ಕೊರೊನಾ ವೈರಸ್ ತವರು ವುಹಾನ್ ಈಗ ಕಡಿಮೆ ಅಪಾಯದ ಪ್ರದೇಶ ಎಂದು ಚೀನಾ ಘೋಷಣೆ | ಜ. 23 ರಿಂದ  ಲಾಕ್ಡೌನ್ ನಲ್ಲಿದ್ದ ವುಹಾನ್ |

April 19, 2020
11:04 PM

ಬೀಜಿಂಗ್: ಇಡೀ ಜಗತ್ತಿಗೆ ಕೊರೊನಾ ವೈರಸ್ ಹರಡಿದ ಚೀನಾದಲ್ಲಿ ಮೊದಲು ವೈರಸ್ ಕಂಡುಬಂದ ವುಹಾನ್ ಈಗ ಕಡಿಮೆ ಅಪಾಯದ ಪ್ರದೇಶ ಎಂದು ಚೀನಾ ಘೋಷಣೆ ಮಾಡಿದೆ. ಕಳೆದ ಕೆಲವು ದಿನಗಳ ನಿಗಾದ ಬಳಿಕ ಚೀನಾ ಈ ಘೋಷಣೆ ಮಾಡಿದೆ.

Advertisement
Advertisement
Advertisement
Advertisement

ಚೀನಾದ ಆರೋಗ್ಯ ಅಧಿಕಾರಿಗಳು ಭಾನುವಾರ ಈ ಮಾಹಿತಿ ತಿಳಿಸಿದ್ದು ಚೀನಾದ ಸ್ಟೇಟ್ ಕೌನ್ಸಿಲ್ ಹೊರಡಿಸಿದ ಮಾರ್ಗಸೂಚಿಯಲ್ಲಿ ವ್ಯಾಖ್ಯಾನಿಸಲಾದ ಅಪಾಯದ ಮಾನದಂಡಗಳ ಪ್ರಕಾರ, ಕಳೆದ 14 ದಿನಗಳಲ್ಲಿ ಹೊಸದಾಗಿ ಕೊರೊನಾ ವೈರಸ್ ದೃಢಪಟ್ಟ ಪ್ರಕರಣಗಳಿಲ್ಲದ ನಗರಗಳು ಮತ್ತು ಜಿಲ್ಲೆಗಳನ್ನು ಈಗ ಕಡಿಮೆ-ಅಪಾಯದ ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿ  ಕೊರೊನಾ ವೈರಸ್ ತವರು ವುಹಾನ್ ಕೂಡಾ ಸೇರಿದೆ.

Advertisement

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು (ಎನ್‌ಎಚ್‌ಸಿ) ಭಾನುವಾರ ದೇಶದಲ್ಲಿ 16 ಹೊಸ ಕೊರೊನಾ ಪ್ರಕರಣಗಳಿದೆ ಎಂದು  ಪ್ರಕಟಿಸಿದೆ. ಶನಿವಾರ ಯಾವುದೇ  ಮೃತಪಟ್ಟ ವರದಿಯಾಗಿಲ್ಲವಾದ್ದರಿಂದ ಸಾವಿನ ಸಂಖ್ಯೆ 4,632 ರಷ್ಟಿದೆ ಎಂದು ಅದು ಹೇಳಿದೆ. ಚೀನಾದಲ್ಲಿ ಒಟ್ಟಾರೆ ದೃಢಪಟ್ಟ ಕೊರೊನಾ ವೈರಸ್ ಪ್ರಕರಣಗಳು ಶನಿವಾರದ ವೇಳೆಗೆ 82,735 ಕ್ಕೆ ತಲುಪಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿರುವ 1,041 ರೋಗಿಗಳು, ಚೇತರಿಕೆಯ ನಂತರ ಬಿಡುಗಡೆಯಾದ 77,062 ಜನರು ಮತ್ತು ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 4,632 ಮಂದಿ ಎಂದು ವರದಿ ಹೇಳಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಚೀನಾದ ವುಹಾನ್ ನಲ್ಲಿ  ಕಂಡುಬಂದಿತ್ತು. ನಂತರ ಅದು ಹರಡಿತ್ತು. ಏ.16 ರ ಹೊತ್ತಿಗೆ, ವುಹಾನ್‌ನಲ್ಲಿ 50,333 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. 3,869  ಮಂದಿ ಸಾವನ್ನಪ್ಪಿದ್ದರು. ಆದರೆ ಇಡೀ ಚೀನಾದಲ್ಲಿ ಒಟ್ಟಾರೆ ಮೃತಪಟ್ಟವರು  4,632 ಜನ.

Advertisement

ಇದೀಗ ಅಧಿಕೃತ ಅಧಿಸೂಚನೆಗಳ ಪ್ರಕಾರ ವುಹಾನ್ ನಗರದಲ್ಲಿ ವೈರಸ್ ಹರಡಿದ ಪ್ರಕರಣಗಳು ಮತ್ತು ಸಾವುಗಳು ಕಡಿಮೆಯಾದ ಕಾರಣ ಕಡಿಮೆ ಅಪಾಯದ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ವುಹಾನ್ ನಿಂದ ಹೊರಹೋಗುವ ಹಾಗೂ ಒಳಬರುವ ಜನರ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ.

ಅಧಿಕ ಜನಸಂಖ್ಯೆ ಹೊಂದಿರುವ ಚೀನಾದ  ಹುಬೈ  ಹಾಗೂ ವುಹಾನ್ ಜ. 23 ರಿಂದ  ಲಾಕ್ಡೌನ್ ನಲ್ಲಿತ್ತು. ಎ.8 ರಂದು ಸಡಿಲಿಕೆ ಮಾಡಿತ್ತು. ಇದೀಗ ಕಡಿಮೆ ಅಪಾಯದ ಪ್ರದೇಶ ಎಂದು ಗುರುತಿಸಲಾಗಿದೆ.

Advertisement

( ಪಿಟಿಐ ವರದಿ )

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ
February 24, 2025
10:16 PM
by: The Rural Mirror ಸುದ್ದಿಜಾಲ
ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
 ಬಿಎಸ್‌ಎನ್‌ಎಲ್ ಗೆ 269 ಕೋಟಿ ರೂಪಾಯಿ ಲಾಭ | ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಹೇಳಿಕೆ
February 16, 2025
4:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror