#ಕೊರೊನಾ ಔಟ್ಬ್ರೇಕ್ | ಕೊರೊನಾ ವೈರಸ್ ಸೋಂಕಾದವರಿಗೆ ಭಯ ಬೇಡ | ನಡೆಯುತ್ತಿದೆ ಆನ್ ಲೈನ್ ಕೌನ್ಸಿಲಿಂಗ್ | ಸಕ್ರಿಯವಾಗಿ ತೊಡಗಿಸಿಕೊಂಡ ಸುಳ್ಯದ ಅಕ್ಷರ ದಾಮ್ಲೆ |

March 30, 2020
1:43 PM

ಸುಳ್ಯ: ಕೊರೊನಾ ವೈರಸ್ ಸೋಂಕಾದ ವ್ಯಕ್ತಿಗಳು ಹಾಗೂ ಕ್ವಾಂರೇಂಟೈನ್ ನಲ್ಲಿರುವ ಮಂದಿ ಹಾಗೂ ಅವರ ಕುಟುಂಬದ ಮಂದಿ ಸಹಜವಾಗಿಯೇ ಮಾನಸಿಕವಾಗಿ ನೊಂದಿರುತ್ತಾರೆ. ಇಂತಹವರಿಗೆ ಆನ್ ಲೈನ್ ಮೂಲಕ ನೆರವಾಗಲು, ಆಪ್ತಸಮಾಲೋಚನೆ ಮಾಡಲು ತಂಡ ಸಿದ್ಧವಾಗಿದೆ. ಬೆಂಗಳೂರಿನಲ್ಲಿ  ಸೋಚರ ಸಂಸ್ಥೆಯ ಮೂಲಕ ರಚನೆಯಾಗಿರುವ ಕೌನ್ಸಿಲಿಂಗ್   ತಂಡವನ್ನು ಸುಳ್ಯದ ಅಕ್ಷರ ದಾಮ್ಲೆ ನಿರ್ವಹಿಸುತ್ತಿದ್ದು, ಸೋಚರ ಸಂಸ್ಥೆ ವ್ಯವಸ್ಥೆ ಮಾಡುತ್ತಿದೆ. ಎಲ್ಲಾ ವೈದ್ಯರು, ಆಪ್ತ ಸಮಾಲೋಚಕರು ಉಚಿತವಾಗಿ ಈಗ ಬಿಡುವು ಮಾಡಿಕೊಂಡು ಸಾರ್ವಜನಿಕ ಸೇವೆ ನಡೆಸುತ್ತಿದ್ದಾರೆ.

ಸೋಚರ ಎಂಬ ಸಂಸ್ಥೆ ಸುಮಾರು 30 ವರ್ಷಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಕೆಲಸ ಮಾಡುತ್ತಿದೆ. ಇದೀಗ ಈ ಸಂಸ್ತೆ ಸಾರ್ವಜನಿಕ ಕಾಳಜಿಯಿಂದ ಕೊರೊನಾ ಭಯ ನಿವಾರಣೆ ಮಾಡಲು ಹಾಗೂ ಈ ವೈರಸ್ ಸೋಂಕಾಗಿರುವ ವ್ಯಕ್ತಿಗಳ, ಕುಟುಂಬದೊಂದಿಗೆ ಆಪ್ತ ಸಮನಾಲೋಚನೆ ನಡೆಸಿ ಧೈರ್ಯ ತುಂಬುವ ಕಾರ್ಯವನ್ನು ಅನ್ ಲೈನ್ ಮೂಲಕ ಮಾಡುತ್ತಿದೆ. ಇದಕ್ಕೆ ಸುಳ್ಯದ ಅಕ್ಷರ ದಾಮ್ಲೆ ಅವರನ್ನು  ಸಂಪರ್ಕಿಸಿ ಅವರ ನೇತೃತ್ವದಲ್ಲಿ  ಇದೀಗ ಸಮಾಲೋಚನಾ ಚಟುವಟಿಕೆ ಆರಂಭಿಸಲಾಗಿದೆ.

ಇದೀಗ 3 ವಿಭಾಗದಲ್ಲಿ  ಕೆಲಸ ಮಾಡಲಾಗುತ್ತದೆ, ಕೋವಿಡ್-19 ಸೋಂಕಿಗೆ ಒಳಗಾದವರು , ಕೋವಿಡ್-19 ಕ್ವಾರಂಟೇನ್ ನಲ್ಲಿ ಇರುವವರು ಹಾಗೂ ಕುಟುಂಬದ ಸದಸ್ಯರಿಗೆ ಹಾಗೂ ಪ್ರತ್ಯೇಕವಾಗಿ ಹೀಗೆ 3 ವಿಭಾಗದಲ್ಲಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ.

ಯಾವುದೇ ರೀತಿಯ ಸಹಾಯ ಬೇಕಿದ್ದರೆ, ಮಾಹಿತಿ ಬೇಕಿದ್ದರೆ ಈ ಕೆಳಗಿನ ಸಂಪರ್ಕದ ಸಂಖ್ಯೆಗೆ ಕರೆ ಮಾಡಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪೂರ್ವ ಮುಂಗಾರು ಸಿಡಿಲು, ಗಾಳಿ ಮಳೆಗೆ ಮುನ್ನೆಚ್ಚರಿಕೆ ವಹಿಸಿ : ವಿಜಯನಗರ ಜಿಲ್ಲಾಧಿಕಾರಿ ಸೂಚನೆ
March 10, 2026
6:48 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಟ್ರಾನ್ಸ್ಫಾರ್ಮರ್ ಕೊರತೆ: ಕೇರಳದಿಂದ ಖರೀದಿಗೆ ಸರ್ಕಾರ ನಿರ್ಧಾರ
March 10, 2026
6:43 AM
by: ದ ರೂರಲ್ ಮಿರರ್.ಕಾಂ
ಭತ್ತದ ಗದ್ದೆಯಿಂದ ಅಡಿಕೆ ತೋಟ | ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬಿಚ್ಚಿಟ್ಟ ಸಂಶೋಧನೆ
March 9, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09-03-2026 | ಕರಾವಳಿ–ಮಲೆನಾಡಿನಲ್ಲಿ ಇಂದು ಸಂಜೆ ಗುಡುಗು ಮಳೆಯ ಸಾಧ್ಯತೆ | ಮಾರ್ಚ್ ಮಧ್ಯಭಾಗದಲ್ಲಿ ಮಳೆ ಚಟುವಟಿಕೆ ಹೆಚ್ಚಳ..?
March 9, 2026
2:16 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror