ಮಂಗಳೂರು: ಕೊರೊನಾ ವೈರಸ್ ಸೋಂಕು ಹರಡಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೊಂದು ಪ್ರಕರಣ ಪತ್ತೆಯಾಗಿದೆ. 10 ತಿಂಗಳ ಮಗುವಿಗೆ ಕೊರೊನಾ ವೈರಸ್ ಸೋಂಕು ಇರುವ ಸಂದೇಹ ಇದೆ. ಬಂಟ್ವಾಳ ಮೂಲಕ ಕುಟುಂಬ ವಾರಗಳ ಹಿಂದೆ ಕಾಸರಗೋಡು ಕಡೆಗೆ ತೆರಳಿದ್ದರು. ಅದಾದ ಬಳಿಕ ಸೋಂಕು ಬಾಧಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಗುವಿನ ಗಂಟಲು ಹಾಗೂ ರಕ್ತದ ಸ್ಯಾಂಪಲ್ ಪರೀಕ್ಷೆಯ ಬಳಿಕ ಇದೀಗ ದೃಢಪಟ್ಟಿದೆ.
ರಾಜ್ಯದಲ್ಲಿ ಇಂದು 7 ಹೊಸ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 62 ಪ್ರಕರಣ ಇದುವರೆಗೆ ಬೆಳಕಿಗೆ ಬಂದಿದೆ. ಮೊದಲ ಕೊರೊನಾ ವೈರಸ್ ಸೋಂಕು ಹೊಂದಿದ್ದ ಬೆಂಗಳೂರಿನ ಸಾಪ್ಟ್ ವೇರ್ ಉದ್ಯೋಗಿ ಹಾಗೂ ಅವರ ಮಗಳು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel