ಕೊರೊನಾ ವೈರಸ್ | ಪರಿಸ್ಥಿತಿ ಹದಗೆಡುತ್ತಿದೆ- ಎಚ್ಚರಿಕೆಯಿಂದ ಇರಲು ವಿಶ್ವ ಆರೋಗ್ಯ ಸಂಸ್ಥೆಯಿಂದ 5 ದೇಶಗಳಿಗೆ ಎಚ್ಚರಿಕೆ

June 9, 2020
9:15 PM

ಕೊರೊನಾ ವೈರಸ್ ಬಗ್ಗೆ ಕೆಲವು ದೇಶಗಳು ಜಾಗರೂಕರಾಗಿರಬೇಕು ಎಂದು  ಎಚ್ಚರಿಕೆ ಸಂದೇಶವನ್ನು  ವಿಶ್ವ ಆರೋಗ್ಯ ಸಂಸ್ಥೆ(WHO)  ನೀಡಿದೆ. ಅಮೇರಿಕಾ ಸೇರಿದಂತೆ 5 ದೇಶಗಳು ಕೊರೊನಾ ಬಗ್ಗೆ ಜಾಗೃತವಾಗಿರಬೇಕು, ತಪ್ಪಿದಲ್ಲಿ  ಅಪಾಯವೂ ಇನ್ನಷ್ಟು ಇದೆ ಎಂದೂ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

Advertisement
Advertisement
Advertisement
Advertisement

ಕೊರೊನಾ ವೈರಸ್ ಹರಡುವಿಕೆ ಕಡಿಮೆಯಾಗಿದೆ ಹೀಗಾಗಿ ಕೊರೊನಾ ವೈರಸ್ ಪ್ರಭಾವ ತಗ್ಗಿಸಿದೆ ಎನ್ನುತ್ತಲೇ ವೈರಸ್ ಹರಡುವ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು,  ಕೊರೊನಾ ವೈರಸ್ ಅಧಿಕ ಪ್ರಮಾಣದಲ್ಲಿ ಪಾಸಿಟಿವ್ ಇರುವ ದೇಶಗಳು ಅತೀ ಎಚ್ಚರಿಕೆಯಿಂದ ಇರಬೇಕು ಎಂದು  ಹೇಳಿದೆ. ಈ ಪಟ್ಟಿಯಲ್ಲಿ  ಭಾರತವೂ ಇದೆ.   ಕೊರೊನಾ ವೈರಸ್ ಮೂಲಕ ವಿಶ್ವದ ಪರಿಸ್ಥಿತಿ ಹದಗೆಡುತ್ತಿದೆ. ಕಳೆದ 10 ದಿನಗಳ ದಾಖಲೆಗಳನ್ನು ನೋಡಿದರೆ, ಒಂಬತ್ತನೇ ದಿನದಲ್ಲಿ 1,00,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ, ಈಗೀಗ ಬೆಚ್ಚಿ ಬೀಳಿಸುವ ಅಂಕಿ ಅಂಶಗಳು ಲಭ್ಯವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಹೇಳಿದೆ.

Advertisement

ಪರಿಸ್ಥಿತಿಯನ್ನು ಸುಧಾರಿಸುವುದಾಗಿ ಹೇಳಿಕೊಳ್ಳುತ್ತಿರುವ ದೇಶಗಳಿಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು, ಸ್ವಯಂ-ತೃಪ್ತಿ ದೊಡ್ಡ ಅಪಾಯವಾಗಿದೆ ಮತ್ತು ವಿಶ್ವದ ಹೆಚ್ಚಿನ ಜನರು ಇನ್ನೂ ಅಪಾಯದಲ್ಲಿದ್ದಾರೆ. ಸಾಂಕ್ರಾಮಿಕ ರೋಗದಿಂದಲೇ ಭಯಪಡುತ್ತಿರುವುದು ಆರು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ ಮತ್ತು ಈಗ ಪರಿಸ್ಥಿತಿಯನ್ನು ಗಮನಿಸಿದರೆ,  ಎಲ್ಲಾ ದೇಶಗಳೂ ಜಾಗೃತವಾಗಿರಬೇಕಿದೆ ಎಂದು ಹೇಳಿದೆ.

ವಿಶ್ವದ ದಾಖಲೆ ಪ್ರಕಾರ ಕೊರೊನಾ ವೈರಸ್  ಜಾಗತಿಕವಾಗಿ 72 ಲಕ್ಷಕ್ಕೂ  ಹೆಚ್ಚು ಜನರಿಗೆ ಸೋಂಕು ತಗುಲಿವೆ.  4 ಲಕ್ಷಕ್ಕೂ ಅಧಿಕ ಜನರು ಸಾಂಕ್ರಾಮಿಕ ರೋಗದಿಂದ ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ.  ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳಲ್ಲಿ  ಭಾರತವು 6 ನೇ ಸ್ಥಾನದಲ್ಲಿದೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ  ಸರ್ಕಾರ ಚಾಲನೆ
February 7, 2025
7:21 AM
by: The Rural Mirror ಸುದ್ದಿಜಾಲ
‘ಜಲಾನಯನ ಯಾತ್ರೆ’ ಕುರುಡು ಮಲೆಯಲ್ಲಿ ಆರಂಭ
February 7, 2025
7:15 AM
by: The Rural Mirror ಸುದ್ದಿಜಾಲ
ದೇಶದ 25 ಸಾವಿರ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ಕ್ರಮ  | 900 ಕ್ಕೂ ಅಧಿಕ ಗ್ರಾಮಗಳಲ್ಲಿ ಮೊಬೈಲ್‌ ಟವರ್‌ ಅಳವಡಿಕೆ |
February 7, 2025
7:10 AM
by: The Rural Mirror ಸುದ್ದಿಜಾಲ
ಕಪ್ಪತ ಗುಡ್ಡ ರಕ್ಷಣೆ ಕುರಿತು ಜಾಗೃತಿ | ಗುಡ್ಡದ ತಪ್ಪಲಿನ ಗ್ರಾಮಗಳಲ್ಲಿ ಜನಜಾಗೃತಿ
February 7, 2025
7:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror