ಕೋಸ್ಟಲ್ ಫುಡ್ ಫೆಸ್ಟಿವಲ್’ : ಘಮಘಮಿಸಿದ ಭಕ್ಷ್ಯ ಭೋಜನ : ಕರಾವಳಿ ಖಾದ್ಯಕ್ಕೆ ಮನಸೋತ ಗ್ರಾಹಕ

July 14, 2019
1:00 PM

ಮಡಿಕೇರಿ  : ಕರಾವಳಿಯ ವಿಶೇಷ ಮೀನುಗಳ ಭಕ್ಷ್ಯ ಬೋಜನ… ದಕ್ಷಿಣ ಕನ್ನಡದ ಶಾಖಾಹಾರಿ ಪದಾರ್ಥಗಳಿಗೆ ಮನಸೋತ ಜನತೆ… ಮಂಗಳೂರು ಶೈಲಿಯ ಆಹಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಗ್ರಾಹಕರು… ಇಂತಹದೊಂದು ವಿಶಿಷ್ಟ ‘ಕೋಸ್ಟಲ್ ಫುಡ್ ಫೆಸ್ಟಿವಲ್’ ಸಿಲಿಕಾನ್ ಸಿಟಿ ಬೆಂಗಳೂರಿನ ಬೊಮ್ಮ ಸಂದ್ರದ ಸೌಥೆಂಡ್ ಹೋಟೆಲ್‍ನಲ್ಲಿ ನಡೆಯಿತು.

Advertisement
Advertisement

ಬೆಂಗಳೂರಿನ ಬೊಮ್ಮಸಂದ್ರದ ಹೊಸೂರು ಮುಖ್ಯ ರಸ್ತೆಯಲ್ಲಿರುವ ಸೌಥೆಂಡ್ ಟಿ.ಜಿ.ಐ ಬೋಟಿಕ್ ಹೊಟೇಲ್‍ನ ಅರ್ಬನ್ ಉಡುಪಿ ರೆಸ್ಟೋರೆಂಟ್‍ನಲ್ಲಿ ‘ಕೋಸ್ಟಲ್ ಫುಡ್ ಫಿಯಸ್ಟಾ’ ಎಂಬ ಆಹಾರ ಮೇಳ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಯನ್ನು ತನ್ನತ್ತ ಆಕರ್ಷಿಸಿತು. ಆಹಾರ ಮೇಳದಲ್ಲಿ ವಿವಿಧ ಬಗೆಯ ಮೀನುಗಳ ಫ್ರೈ, ಮಂಗಳೂರು ಶೈಲಿಯ ನಾನಾ ಬಗೆಯ ಸ್ವಾದಿಷ್ಟಕರ ಮೀನಿನ, ಏಡಿಗಳ ಖಾದ್ಯ ಹಾಗೂ ಕರಾವಳಿಯ ಇತರ ಆಹಾರ ಪದಾರ್ಥಗಳು ಗಮ್ಮೆಂದವು. ಒಂದೆಡೆ ಆಹಾರ ಮೇಳದಲ್ಲಿ ಕರಾವಳಿ ಆಹಾರದ ರುಚಿ ಸವಿಯುತ್ತಿದ್ದ ಗ್ರಾಹಕರಿಗೆ ಬೆಂಗಳೂರು ಕಲಾವಿದರ ಸುಮಧುರ ಸಂಗೀತ ವಿಶೇಷ ರಸದೌತಣ ನೀಡಿತು.

ಜು. 21ರ ವರೆಗೆ ನಡೆಯಲಿರುವ ಆಹಾರ ಮೇಳವನ್ನು ಮೂಲತಃ ಕೊಡಗಿನ ಮರಗೋಡಿನ ನಿವಾಸಿ ಬೆಂಗಳೂರಿನಲ್ಲಿ ನೆಲೆಸಿರುವ ಬಿಜೆಪಿ ಮುಖಂಡ ಚೆರಿಯಮನೆ ರತ್ನಕುಮಾರ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬೊಮ್ಮಸಂದ್ರದ ಪುರಸಭಾ ಕಮಿಷನರ್ ರಮೇಶ್, ಹೆಬ್ಗೋಡಿ ನಗರಸಭಾ ಕಮಿಷನರ್ ನರಸಿಂಹ ಮೂರ್ತಿ, ಉಪಾಧ್ಯಕ್ಷ ರಾಜೇಂದ್ರ, ಸದಸ್ಯ ರಕೇಶ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಕ ಪ್ರಭಾಕರ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಪ್ರದಾನ ವ್ಯವಸ್ಥಾಪಕರಾದ ಜಿ.ವಿ. ಚಂದ್ರಕುಮಾರ್, ಡಿ.ವೈ.ಎಸ್.ಪಿ. ನಂಜುಂಡಗೌಡ, ಎಂ.ಆರ್.ಎಫ್ ಟಯರ್ಸ್‍ನ ಕಿರಣ್ ಕುಮಾರ್, ಬೆಂಗಳೂರು ಕೆಂಪೇಗೌಡ ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಶೈಲೇಶ್, ಸೂರಿ, ಕಾಂತರಾಜು, ನಾಗರಾಜು, ರಾಜು, ಬೆಂಗಳೂರು ಇಸ್ರೋ ಕೇಂದ್ರದ ರವಿಗೌಡ, ಬಿಜೆಪಿ ಮುಖಂಡ ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.

ಕೋಸ್ಟಲ್ ಫುಡ್ ಫಿಯಿಸ್ಟಾದಲ್ಲಿ ಕೃತಕ ಮರದ ದೋಣಿಯನ್ನು ತಯಾರಿಸಿ ಅದರ ಮೇಲೆ ವಿವಿಧ ಬಗೆಯ ಕರಾವಳಿಯ ಖಾದ್ಯಗಳನ್ನು ಅಲಂಕರಿಸ್ಪಟ್ಟಿದ್ದು, ಮೇಳದ ವಿಶೇಷವಾಗಿತ್ತು.
ಸೌಥೆಂಡ್ ಹೋಟೆಲ್‍ನ ನಿರ್ದೇಶಕರುಗಳಾದ ಪದ್ಮನಾಭ ಪಾಯಡ್, ಪ್ರದಾ ಶೆಟ್ಟಿ, ಚೆರಿಯಮನೆ ರತ್ನಕುಮಾರ್, ಹೋಟೆಲ್‍ನ ವ್ಯವಸ್ಥಪಕರಾದ ಅರುಣ್ ಪ್ರಸಾದ್, ಸುಂಟಿಕೊಪ್ಪ ಕೀರ್ತನ್ ಇವರುಗಳ ಮಾರ್ಗದರ್ಶನದಲ್ಲಿ ನಡೆದ ಆಹಾರ ಉತ್ಸವ ಯಶಸ್ವಿಯೊಂದಿಗೆ ಜನಪ್ರಿಯತೆ ಪಡೆದುಕೊಂಡಿತು. ಈ ಕೋಸ್ಟಲ್ ಫುಡ್ ಫೆಸ್ಟಿವಲ್ ಜು. 21ರ ವರೆಗೆ ನಡೆಯಲಿದ್ದು, ಭಾಗವಹಿಸುವವರು ಮೊ.ಸಂ. 7094492803 ನ್ನು ಸಂಪರ್ಕಿಸಬಹುದಾಗಿದೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗೆ ಕೊಳೆರೋಗ | ಎಲೆಚುಕ್ಕಿ ರೋಗ ಸಾಧ್ಯತೆ | ಮುನ್ನೆಚ್ಚರಿಕಾ ಕ್ರಮಗಳಿಗೆ ಇಲಾಖೆ ಸೂಚನೆ |
July 21, 2025
9:37 PM
by: The Rural Mirror ಸುದ್ದಿಜಾಲ
ಲಕ್ ಪತಿ ದೀದಿ ಯೋಜನೆ | ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ
July 21, 2025
6:52 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ – 43 ಸಾವಿರ ಕೋ. ರೂ. ವೆಚ್ಚದಲ್ಲಿ ಶೀಘ್ರ ಪೂರ್ಣ
July 19, 2025
9:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group