ಸುಳ್ಯ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸುಳ್ಯದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಯೋಗ ಮತ್ತು ಪ್ರಾಣಾಯಾಮ ಶಿಬಿರಗಳು ನಡೆದವು. ಶಾಲೆಯ ಪ್ರಾಚಾರ್ಯರಾದ ಸುನಿಲ್ ಕುಮಾರ್.ಕೆ.ಸಿ.ಅವರು ವಿದ್ಯಾರ್ಥಿ ಜೀವನದಲ್ಲಿ ಯೋಗದ ಮಹತ್ವ ಹಾಗೂ ಪ್ರಯೋಜನದ ಬಗ್ಗೆ ತಿಳಿಸಿಕೊಟ್ಟರು.
ನಂತರ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಸನಗಳು ಮೂಡಿಬಂದವು. ಉಜಿರೆಯ ಶ್ರೀ ಧರ್ಮಸ್ಥಳ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಪ್ರಶಿಕ್ಷಕರಾದ ನಿಭಾ ಮತ್ತು ನಿಶಾ ಹಾಗೂ ಕೆ.ವಿ.ಜಿ.ತಾಂತ್ರಿಕ ಮಹಾ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್ ಬೇಲೆಗದ್ದೆ ಯೋಗ ತರಬೇತಿ ನೀಡಿದರು. ಶಾಲೆಯ ಎಲ್ಲಾ ಶಿಕ್ಷಕರೂ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ತೀರ್ಥವರ್ಣ ಹಾಗೂ ಚೈತ್ರಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel