ಬಿಳಿನೆಲೆ: ಕೊಣಾಜೆ ಶ್ರೀ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಎ.29 ರಿಂದ ಮೇ 2 ರ ವರೇಗೆ ನಡೆಯಲಿದ್ದು ಸೋಮವಾರ ಧ್ವಜಾರೋಹಣ ನೆರವೇರಿಸಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
ರೆಂಜಿಲಾಡಿ ಬೀಡಿನ ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಮೀನಾಡಿ ಗುತ್ತು ಮಂಜುನಾಥ ಭಂಡಾರಿ, ಕೊಣಾಜೆ ಶ್ರೀ ಉಳ್ಳಾಕ್ಲು ಹಾಗೂ ಸಪರಿವಾರ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟರಮಣ ಗೌಡ ಬ್ರಂತೋಡು, ನಾಲ್ವೆಕಿಯವರಾದ ಚಂದ್ರಶೇಖರ ಗೌಡ ಬ್ರಂತೋಡು, ಸುಂದರ ಗೌಡ ದೊಡ್ಡಮನೆ , ಉಮೇಶ ಗೌಡ ಕಲ್ಲೂರು, ಕುಶಾಲಪ್ಪ ಗೌಡ ಆಯರ್ತಮನೆ, ಪ್ರಧಾನ ಪರಿಚಾರಕ ಕುಶಾಲಪ್ಪ ಗೌಡ ಕೆರ್ನಡ್ಕ, ದೈವ ನರ್ತಕ ಜನಾರ್ಧನ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಲಿಂಗ ಗೌಡ ಕನಿಯ, ಶಿವರಾಮ ನಾಯ್ಕ ಬೊಳೋಳಿ, ರಘುಚಂದ್ರ ಮನೆಜಾಲು, ರಾಮಣ್ಣ ಆಚಾರಿ, ಹೇಮಾವತಿ ದೊಡ್ಡಮನೆ, ಹರೀಸ್ ಕಲ್ಲೂರು, ನಾಗವೇಣಿ ಆಯರ್ತಮನೆ ಮತ್ತಿತರರು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel