ಕೊರೊನಾ ಇಫೆಕ್ಟ್ | ಮುರುಳ್ಯ ಗ್ರಾಮದ ಕುಕ್ಕಟ್ಟೆ ಕಾಲೋನಿಯಲ್ಲಿ ಕುಡಿಯುವ ನೀರಿಗೆ ಪರದಾಟ | ನೀರು ತರಲು ಕೊರೊನಾ ಭಯ – ರಿಪೇರಿಗೂ ಕೊರೊನಾ ಭಯ | ಪಂಚಾಯತ್ ವತಿಯಿಂದ ಸತತ ಪ್ರಯತ್ನ |

March 30, 2020
8:35 PM

ಎಣ್ಮೂರು: ಸುಳ್ಯ  ತಾಲೂಕಿನ ಎಣ್ಮೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮುರುಳ್ಯ ಗ್ರಾಮದ ಕುಕ್ಕಟ್ಟೆ ಕಾಲೋನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗಾಗಿ ಕಾಲನಿ ಜನರು ಸಂಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ನೀರಿರುವ ಮನೆಗಳಿಗೆ ಹೋಗಿ ನೀರು ತರೋಣವೆಂದರೆ ಕೊರೊನಾ ವೈರಸ್ ಭೀತಿಯ ಜೊತೆಗೆ ಕರ್ಪೂ ಹೆದರಿಕೆ. ಸಮಸ್ಯೆ ಪರಿಹಾರಕ್ಕೆ ಕಳೆದ ಕೆಲವು ದಿನಗಳಿಂದ ಪಂಚಾಯತ್ ವತಿಯಿಂದ ಸತತ ಪ್ರಯತ್ನ ನಡೆಯುತ್ತಿದೆ.

Advertisement

ಊರಿಡೀ ಕೊರೊನಾ ವೈರಸ್ ಹರಡುವ ಭೀತಿ ಇದ್ದರೆ ಮುರುಳ್ಯ ಗ್ರಾಮದ ಕುಕ್ಕಟ್ಟೆ ಕಾಲೋನಿ ಜನರಿಗೆ ಕುಡಿಯುವ ನೀರಿನ ಚಿಂತೆ. ಬೇರೆ ಕಡೆಯಿಂದ ನಿರು ತರಲು  ಕೊರೊನಾ ಲಾಕ್ಡೌನ್ ಭೀತಿ. ಕಾಲೋನಿಯಲ್ಲಿ ಸುಮಾರು 10 ಕುಟುಂಬದ 35 ಸದಸ್ಯರನ್ನು ಒಳಗೊಂಡಿರುವ ಪಂಚಾಯತ್ ಸದಸ್ಯರೂ ಇರುವ ಸಣ್ಣ ಕಾಲೋನಿಯಾಗಿದೆ.  ಕಾಲೋನಿ ಜನರಿಗೆ ಪಂಚಾಯತ್ ಒದಗಿಸುತ್ತಿರುವ ನಲ್ಲಿ ನೀರಿನ ಸಂಪರ್ಕವೇ ನೀರಿನ ಮೂಲವಾಗಿರುತ್ತದೆ. ನಲ್ಲಿ ನೀರಿನ ಸೌಲಭ್ಶ ಕೆಟ್ಟು ಹೋಗಿರುವ ಬಗ್ಗೆ ಸಂಭಂಧಪಟ್ಟ ಪಂಚಾಯತ್ ಪ್ರತಿನಿದಿಗಳ ಹಾಗೂ ಅಭಿವೃಧ್ಧಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲ್ಲಿನ ಬೋರ್ ವೆಲ್ ಮೋಟರ್ ಕೆಟ್ಟು ಹೋಗಿದ್ದು ಪಂಪ್ ದುರಸ್ತಿಯಾಗಿ ಕೊಳವೆ ಬಾವಿಗೆ ಇಳಿಸಿದರೂ ನೀರು ಬರುತ್ತಿಲ್ಲ. ಇದೇ ಸಂದರ್ಭ ಲಾಕ್ಢೌನ್ ಎದುರಾಯಿತು. ನೀರು ವ್ಯವಸ್ಥೆ ಕೂಡಾ ಬಂದ್ ಆಯಿತು. ರಿಪೇರಿಗೆ ಯಾರೊಬ್ಬರೂ ಬರುತ್ತಿಲ್ಲ. ಪೊಲೀಸ್ ಅನುಮತಿ ಪಡೆದು ಕೆಲಸ ಮಾಡಬೇಕಿದೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ವ್ಯವಸ್ಥೆ ಮಾಡಬೇಕಿದೆ. ಇಲ್ಲಿ  ಶೀಘ್ರ ವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡದೇ ಇದ್ದರೆ ಕಾಲೋನಿ ಜನರು  ಕಲುಶಿತ ಕೈ ಪಂಪು ಬೊರ್ ವೆಲ್ ನೀರು ಕುಡಿದು ಹೊಸದೊಂದು ರೋಗಕ್ಕೆ ತುತ್ತಾಗಬೇಕಿದೆ ಎನ್ನುವ ಭೀತಿ ಕಾಲನಿ ವಾಸಿಗಳಲ್ಲಿದೆ.

ಈ ನಡುವೆ ನೂತನ ಕೊಳವೆಬಾವಿ ತೋಡಲಾಗಿದೆ. ಇದೀಗ ಹೊಸದಾದ ಪಂಪ್ ಅಳವಡಿಕೆಗೆ ಚಿಂತನೆ ನಡೆದಿದೆ. ಆದರೆ ಲಾಕ್ಡೌನ್ ಆಗಿರುವ ಕಾರಣ ಎಲ್ಲವೂ ನಿಂತಿದೆ. ಆದರೆ ಕಾಲನಿ ಜನರು ಮಾತ್ರಾ ಕುಡಿಯುವ ನೀರಿಗೆ ಪರದಾಟ ನಡೆಸಬೇಕಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಹುದೇರಿ, ಈ ಸಮಸ್ಯೆ ಗಮನಕ್ಕೆ ಬಂದಿದೆ. ತಕ್ಷಣವೇ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.ಮಂಗಳವಾರವೇ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಪಂಚಾಯತ್ ಮಟ್ಟದಲ್ಲಿ ತುರ್ತು ಸೇವೆ ಮಾಡಲು ಅಧಿಕಾರಿ ಮಟ್ಟದಿಂದ ಅನುಮತಿ ಹಾಗೂ ಪಾಸ್ ವ್ಯವಸ್ಥೆ ಅಗತ್ಯವಾಗಿದೆ ಎಂದು ಕರುಣಾಕರ ಹುದೇರಿ  ಹೇಳುತ್ತಾರೆ.

 

Advertisement

 

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ | ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಪರಿಣಾಮ
July 4, 2025
9:22 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |
July 4, 2025
8:27 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group