ಸುಳ್ಯ: ನ.ಪಂ.ಚುನಾವಣೆಯಲ್ಲಿ ಕೆಲವು ವಾರ್ಡ್‍ಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಪಕ್ಷೇತರರಾಗಿ ಕಣದಲ್ಲಿ ಉಳಿದಿರುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ಬಂಡಾಯ ತಣ್ಣಗಾಗದ ಹಿನ್ನೆಲೆಯಲ್ಲಿ ಈ ಬಾರಿ ಕೆಲ ವಾರ್ಡ್ ಗಳಲ್ಲಿ ಎರಡೂ ಪಕ್ಷಗಳಿಗೆ ಬಿಸಿ ತಟ್ಟಲಿದೆ.
ಬೋರುಗುಡ್ಡೆಯಲ್ಲಿ ಆರ್.ಕೆ.ಮಹಮ್ಮದ್, ಬೂಡು ವಾರ್ಡ್‍ನಲ್ಲಿ ಮಹಮ್ಮದ್ ರಿಯಾಝ್ ಕಟ್ಟೆಕ್ಕಾರ್, ಬೀರಮಂಗಲ ವಾರ್ಡ್‍ನಲ್ಲಿ ಅಬ್ದುಲ್ ರಹಿಮಾನ್ ಎಂ.ಎಂ. ಜಯನಗರ ವಾರ್ಡ್‍ನಲ್ಲಿ ನವೀನ್ ಮಚಾದೋ ಪಕ್ಷೇತರರಾಗಿ ಸ್ಪರ್ಧಿಸುವುದು ಕಾಂಗ್ರೆಸ್‍ಗೆ ಸವಾಲಾಗಲಿದೆ.
ಶಾಂತಿನಗರ ವಾರ್ಡ್‍ನಲ್ಲಿ ಜನಾರ್ಧನ ಬೆಟ್ಟಂಪಾಡಿ ಮತ್ತು 19ನೇ ವಾರ್ಡ್‍ನಲ್ಲಿ ಮೋಹಿನಿ ಎ.ಪಕ್ಷೇತರರಾಗಿ ಸ್ಪರ್ಧಿಸುವುದು ಬಿಜೆಪಿಗೆ ತಲೆ ನೋವು ಸೃಷ್ಠಿಸಲಿದೆ.
ಎರಡೂ ಪಕ್ಷಗಳ ನೇತೃತ್ವ ಕಳೆದ ಕೆಲವು ದಿನಗಳಿಂದದ ನಡೆಸಿದ ಪ್ರಯತ್ನದಿಂದ ತಲಾ ಒಂದೊಂದು ವಾರ್ಡ್‍ಗಳ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
15ನೇ ವಾರ್ಡ್‍ನಲ್ಲಿ ಪಕ್ಷೇತರನಾಗಿದ್ದ ಅಬ್ದುಲ್ ಮಜೀದ್ ನಾಮಪತ್ರ ಹಿಂಪಡೆದಿರುವುದು ಕಾಂಗ್ರೆಸ್‍ಗೆ ಮತ್ತು 20ನೇ ವಾರ್ಡ್‍ನಲ್ಲಿ ಜಯಂತಿ ಆರ್.ರೈ ನಾಮಪತ್ರ ಹಿಂಪಡೆದಿರುವುದು ಬಿಜೆಪಿಗೆ ಕೊಂಚ ರಿಲೀಫ್ ಕೊಟ್ಟಿದೆ.
ಜಯನಗರ ವಾರ್ಡ್‍ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುರೇಶ್ ಕಾಮತ್ ಜೆಡಿಎಸ್ ನೇತೃತ್ವದ ಸೂಚನೆಯ ಮೇರೆಗೆ ನಾಮಪತ್ರ ಹಿಂಪಡೆದಿದ್ದಾರೆ. ಬೋರುಗುಡ್ಡೆ ವಾರ್ಡ್‍ನಲ್ಲಿ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ರಹೀಂ ಫ್ಯಾನ್ಸಿ ಕಣದಲ್ಲಿದ್ದಾರೆ.