ಸುಳ್ಯ: ಸುಳ್ಯದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಜರುಗಿತು.
ಕೆ.ವಿ.ಜಿ.ದಂತ ಮಹಾವಿದ್ಯಾಲಯದ ಪೀರಿಯೋಡಾಂಟ್ರಿಕ್ ವಿಭಾಗ ಮುಖ್ಯಸ್ಥ ಡಾ.ದಯಾಕರ.ಎಂ.ಎಂ ಉದ್ಘಾಟಿಸಿದರು. ಕೆ.ವಿ.ಜಿ.ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ.ಯಶೋದಾ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಾಪ್ತಿ ಮತ್ತು ಆಶಯ ಪ್ರಾರ್ಥನೆಗೈದರು. ಶಾಲಾ ಪ್ರಾಚಾರ್ಯರಾದ ಸುನಿಲ್ ಕುಮಾರ್.ಕೆ.ಸಿ.ಎಲ್ಲರನ್ನೂ ಸ್ವಾಗತಿಸಿದರು. ಆಕರ್ಷಕ ಪಥ ಸಂಚಲನದೊಂದಿಗೆ ಕ್ರೀಡಾ ಜ್ಯೋತಿಯನ್ನು ಬೆಳಗಿಸಲಾಯಿತು. ಲಕ್ಷ್ಮೀ ಲಾವಣ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಕೆ.ವಿ.ಜಿ.ಐ.ಟಿ.ಐ ನ ಪ್ರಾಚಾರ್ಯ ಚಿದಾನಂದ ಬಾಳಿಲ, ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಬಿ.ಟಿ.ಮಾಧವ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯರಾದ ಶಿಲ್ಪಾ ಬಿದ್ದಪ್ಪ ಹಾಗೂ ನಯನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಚಿಣ್ಣರಿಂದ ಆಕರ್ಷಕ ಏರೋಬಿಕ್ಸ್ ನೃತ್ಯ ಮೂಡಿಬಂತು. ಶಾಲೆಯ ನಾಲ್ಕು ತಂಡಗಳಾದ ಯೆಲ್ಲೋ ಡೈಮಂಡ್, ಬ್ಲೂ ಸಫೈರ್, ಗ್ರೀನ್ ಎಮರಾಲ್ಡ್ ಹಾಗೂ ರೆಡ್ ರೂಬಿ ಇವುಗಳ ನಡುವೆ ನಡೆದ ಪೈಪೋಟಿಯಲ್ಲಿ ಬ್ಲೂ ಸಫೈರ್ ಪ್ರಥಮ ಸ್ಥಾನ ಗಳಿಸಿ ಯೆಲ್ಲೋ ಡೈಮಂಡ್ ಎರಡನೇ ಸ್ಥಾನ ಪಡೆದುಕೊಂಡಿತು.