ಆದುನಿಕ ಜಗತ್ತು ವೇಗವಾಗಿ ಬೆಳೆದಂತೆ ಮಣ್ಣು, ನೀರು, ಗಾಳಿ ಪರಿಸರದಿದ ದೂರವಾಗುವ ಪರಿಸ್ಥಿತಿ ಬರುತ್ತಿದೆ. ಹೀಗಾಗಿ ಇವುಗಳ ಮೇಲಿನ ಪ್ರೀತಿ ದೂರವಾಗುತ್ತಿದೆ. ಈ ಕಾರಣದಿಂದ ಮಣ್ಣು ಮಲಿನವಾಗುತ್ತಿದೆ, ಗಾಳಿ ಮಲಿನವಾಗುತ್ತಿದೆ, ನೀರು ಬರಿದಾಗುತ್ತಿದೆ, ಪರಿಸರದ ಮೇಲೆ ಪ್ರೀತಿ ಕಡಿಮೆಯಾಗುತ್ತಿದೆ. ಇಂತಹ ಹೊತ್ತಿನಲ್ಲಿ ಈಗ ವಿವಿದೆಡೆ ಮಣ್ಣಿನ ಜೊತೆ ಸಂಬಂಧ ಹೊಂದುವ, ಮೈಯೆಲ್ಲಾ ಮಣ್ಣಾಗುವ ಆಟಗಳ ಕಡೆಗೆ ಕೆಲವು ಯುವಕ ಸಂಘಗಳು ಮಾಡುತ್ತಿವೆ. ಈ ಕಾರಣದಿಂದ ಯುವಕರಿಗೆ
Advertisement
ಸುಳ್ಯ: ಗರುಡ ಯುವಕ ಮಂಡಲ ಚೊಕ್ಕಾಡಿ ಮತ್ತು ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರ ಜಂಟಿ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ ‘ಕೆಸರುಡೊಂಜಿ ದಿನ’ ಚೊಕ್ಕಾಡಿ ವಠಾರದ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೆಸರುಡೊಂಜಿ ದಿನ ದಲ್ಲಿ ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ,ಮಕ್ಕಳಿಗೆ, ಹಿರಿಯ ನಾಗರಿಕರಿಗೆ,ದಂಪತಿಗಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ಕೆಸರಿನಲ್ಲಿ ಮಿಂದೆದ್ದ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಹೀಗಾಗಿ ಎಳೆಯರಿಂದ ತೊಡಗಿ ಹಿರಿಯರವರೆಗೂ ಕೆಸರಿನಲ್ಲಿ ಮಿಂದೆದ್ದರು. ಆಟವಾಡಿದರು, ಓಡಿದರು, ಕುಣಿದಾಡಿದರು. ಹಿರಿಯರು ಕೆಸರಿನಲ್ಲಿ ಓಡುವ ಬಗ್ಗೆ ಹೇಳಿದರು, ಕಿರಿಯರು ಓಡಿ, ಹಾರಿ ಅನುಭವಿಸಿದರು. ಇಡೀ ದಿನ ಮೈಗೆ ಕೆಸರು ಮೆತ್ತಿಕೊಂಡು ಸಂತಸಪಟ್ಟರು.
ಕುಸುಮಾಧರ ಕೊಳಂಬೆ ತೆಂಗಿನಕಾಯಿ ಒಡೆಯುವುದರ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಉಷಾಲತಾ ಪಡ್ಪು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ ಪೆರಾಜೆ, ಗರುಡ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶ್ರೀಧರ ಕರ್ಮಜೆ, ಪ್ರಗತಿಪರ ಕೃಷಿಕ ರಾಮಚಂದ್ರ ಪಡ್ಪು, ಜಯಪ್ರಕಾಶ್ ದೊಡ್ಡಿಹಿತ್ಲು ಉಪಸ್ಥಿತರಿದ್ದರು. ಸತೀಶ್ ಪಿಲಿಕಜೆ ಸ್ವಾಗತಿಸಿ, ಮನೋಜ್ ಪಡ್ಪು ವಂದಿಸಿದರು.ತೀರ್ಥೇಶ್ ನಾರ್ಣಕಜೆ ನಿರೂಪಿಸಿದರು.
ಸಂಜೆ ನಡೆದ ಸನ್ಮಾನ ಮತ್ತು ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಗರುಡ ಯುವಕ ಮಂಡಲದ ಅಧ್ಯಕ್ಷ ಸತೀಶ ಪಿಲಿಕಜೆ ವಹಿಸಿದ್ದರು. ಮೆಸ್ಕಾಂನ ಕಿಶೋರ್ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಜಿ ಉಪನಿರ್ದೇಶಕಿ ಶೀಲಾವತಿ ಕೊಳಂಬೆ ಸನ್ಮಾನ ನೆರವೇರಿಸಿದರು. ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹರೀಶ್ ನಾಯ್ಕ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿ ಗಳಾಗಿ ಯುವಜನ ಸಂಯುಕ್ತ ಮಂಡಳಿಯ ಕಾರ್ಯದರ್ಶಿ ತೇಜಸ್ವಿ ಕಡಪಳ, ಗರುಡ ಯುವಕ ಮಂಡಲ ಚೊಕ್ಕಾಡಿಯ ಗೌರವಾಧ್ಯಕ್ಷ ಮುರಳಿ ಚಿಕ್ಕಿನಡ್ಕ ಉಪಸ್ಥಿತರಿದ್ದರು.
ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಉಷಾಲತಾ ಪಡ್ಪು ಸ್ವಾಗತಿಸಿ, ರಕ್ಷತ್ ಕರ್ಮಜೆ ಧನ್ಯವಾದಗೈದರು. ಧರ್ಮಪಾಲ ಶೇಣಿ ಕಾರ್ಯಕ್ರಮ ನಿರೂಪಿಸಿದರು.