ಕ್ಲೋರಿನ್ ಸೋರಿಕೆ : ಸುಬ್ರಹ್ಮಣ್ಯದ ಕಲ್ಲಪಣೆಯಲ್ಲಿ ಉಸಿರುಗಟ್ಟಿದ ಜನತೆ…!

October 29, 2019
10:31 AM

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿ ಜನತೆ ಆತಂಕಕ್ಕೆ ಒಳಗಾದರು. ಉಸಿರುಗಟ್ಟಿ ಮನೆಯಿಂದ ಓಡಿ ಬಂದ ಘಟನೆ ನಡೆದಿದೆ.

ಸೋಮವಾರ ತಡರಾತ್ರಿ ಸುಬ್ರಹ್ಮಣ್ಯ ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿ  ಉಸಿರುಗಟ್ಟಿಸುವ ವಾಸನೆ ಬಂದಿತ್ತು. ಹೀಗಾಗಿ ಜನತೆ ಆತಂಕಕ್ಕೆ ಒಳಗಾಗಿ ಗ್ಯಾಸ್ ಸೋರಿಕೆಯಾಗಿದೆ ಎಂದು ಮನೆಯಿಂದ  ಓಡಿ ಬಂದರು. ವಾಸನೆಗೆ ಸಮೀಪದ ಮನೆಯವರಿಗೆ ಉಸಿರಾಡಲು ಕಷ್ಟವಾಯಿತು.

 

ಬಳಿಕ ಅಗ್ನಿ ಶಾಮಕ ದಳದವರಿಗೂ ಮಾಹಿತಿ ನೀಡಲಾಯಿತು. ದೇವಸ್ಥಾನದ ಅಧಿಕಾರಿಗಳಿಗೆ, ಪೋಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದರು. ಅಗ್ನಿಶಾಮಕದ ದಳದ ಸಿಬಂದಿಗಳು  ಪರಿಶೀಲನೆ ನಡೆಸಿದಾಗ  ಶುದ್ಧೀಕರಣ ಘಟಕದ ಟ್ಯಾಂಕ್ ನ ಒಳಗಡೆಯಲ್ಲಿ ತುಂಬಿಸಿಟ್ಟಿದ್ದ ಕ್ಲೋರಿನ್ ಸೋರಿಕೆಯಾಗಿರುವುದು ಕಂಡುಬಂತು.  ಈಗ ಜನತೆಯ ಆತಂಕ ದೂರವಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಗೆ ಹೊಸ ದಿಕ್ಕು – ICAR ಟಾಸ್ಕ್ ಫೋರ್ಸ್ ಘೋಷಣೆ – ರೈತರ ಆದಾಯ ಹೆಚ್ಚಳಕ್ಕೆ ಪ್ಲಾನ್
May 2, 2026
10:28 PM
by: ದ ರೂರಲ್ ಮಿರರ್.ಕಾಂ
ಮಲೆನಾಡು ಅಡಿಕೆ ತೋಟಗಳಲ್ಲಿ ಕ್ಯಾಲ್ಸಿಯಂ-ಮೆಗ್ನೀಷಿಯಂ ಕೊರತೆ
May 2, 2026
10:14 PM
by: ದ ರೂರಲ್ ಮಿರರ್.ಕಾಂ
ಕೊಬ್ಬರಿ ಮಾರುಕಟ್ಟೆ ಕುಸಿತ…! ರೈತರಿಗೆ ಮತ್ತೆ ಸಂಕಷ್ಟ
May 2, 2026
9:55 PM
by: ದ ರೂರಲ್ ಮಿರರ್.ಕಾಂ
ಬಿಸಿಗಾಳಿಯ ಹೊಡೆತಕ್ಕೆ ತರಕಾರಿ ಬೆಳೆ ನಾಶ – ತರಕಾರಿ ಬೆಲೆ 50% ಏರಿಕೆ – ಮನೆ ಬಜೆಟ್ ತತ್ತರ..!
May 2, 2026
5:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror