ಕೃಷಿ ನೀರಿನ ತೊಟ್ಟಿಯಲ್ಲಿ ಯಶಸ್ಸು ಕಂಡ ಬಳ್ಪದ ಕೃಷಿಕ

September 8, 2019
3:00 PM

ಬಳ್ಪ: ಕೃಷಿ ನೀರಿನ ತೊಟ್ಟಿಯಿಂದ ಕೃಷಿ ಭೂಮಿಯಲ್ಲಿ ಯಶಸ್ಸು ಕಂಡ ಕೃಷಿಕ ಬಳ್ಪ ಗ್ರಾಮದ ಪಠೋಳಿ ಕೃಷ್ಣ ಭಟ್. ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ನೀರು ಸಂಗ್ರಹಣಾ ಘಟಕ ಯೋಜನೆಯಡಿ ಸುಳ್ಯ ತಾಲೂಕಿನ ಬಳ್ಪ ನಿವಾಸಿ ಪಿ. ಕೃಷ್ಣ ಭಟ್ ಇವರು ನೀರಾವರಿ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಇಲಾಖಾ ಅಧಿಕಾರಿಗಳು ಇಲಾಖೆಯ ಸಹಾಯಧನದ ಮೂಲಕ ನೀರು ಸಂಗ್ರಹಣಾ ತೊಟ್ಟಿ ರಚನೆ ಮಾಡಿ ಬೇಸಿಗೆ ಕಾಲದಲ್ಲಿ ಕೃಷಿ ಭೂಮಿಯನ್ನು ಸುಸ್ಥಿತಿಯಲ್ಲಿ ಇಡಬಹುದೆಂಬ ಮಾಹಿತಿಯನ್ನು ನೀಡಿದರು.

Advertisement
Advertisement

ಅವರು ಇಲಾಖಾ ಮಾರ್ಗಸೂಚಿ ಅನ್ವಯ ಸುಮಾರು 20 * 20 * 3 ಮೀಟರ್ ಅಳತೆಯಲ್ಲಿ ಕೃಷಿ ಹೊಂಡ ಮಾಡಿ ಪ್ಲಾಸ್ಟಿಕ್ ಹೊದಿಕೆ ಹಾಕಿ ನೀರು ಸಂಗ್ರಹಣಾ ತೊಟ್ಟಿ ರಚಿಸಿದರು. ಇದಕ್ಕೆ ಶೇ. 50ರ ಸಹಾಯಧನದಂತೆ ರೂ. 67,094.00 ಗಳನ್ನು ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಸಹಾಯಧನವಾಗಿ ನೀಡಲಾಯಿತು. ಇಲಾಖಾ ವತಿಯಿಂದ ಅವರಿಗೆ ಆರ್ಥಿಕ ನೆರವು ದೊರೆಯಿತು.

Advertisement

ಸರಕಾರ ನೀಡಿರುವ ಸಹಾಯಧನ ಮತ್ತು ಸ್ವಂತದ ಒಂದಿಷ್ಟು ಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದೇನೆ. 2018-19 ನೇ ಸಾಲಿನ ಬೇಸಿಗೆ (ಏಪ್ರಿಲ್-ಮೇ) ಯಲ್ಲಿ ಸುಳ್ಯ ತಾಲೂಕಿನಾದ್ಯಂತ ಬರದ ಪರಿಸ್ಥಿತಿ ಮೂಡಿದಾಗ ಸಹಾಯಧನದಡಿ ನಿರ್ಮಿಸಿದ ನೀರು ಸಂಗ್ರಹಣಾ ತೊಟ್ಟಿಯಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದ್ದ ಕಾರಣ ಬರದ ನಡುವೆಯೂ ಎರಡರಿಂದ ಮೂರು ಸಲ ತೋಟಕ್ಕೆ ನೀರು ಕೊಡಲು ಸಾಧ್ಯವಾಯಿತು. ಹಾಗಾಗಿ ಅಡಿಕೆ ಮತ್ತು ಕಾಳುಮೆಣಸು ತೋಟವು ಬರದ ನಡುವೆಯೇ ಹಸಿರುಮಯವಾಗಿ ಕಂಗೊಳಿಸುತ್ತಾ ಹೆಚ್ಚಿನ ಬೆಳವಣಿಗೆಯ ಆಶಾಭಾವನೆ ಮೂಡಿಸಿದೆ. ಈ ವರ್ಷದಲ್ಲಿ 30-50% ಅಧಿಕ ಇಳುವರಿ ಪಡೆಯಬಹುದೆಂದು ಆಶಾಭಾವನೆ ಮೂಡಿದೆ” ಎಂದು ಕೃಷ್ಣ ಭಟ್‍ರವರು ತಮ್ಮ ಅಭಿಪ್ರಾಯ ತಿಳಿಸಿರುತ್ತಾರೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹೇಳುತ್ತಾರೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ CET ಫಲಿತಾಂಶ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
May 20, 2024
2:34 PM
by: The Rural Mirror ಸುದ್ದಿಜಾಲ
ಲೋಕಸಭೆ ಸಮರ : ಇಂದು 5 ನೇ ಹಂತದ ಮತದಾನ : 8 ರಾಜ್ಯಗಳ 49 ಕ್ಷೇತ್ರಗಳಲ್ಲಿ ಮತದಾನ
May 20, 2024
2:21 PM
by: The Rural Mirror ಸುದ್ದಿಜಾಲ
Karnataka Weather | 20-05-2024 | ಕರಾವಳಿಯಾದ್ಯಂತ ಮುಂಗಾರು ರೀತಿಯ ವಾತಾವರಣ | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಪರಿಣಾಮ ಮುಂಗಾರು ದುರ್ಬಲವಾಗುವ ಸಾಧ್ಯತೆ |
May 20, 2024
11:16 AM
by: ಸಾಯಿಶೇಖರ್ ಕರಿಕಳ
Open Talk | ಆರಂಭದ ಮಳೆ ಹಾಗೂ ಗ್ರಾಮೀಣ ಭಾಗದಲ್ಲಿ ಕೈಕೊಡುವ ವಿದ್ಯುತ್..!‌ | ಪರಿಹಾರ ಏನು..?
May 20, 2024
11:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror