ಕೇರಳ-ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ ಐಸಿಸ್‌ ಉಗ್ರರು…..! ವಿಶ್ವಸಂಸ್ಥೆ ಎಚ್ಚರಿಸಿದ ವರದಿ…..!

July 25, 2020
9:32 PM

ಭಯೋತ್ಪಾದನೆ ಕುರಿತ  ವಿಶ್ವಸಂಸ್ಥೆಯ ವರದಿಯು ಕೇರಳ ಮತ್ತು ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯ ಐಸಿಸ್ ಭಯೋತ್ಪಾದಕರು ಇದ್ದಾರೆ ಎಂದು ಎಚ್ಚರಿಸಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ 150 ರಿಂದ 200 ಉಗ್ರರನ್ನು ಹೊಂದಿರುವ ಭಯೋತ್ಪಾದಕ ಗುಂಪಿನಲ್ಲಿರುವ ಅಲ್-ಖೈದಾ ವಿವಿಧ ಪ್ರದೇಶದಲ್ಲಿ ದಾಳಿ ಯೋಜಿಸುತ್ತಿದೆ ಎಂದು ಈ ವರದಿ ಎಚ್ಚರಿಸಿದೆ.

ವಿಶೇಷವಾಗಿ  ಕರ್ನಾಟಕ ಮತ್ತು ಕೇರಳದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಐಸಿಸ್ ಭಯೋತ್ಪಾದಕರು ನೆಲೆ ಕಂಡುಕೊಂಡಿದ್ದಾರೆ  ಎಂದು ವಿಶ್ವ ಸಂಸ್ಥೆಯ ವರದಿ ಉಲ್ಲೇಖಿಸಿದೆ.

ಐಸಿಸ್, ಅಲ್-ಖೈದಾ ಮತ್ತು ಇತರ ವ್ಯಕ್ತಿಗಳು ಮತ್ತು ಘಟಕಗಳು ಈ ತಂಡಕ್ಕೆ ಬೆಂಬಲ ನೀಡುತ್ತಿದ್ದು2-3 ಉಗ್ರ ಸಂಘಟನೆಗಳು ಜೊತೆಯಾಗಿ ತ್ರಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿರುವ ಈ ವರದಿ ಅಲ್ ಖೈದಾ ಗುಂಪಿನ ನಾಯಕ ಆಸಿಮ್ ಉಮರ್  ಮೃತಪಟ್ಟ ನಂತರ ಇದರ ನಾಯಕತ್ವವನ್ನು ಭಾರತದಲ್ಲಿ ಒಸಮಾ ಮೊಹಮ್ಮದ್ ವಹಿಸಿಕೊಂಡಿದ್ದಾನೆ. ಈತ ಮಾಜಿ ನಾಯಕನ ಸಾವಿಗೆ ಪ್ರತೀಕಾರದ ಕಾರ್ಯಾಚರಣೆಯನ್ನು ಯೋಜಿಸುತ್ತಿದ್ದಾನೆ ಎಂದು ವರದಿ ಮಾಡಿದೆ.‌ ಇದಕ್ಕಾಗಿ ಈ ಗುಂಪಿನಲ್ಲಿ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ ಮತ್ತು ಪಾಕಿಸ್ತಾನದ 150 ರಿಂದ 200 ಸದಸ್ಯರು ಇದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ, ಇಸ್ಲಾಮಿಕ್ ಸ್ಟೇಟ್  ಭಯೋತ್ಪಾದಕ ಗುಂಪು ಭಾರತದಲ್ಲಿ ಹೊಸ ಪ್ರಾಂತ್ಯ ವನ್ನು ಸ್ಥಾಪಿಸಿದೆ ಎಂದು ಹೇಳಿಕೊಂಡಿದೆ, ಇದು ಕಾಶ್ಮೀರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯ ನಂತರ ಬಂದ ಮೊದಲ ರೀತಿಯ ಘೋಷಣೆಯಾಗಿದೆ. ಇದೀಗ ಸಂಘಟನೆಯ ಪ್ರಮುಖರು ಹಾಗೂ ಸದಸ್ಯರು ಕರ್ನಾಟಕ ಹಾಗೂ ಕೇರಳದಲ್ಲಿ ನಲೆಯೂರಿದ್ದಾರೆ ಎಂದು ವಿಶ್ವ ಸಂಸ್ಥೆಯ ವರದಿಯಲ್ಲಿ  ತಿಳಿಸಲಾಗಿದೆ.

( ಮೂಲ: ಪಿಟಿಐ)

 

 

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ
ಮಹಾಕುಂಭದ ವೇಳೆ ಗಂಗಾ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು |
March 10, 2025
10:32 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಲೆ ಏರಿಕೆಯಾಗುವ ಸುದ್ದಿ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸದ್ದಾಗುತ್ತಿದೆ….!
March 10, 2025
8:07 AM
by: ದ ರೂರಲ್ ಮಿರರ್.ಕಾಂ
ಅಂತಾರಾಷ್ಟ್ರೀಯ ಮಹಿಳಾ ದಿನ | ವಿವಾಹಪೂರ್ವ ಆಪ್ತ ಸಮಾಲೋಚನೆ ಸಂವಹನ ಕೇಂದ್ರ ಸ್ಥಾಪನೆ
March 8, 2025
6:52 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror