ಸುಳ್ಯ: ಚಾಲಿ ಅಡಿಕೆ ಕೃಷಿಕರಿಗೆ ಅಡಿಕೆ ಸುಲಿಸುವ ಕಾರ್ಯ ಸಲೀಸಾಗಿ ನಡೆಯುತ್ತಿಲ್ಲ. ಸಾಂಪ್ರದಾಯಿಕ ಶೈಲಿಯಲ್ಲಿಅಡಿಕೆ ಸುಲಿಯುವ ತಂಡಗಳಿದ್ದರೂ ಕೃಷಿಕರ ಅಗತ್ಯಕ್ಕೆ ಅವರು ಒದಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಅಡಿಕೆ ಸುಲಿಯುವ ಅನೇಕ ಯಂತ್ರಗಳು ಈಗಾಗಲೆ ಬಂದಿದ್ದರೂ ನೂರಕ್ಕೆ ನೂರು ನಿಖರ ಕಾರ್ಯಕುಶಲತೆ ಹೊಂದಿದವು ಕಡಿಮೆ.
ಈ ನಿಟ್ಟಿನಲ್ಲಿ ಪ್ರಯೋಗಗಳು, ಆವಿಷ್ಕಾರಗಳು ಮತ್ತುಇನ್ನಷ್ಟು ಸಂಶೋಧನೆಗಳು ನಡೆಯುತ್ತಿರುವುದು ಸಮಾಧಾನಕರ. ಈ ಕಾರ್ಯವನ್ನು ಪ್ರೋತ್ಸಾಹಿಸಿ ಇನ್ನಷ್ಟು ಪೂರ್ಣ ಪ್ರಮಾಣದಲ್ಲಿಉತ್ತಮ ಗುಣಮಟ್ಟದ ಕೆಲಸ ನಿರ್ವಹಿಸಿಕೊಡುವ ಯಂತ್ರಗಳು ಬಂದು ಅಡಿಕೆ ಕೃಷಿಕರಿಗೆ ನೆರವಾಗಬೇಕೆನ್ನುವುದು ಕ್ಯಾಂಪ್ಕೋದ ಆಶಯ. ಅದಕ್ಕಾಗಿ ಚಾಲಿ ಅಡಿಕೆ ಸುಲಿಯುವ ಯಂತ್ರಗಳ ನಡುವೆ ಸ್ಪರ್ಧೆಯೊಂದನ್ನು ಏರ್ಪಡಿಸಿ ಉತ್ತಮ ಕಾರ್ಯಕುಶಲತೆ ಹೊಂದಿದ ಯಂತ್ರ ಆವಿಷ್ಕಾರ ಮಾಡಿದವರಿಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸಲು ಕ್ಯಾಂಪ್ಕೋ ಮುಂದಾಗಿದೆ.
ಸ್ಪರ್ಧಾ ವಿಜೇತರಿಗೆ ಫೆಬ್ರವರಿ 8ರಂದು ಕಾಸರಗೋಡು ಜಿಲ್ಲೆಯ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಬಹುಮಾನವನ್ನು ವಿತರಿಸಲಾಗುವುದು. ಯಂತ್ರ ಕಾರ್ಯನಿರ್ವಹಿಸುವ ಸ್ಥಳಕ್ಕೆ ಬಂದು ಯಂತ್ರದ ಕಾರ್ಯಕುಶಲತೆಯನ್ನು ಖುದ್ದಾಗಿ ಗಮನಿಸಿ ಅಂಕ ನೀಡುವ ತಂಡವನ್ನು ಕ್ಯಾಂಪ್ಕೋ ನಿಯೋಜಿಸಲಿದ್ದುಇದಕ್ಕಾಗಿ ಯಂತ್ರ ಆವಿಷ್ಕಾರ ಮಾಡಿದವರು ನೋಂದಾವಣೆ ಮಾಡಬೇಕಿದೆ.
ನೋಂದಾವಣೆ ಮಾಡಲು ಕೊನೆಯ ದಿನ 25 ಜನವರಿ 2020. ನೋಂದಾಯಿಸಲು ಮತ್ತು ಸಂಪರ್ಕಕ್ಕೆ : ಕಿಶನ್ ಪಳ್ಳತ್ತಡ್ಕ, ಕ್ಯಾಂಪ್ಕೊ ಮುಖ್ಯಕಚೇರಿ, ಮಂಗಳೂರು,0824-2441594, ಮೊ.-9495096848, ಈ-ಮೇಲ್ – [email protected]
ಷರತ್ತುಗಳಿಗಾಗಿ ಸಂಸ್ಥೆಯ ಜಾಲತಾಣ www.campco.orgಗೆ ಭೇಟಿ ನೀಡಬಹುದು.