ಕೊರೋನಾ ವೈರಸ್ : ಶಾಲಾ ಮಕ್ಕಳ ಪರೀಕ್ಷೆ ಪ್ರಿಪೋನ್

March 9, 2020
11:05 PM

ಬೆಂಗಳೂರು: ಕೊರೋನಾ ವೈರಸ್ ಭೀತಿ ಶಾಲಾ ಮಕ್ಕಳ ಪರೀಕ್ಷೆಗೂ ಅಡ್ಡಿಯಾಗಿದೆ. ಈ ವೈರಸ್ ಹರಡುವ ಭೀತಿ ಇರುವುದರಿಂದ  ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಶಿಕ್ಷಣ ಇಲಾಖೆಯು ಶಾಲಾ ಮಕ್ಕಳ ಪರೀಕ್ಷಾ ದಿನದ ವೇಳಾಪಟ್ಟಿಯಲ್ಲಿ ಮಾರ್ಪಾಡುಗೊಳಿಸಿದೆ. ಹೀಗಾಗಿ ನಿಗದಿತ ಸಮಯಕ್ಕಿಂತ ಮೊದಲೇ ಪರೀಕ್ಷೆ ನಡೆಯಲಿದೆ.

ಈಗಾಗಲೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಎಲ್ ಕೆಜಿ ಮತ್ತು ಯುಕೆಜಿ ಶಾಲಾ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಉಳಿದಂತೆ ರಾಜ್ಯಾದ್ಯಂತ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೊರೋನಾ ವೈರಸ್ ನಿಂದ ಉಂಟಾಗಬಹುದಾದ ಅಪಾಯದಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಆದಷ್ಟು ಬೇಗನೆ ವಾರ್ಷಿಕ ಪರೀಕ್ಷೆಗಳನ್ನು ನಡೆಸಿ ಬೇಸಿಗೆ ರಜೆಯನ್ನು ಘೋಷಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.

ಸರಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ. 11ರಿಂದ 16ರವರೆಗೆ ಹಾಗೂ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ. 23ರೊಳಗೆ ಪೂರ್ಣಗೊಳಿಸಿ ರಜೆ ನೀಡುವಂತೆ ಆದೇಶಿಸಲಾಗಿದೆ.

10ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಿ ನಂತರ ರಜೆ ಘೋಷಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಿ.ಎಂ. ಕಿಸಾನ್ ಸಹಾಯಧನಕ್ಕೆ ‘FRUITS’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ
February 28, 2026
6:48 AM
by: ಮಿರರ್‌ ಡೆಸ್ಕ್
ಪುತ್ತೂರಿನಲ್ಲಿ ಫೆ.21 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
February 6, 2026
9:37 PM
by: ಮಿರರ್‌ ಡೆಸ್ಕ್
ಸ್ವಾವಲಂಬನೆಯ ಸಂಭ್ರಮ | ಮಂಗಳೂರಲ್ಲಿ ರಾಷ್ಟ್ರಮಟ್ಟದ ಮಹಿಳಾ ಉತ್ಪನ್ನಗಳ ಬೃಹತ್ ಮೇಳ
February 6, 2026
8:54 PM
by: ಮಿರರ್‌ ಡೆಸ್ಕ್
ದಕ್ಷಿಣ ಕನ್ನಡ ರೈತರಿಗೆ ಫೆ.20-21 ರಂದು ಕೋಳಿ ಸಾಕಾಣಿಕೆ ತರಬೇತಿ | ಮಂಗಳೂರು ಪಶುಪಾಲನಾ ಇಲಾಖೆ ಪ್ರಕಟಣೆ
February 4, 2026
7:55 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror