ಕೊರೊನಾ ಅಪ್ಡೇಟ್ಸ್ | ರಾಜ್ಯದಲ್ಲಿಂದು ಒಂದೇ ಕೊರೊನಾ ಪಾಸಿಟಿವ್ | ಸೋಂಕಿತರ ಸಂಖ್ಯೆ 501 ಕ್ಕೆ ಏರಿಕೆ | ದೇಶದಲ್ಲಿ 24 ಗಂಟೆಗಳಲ್ಲಿ 1990 ಹೊಸ ಪ್ರಕರಣ ಪತ್ತೆ |

April 26, 2020
12:49 PM
ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರಾ ಭಾನುವಾರ ನೆಮ್ಮದಿ ಇಲ್ಲವಾಗಿದೆ.  ಕೊರೊನಾದಿಂದ ಮೃತಪಟ್ಟ ಬಂಟ್ವಾಳದ ಮಹಿಳೆ ಚಿಕಿತ್ಸೆ  ಪಡೆಯುತ್ತಿದ್ದ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿ 47  ವರ್ಷದ ಮಹಿಳೆಗೆ ಈಗ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ದ.ಕ ಜಿಲ್ಲೆಯಲ್ಲಿ 19 ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. 12 ಮಂದಿ ಗುಣಮುಖರಾಗಿದ್ದು 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ವೇಳೆ ದೇಶದಲ್ಲಿ  ದೇಶದಲ್ಲಿ ಕೊರೊನಾ ಸೋಂಕಿನ  ಪ್ರಕರಣ  ಕಳೆದ 24 ಗಂಟೆಗಳಲ್ಲಿ 1,990 ಹೊಸ ಪ್ರಕರಣಗಳು ಪತ್ತೆಯಾಗಿದ್ದು 49 ಮಂದಿ ಸಾವನ್ನಪ್ಪಿದ್ದಾರೆ.  ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 26 ಸಾವಿರ ದಾಟಿದ್ದು ಈವರೆಗೂ ಈ ಮಾರಣಾಂತಿಕ ಸೋಂಕಿಗೆ 824 ಮಂದಿ ಮೃತಪಟ್ಟಿದ್ದಾರೆ. 5,804 ಮಂದಿ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು 7,628 ಜನರಲ್ಲಿ ಸೋಂಕು ಪತ್ತೆಯಾಗಿದ್ದು 323 ಮಂದಿ ಸಾವನ್ನಪ್ಪಿದ್ದಾರೆ,  ಗುಜರಾತ್‌ನಲ್ಲಿ ಸೋಂಕು ಪ್ರಕರಣಗಳು 3071 ಗೆ ಏರಿಕೆಯಾಗಿದೆ. 133 ಮಂದಿ ಕೊರೊನಾಗೆ ಬಲಿಯಾಗಿದ್ದು 282 ಮಂದಿ ಗುಣಮುಖರಾಗಿದ್ದಾರೆ.

ದೆಹಲಿಯಲ್ಲಿ 2,625 ಪ್ರಕರಣಗಳು, ತಮಿಳುನಾಡಿನಲ್ಲಿ 1,821 ಪ್ರಕರಣಗಳು,  ರಾಜಸ್ಥಾನದಲ್ಲಿ 2,083 ಪ್ರಕರಣಗಳು,  ಮಧ್ಯಪ್ರದೇಶದಲ್ಲಿ 2,096,  ಆಂಧ್ರ ಪ್ರದೇಶದಲ್ಲಿ 1061 ಪ್ರಕರಣ, ತೆಲಂಗಾಣದಲ್ಲಿ 991 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 1793,  ಕರ್ನಾಟಕದಲ್ಲಿ 501 ಪ್ರಕರಣಗಳು,  ಕೇರಳ 457 ಪ್ರಕರಣಗಳು ಇದುವರೆಗೆ ಪತ್ತೆಯಾಗಿವೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 29-07-2026 | ಆ.2 ರಿಂದ ಮಳೆಯ ಸ್ಥಿತಿ ಏನಾಗಬಹುದು..?
July 29, 2026
2:00 PM
by: ಸಾಯಿಶೇಖರ್ ಕರಿಕಳ
ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!
July 29, 2026
6:52 AM
by: ದ ರೂರಲ್ ಮಿರರ್.ಕಾಂ
ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ
July 29, 2026
6:42 AM
by: ದ ರೂರಲ್ ಮಿರರ್.ಕಾಂ
ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ
July 28, 2026
11:25 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror