ಕೊಡಗು ಪ್ರಕೃತಿ ವಿಕೋಪ : ವಿತರಣೆಯಾದ ಪರಿಹಾರದ ಮೊತ್ತ 89 ಕೋಟಿ

May 28, 2019
7:59 PM

ಮಡಿಕೇರಿ : 2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮಾನವ ಜೀವಹಾನಿ, ಜಾನುವಾರು ಹಾನಿ, ಬೆಳೆ ಹಾನಿ, ಮನೆ ಹಾನಿ ಹಾಗೂ ವಿವಿಧ ಹಾನಿಗಳ ಸಂಬಂಧ ಪರಿಹಾರ ಪಾವತಿಸಲಾಗಿದೆ. ಇದುವರೆಗೆ ಒಟ್ಟಾರೆ ವೈಯಕ್ತಿಕ 44,506 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಫ್, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರ ಪರಿಹಾರ ನಿಧಿಯಿಂದ 89 ಕೋಟಿ ರೂ ಹಣವನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆ ಹಾಗೂ ಚೆಕ್ ಮೂಲಕ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಪ್ರಕೃತಿ ವಿಕೋಪದಿಂದ ಸಂಸ್ರಸ್ತರಾದವರಿಗೆ ಸರ್ಕಾರದಿಂದ ವಿವಿಧ ಪರಿಹಾರ ಪಾವತಿ ಮಾಡಿರುವ ವಿವರ ಇಂತಿದೆ,

ಮಾನವ ಜೀವ ಹಾನಿ ಅನುಕಂಪ ಭತ್ಯೆ 21 ಪ್ರಕರಣಗಳಿಗೆ ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರ ಪರಿಹಾರ ನಿಧಿಯಡಿ 1.370 ಕೋಟಿ ರೂ,

ಜಾನುವಾರು ಪ್ರಾಣಹಾನಿ 127 ಪ್ರಕರಣಗಳಿಗೆ ಎನ್‍ಡಿಆರ್ ಎಫ್, ಎಸ್‍ಡಿಆರ್‍ಎಫ್ ನಡಿ 0.282 ಕೋಟಿ ರೂ,

ದಿನಬಳಕೆಯ ವಸ್ತು ಹಾನಿಗೆ ಸಂಬಂಧಿಸಿದಂತೆ (ಅನುಕಂಪ ಭತ್ಯೆ ಪ್ರತಿ ಕುಟುಂಬಕ್ಕೆ 3800 ರೂ ನಂತೆ) 4,400 ಪ್ರಕರಣಗಳಿಗೆ ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್‍ನಡಿ 1.672 ಕೋಟಿ ರೂ,

ವಾಸದ ಮನೆ ಹಾನಿ 4,254 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಫ್‍ನಡಿ 15.087 ಕೋಟಿ ರೂ,

ಮನೆಹಾನಿ (ಅನುಕಂಪ ಭತ್ಯೆ ಪ್ರತಿ ಕುಟುಂಬಕ್ಕೆ 50 ಸಾವಿರ ರೂ ನಂತೆ) 1,021 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 5.105 ಕೋಟಿ ರೂ,

ವಾಸದ ಮನೆ ಹಾನಿ 480 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 0.480 ಕೋಟಿ ರೂ,

ವಾಸದ ಮನೆ ಹಾನಿ 415 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 2.075 ಕೋಟಿ ರೂ,

ವಾಸದ ಮನೆ ಹಾನಿ 54 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 1.080 ಕೋಟಿ ರೂ,

ಬೆಳೆಹಾನಿ 32,198 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಫ್ 38.050 ಕೋಟಿ ರೂ,

ಬೆಳೆಹಾನಿ 1,185 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ ಎಸ್‍ಡಿಆರ್ ಎಫ್ 2.970 ಕೋಟಿ ರೂ,

ಬೆಳೆಹಾನಿ 351 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಎಫ್ 20.920 ಕೋಟಿ ರೂ,

ಒಟ್ಟಾರೆ ವೈಯಕ್ತಿಕ 44,506 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಫ್, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರ ಪರಿಹಾರ ನಿಧಿಯಿಂದ 89.091 ಕೋಟಿ ರೂ ಹಣವನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆ ಹಾಗೂ ಚೆಕ್ ಮೂಲಕ ಪಾವತಿ ಮಾಡಲಾಗಿದೆ .

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ
September 9, 2026
9:26 PM
by: ದ ರೂರಲ್ ಮಿರರ್.ಕಾಂ
ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!
September 7, 2026
7:44 AM
by: ಮಿರರ್‌ ಡೆಸ್ಕ್‌
ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ
September 5, 2026
7:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror