ಕೊಲ್ಲಮೊಗ್ರು: ನಿಲ್ಕೂರು ಶಿರಾಡಿ ದೈವಸ್ಥಾನದ ಕಾಣಿಗೆ ಡಬ್ಬಿ ಕಳವಿಗೆ ಯತ್ನ

June 5, 2019
6:45 PM

ಕೊಲ್ಲಮೊಗ್ರು: ಕೊಲ್ಲಮೊಗ್ರು ಗ್ರಾಮದ ಕಾರಣಿಕ ದೈವ ನಿಲ್ಕೂರು ಶಿರಾಡಿ ದೈವಸ್ಥಾನದ ಕಾಣಿಕೆ ಹುಂಡಿ ಕಳವಿಗೆ ಯತ್ನ ಮಂಗಳವಾರ ರಾತ್ರಿ ನಡೆದಿದೆ.

Advertisement
Advertisement
Advertisement

ಬುಧವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಹರಿಹರಪಲ್ಲತ್ತಡ್ಕ-ಕೊಲ್ಲಮೊಗ್ರು ರಸ್ತೆಯ ನಿಲ್ಕೂರು ಎಂಬಲ್ಲಿ ರಸ್ತೆಯ ಬದಿಯಲ್ಲಿ ಕಾರಣಿಕ ಪ್ರಸಿದ್ಧ ಶಿರಾಡಿ ದೈವಸ್ಥಾನದ ಕಾಣಿಕೆ ಡಬ್ಬಿ ಇದೆ. ಇದರ ಬೀಗವನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಕಳ್ಳರ ಪ್ರಯತ್ನ ಸಫಲವಾಗದ ಕಾರಣ ಹಣ ಕಳ್ಳತನವಾಗಿಲ್ಲ. ಈ ಹಿಂದೆ ಅನೇಕ ಬಾರಿ ಇಲ್ಲಿ ಕಳವಿಗೆ ಯತ್ನ ನಡೆದಿತ್ತು. ಪ್ರತೀ ಬಾರಿ ವಿಫಲ ಯತ್ನವಾಗಿದೆ.

Advertisement

ಈ ಹಿಂದೆ ಕೂಡ ಮೂರ್ನಾಲ್ಕು ಬಾರಿ ಇದೇ ರೀತಿ ಪ್ರಯತ್ನ ಇಲ್ಲಿ ನಡೆದಿತ್ತು. ಈ ಕುರಿತು ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿತ್ತು. ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಈ ಬಾರಿ ದೈವಸ್ಥಾನದ ಆಡಳಿತ ಮಂಡಳಿ ಯಾವುದೇ ದೂರು ನೀಡದೆ ದೈವದ ಮುಂದೆ ಪ್ರಾರ್ಥನೆ ಮಾಡಿದೆ.  ಶಿರೂರು ಶ್ರೀ ಶಿರಾಡಿ ದೈವಸ್ಥಾನವೂ ಅತ್ಯಂತ ಕಾರಣಿಕ ದೈವಸ್ಥಾನವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸೈಬರ್ ಅಪರಾಧ ತಡೆಗೆ ಪೊಲೀಸ್ ಇಲಾಖೆಯಿಂದ ನೂತನ ತಂತ್ರಜ್ಞಾನ ಬಳಕೆ
December 9, 2024
7:15 AM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳು | ಸಾರ್ವಜನಿಕರ ಜಾಗೃತಿಗಾಗಿ ಅರಿವು ಕಾರ್ಯಕ್ರಮ
November 15, 2024
10:56 PM
by: The Rural Mirror ಸುದ್ದಿಜಾಲ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ
ಕೀನ್ಯಾದಲ್ಲಿ ಕಾಗೆಗಳನ್ನು ಕೊಲ್ಲಲು ಆದೇಶ | ಈಗ ಅಮೇರಿಕಾದಲ್ಲಿ ನಾಲ್ಕೂವರೆ ಲಕ್ಷ ಗೂಬೆಗಳನ್ನು ಕೊಲ್ಲಲು ಆದೇಶ..! | ಕಾರಣ ಏನು ಗೊತ್ತಾ..?
July 6, 2024
12:06 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror