ಕೊಳಚೆ ನೀರು ಹರಿಯುತ್ತಿದೆ….. ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ… ಅಧಿಕಾರಿಗಳೇ ಗಮನಹರಿಸುವಿರಾ

July 8, 2019
10:16 PM

ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ ಬಿಡಿಎ ವಾರ್ಡ್ ನ ಬಾಳೆಮಕ್ಕಿ ಎಂಬಲ್ಲಿ ಹೋಟೆಲ್ ಮತ್ತಿತರ ಕಡೆಯಿಂದ ಹರಿಯುವ ಕೊಳಚೆ ನೀರು ಜನವಸತಿ ಪ್ರದೇಶದ ಸಮೀಪದಲ್ಲಿಯೇ ಹರಿದು ತೀವ್ರ ಆರೋಗ್ಯ ಸಮಸ್ಯೆ ಉಂಟಾಗುತಿದೆ. ಈ ಕುರಿತು ಕೂಡಲೇ ಕ್ರ‌ಮಕ್ಕೆ ಆಗ್ರಹಿಸಿ ಸಾರ್ವಜನಿಕರು ನಗರ ಪಂಚಾಯತ್ ಆಡಳಿತಾಧಿಕಾರಿ ಹಾಗು ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರಿಗೆ ದೂರು ನೀಡಲಾಗಿದೆ.

ಒಳಚರಂಡಿಗೆ ಸಂಪರ್ಕ ಇಲ್ಲದೆ ಕೊಳಚೆ ನೀರು ಮನೆಗಳ ಸಮೀಪದಲ್ಲಿ ಹರಿಯುತಿದೆ ಮತ್ತು ಕೊಳಚೆ ನೀರು ಅಲ್ಲಲ್ಲಿ ಶೇಖರಗೊಂಡು ಸೊಳ್ಳೆಗಳು ಬೆಳೆದು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತಿದೆ. ಇಲ್ಲಿ ಸೊಳ್ಳೆಗಳು ಬೆಳೆದು ಮಕ್ಕಳಿಗೆ ಮತ್ತು ಮನೆ ಮಂದಿಗೆ ಜ್ವರ, ವಾಂತಿ, ಭೇದಿ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುತಿದೆ ಎಂದು ಬಾಳೆಮಕ್ಕಿಯ ಅಬ್ದುಲ್ ಲತೀಫ್ ತಹಶೀಲ್ದಾರ್ ರಿಗೆ ದೂರು ನೀಡಿದ್ದಾರೆ. ಚರಂಡಿಯಲ್ಲಿ ಕೊಳಚೆ ನೀರು ಹಲವು ಸಮಯದಿಂದ ಇದೇ ಭಾಗದಲ್ಲಿ ಹರಿಯುತ್ತಿದ್ದು ಇದನ್ನು ಸರಿಪಡಿಸಬೇಕು ಎಂದು ನಗರ ಪಂಚಾಯತ್ ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಬ್ದುಲ್ ಲತೀಫ್ ಹೇಳುತ್ತಾರೆ. ಅಲ್ಲದೆ ಪ್ರದೇಶದಲ್ಲಿ ದುರ್ನಾತ ಬೀರುತ್ತಿದ್ದು ಮನೆಯಲ್ಲಿ ವಾಸಿಸಲು ಆಗದ ಪರಿಸ್ಥಿತಿ ಉಂಟಾಗಿದೆ ಎಂದು ಎಂದು ಸಾರ್ವಜನಿಕರು ದೂರಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ:

ಬಾಳೆಮಕ್ಕಿ ಭಾಗದಲ್ಲಿ ಜನವಸತಿ ಪ್ರದೇಶದಲ್ಲಿ ಕೊಳಚೆ ನೀರು ಹರಿದು ಸುಮಾರು ಆರು ಕುಟುಂಬಗಳಿಗೆ ತೀವ್ರ ಸಮಸ್ಯೆ ಆಗುತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಇದನ್ನು ಕೂಡಲೇ ಸರಿಪಡಿಸದಿದ್ದರೆ ಸಾರ್ವಜನಿಕರನ್ನು ಸೇರಿಸಿ ನಗರ ಪಂಚಾಯತ್ ಎದುರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ ಹೇಳಿದ್ದಾರೆ. ಈ ಕುರಿತು ಹಲವು ಬಾರಿ ನಗರ ಪಂಚಾಯತ್ ಗೆ ದೂರು ನೀಡಿದರೂ ಸರಿಪಡಿಸಿದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 29-03-2026 | ಕರ್ನಾಟಕದಲ್ಲಿ ಮತ್ತೆ ಮಳೆ…! ನಿಮ್ಮ ಜಿಲ್ಲೆಯಲ್ಲಿ ಮಳೆ ಇದೆಯಾ..?
March 29, 2026
2:48 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror