ಪುತ್ತೂರು: ಅಂತರ್ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆಯನ್ನು ಕ್ಯಾಂಪ್ಕೋ ಅಧ್ಯಕ್ಷರಾದ ಎಸ್ ಆರ್. ಸತೀಶ್ಚಂದ್ರ ಸಹಕಾರಿ ಧ್ವಜಾರೋಹಣ ನೆರೆವೇರಿಸುವ ಮೂಲಕ ಉದ್ಘಾಟಿಸಿದರು.
ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಶಿ ಸುಬ್ರಾಯ ಭಟ್ಟರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಲ್ಲಿ ಆರ್ಥಿಕ ಸಾಮರಸ್ಯ ,ಆತ್ಮವಿಶ್ವಾಸ, ಸ್ವ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿ ಸಂಸ್ಥೆಗಳು ಕೊಡುಗೆ ನೀಡಿವೆ ಎಂದರು. ಸಹಕಾರಿ ರಂಗಕ್ಕೆ ಕೊಡುಗೆ ನೀಡಿದ ಹಿರಿಯರನ್ನು ಸ್ಮರಿಸಿದ ಅವರು ಇಂದು ರಾಜ್ಯವ್ಯಾಪಿ ಸುಮಾರು 40,000 ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳು ಇದ್ದು 2.5 ಕೋಟಿಯಷ್ಟು ಸದಸ್ಯರು ವ್ಯವಹರಿಸುತ್ತಿದ್ದಾರೆ ಎಂದು ತಿಳಿಸಿದರು.
ಕ್ಯಾಂಪ್ಕೋದ ಸಾಮಾಜಿಕ ಜಾಲತಾಣದ ವಿವಿಧ ಲಿಂಕ್ ಗಳನ್ನು ಪರಿಚಯಿಸುವ ಕ್ಯೂಆರ್ ಕೋಡ್ ಹೊಂದಿರುವ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಅತೀ ಹೆಚ್ಚು ಜನರು ಇದನ್ನು ಅನುಸರಿಸಿ ಕ್ಯಾಂಪ್ಕೋ ಬ್ರಾಂಡ್ ಪ್ರಸಿದ್ಧಿಗೊಳಿಸಲು ಕರೆನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಡಿ.ಜಿ.ಮ್ ಫ್ರಾನ್ಸಿಸ್ ಡಿ .ಸೋಜಾ , ಎ.ಜಿ.ಮ್ ಇಂಜಿನಿಯರಿಂಗ್ ಅವಿನಾಶ್ ರೈ, ಎ.ಜಿ.ಎಂ ಪ್ರೊಡಕ್ಷನ್ ಅನೂಪ್, ಎ.ಜಿ.ಎಮ್ ಟೆಕ್ನಿಕಲ್ ಶ್ಯಾಂಪ್ರಸಾದ್ ಉಪಸ್ಥಿತರಿದ್ದರು. ಭದ್ರತಾ ವಿಭಾಗದ ಮುಖ್ಯಸ್ಥರಾದ ಬಿ .ಜಿ ರಂಗನಾಥ್ ದ್ವಜಾರೋಹಣ ನಿರ್ವಹಿಸಿದರು. ರಾಧೇಶ್ ಕುಂದಲ್ಪಾಡಿ ಪ್ರಸ್ತಾವನೆಗೈದು, ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು .
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement