ ಜಮೀನುಗಳಲ್ಲಿ ಇಂತಹ ಅವಕಾಶವಿದ್ದರೆ, ಸಂಭಂದಪಟ್ಟ ತಜ್ಞರನ್ನು (ಮೊಬೈಲ್ ನಂಬರ್ 99169 24084)ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ
March 16, 2025
7:53 AM
by: The Rural Mirror ಸುದ್ದಿಜಾಲ
ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ
March 16, 2025
7:36 AM
by: The Rural Mirror ಸುದ್ದಿಜಾಲ
ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
March 16, 2025
7:29 AM
by: The Rural Mirror ಸುದ್ದಿಜಾಲ
ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror