ಕಳಂಜ: ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥನದಲ್ಲಿ ಸೆ.29ರಿಂದ ನವರಾತ್ರಿ ಉತ್ಸವ ಪ್ರಾರಂಭವಾಗಲಿದ್ದು, ಇದರ ಪ್ರಯುಕ್ತ ಭಕ್ತಾಭಿಮಾನಿಗಳ ಸಭೆ ದೇವಸ್ಥಾನದ ವಠಾರದಲ್ಲಿ ಮಂಗಳವಾರ ಸಂಜೆ ನಡೆಯಿತು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾವಳಿಗಳ ಆಯೋಜನೆ ಕುರಿತು ಭಕ್ತಾಭಿಮಾನಿಗಳೊಂದಿಗೆ ಚರ್ಚಿಸಲಾಯಿತು. ಗ್ರಾಮಸ್ಥರು ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು. ಆಡಳಿತ ಧರ್ಮದರ್ಶಿ ಕೆದ್ಲ ನರಸಿಂಹ ಭಟ್, ಧರ್ಮದರ್ಶಿಗಳಾದ ವಾರಣಾಶಿ ಗೋಪಾಲಕೃಷ್ಣ, ಸೀತಾರಾಮ ಕೋಟೆ, ಆಡಳಿತ ಮಂಡಳಿ ಸದಸ್ಯರು, ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಮುಂಡುಗಾರು ಸುಬ್ರಹ್ಮಣ್ಯ, ಕಾರ್ಯದರ್ಶಿ ಪವನ ವೆಂಕಟ್ರಮಣ ಭಟ್, ಅರ್ಚಕರು ಹಾಗು ಊರವರು ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel