ಗಾಂಧಿ ನಡಿಗೆಗೆ ಪೂರ್ವಭಾವಿಯಾಗಿ ಗಾಂಧಿ ಚಿಂತನ ಮಾಹಿತಿ ಕಾರ್ಯಾಗಾರ

September 29, 2019
2:50 PM

ಸುಳ್ಯ: ಗಾಂಧಿ ಚಿಂತನ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಬೆಳ್ಳಾರೆಯಿಂದ ಸುಳ್ಯದವರೆಗೆ ಅ. 2ರಂದು ನಡೆಯಲಿರುವ ಗಾಂಧಿ ನಡಿಗೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಗಾಂಧಿ ಚಿಂತನ ಮಾಹಿತಿ ಕಾರ್ಯಾಗಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ಸಭಾಭವನದಲ್ಲಿ ನಡೆಯಿತು.

Advertisement
Advertisement
Advertisement
Advertisement

ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಡಾ. ಚಲಪತಿ ಆರ್, ಮೈಸೂರಿನ ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಡಳಿತ ಮುಖ್ಯಸ್ಥ ಡಾ. ಎಂ. ಸಿ. ಮನೋಹರ್, ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಡಾ. ಸುಂದರ್ ಕೇನಾಜೆ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ, ಸರಳತೆ, ಸಹಕಾರಿ ತತ್ವ, ಸ್ವಾವಲಂಬನೆ, ಧರ್ಮದರ್ಶಿತ್ವ, ವಿಕೇಂದ್ರೀಕರಣ, ಅಧಿಕಾರ, ಆಧ್ಯಾತ್ಮ ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.

Advertisement

 

ಉದ್ಘಾಟನೆ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ ಹಾಗು ಪತ್ರಕರ್ತ ಡಾ.ಯು. ಪಿ. ಶಿವಾನಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

Advertisement

ಡಾ. ಹರಪ್ರಸಾದ್ ತುದಿಯಡ್ಕ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಗಾಂಧಿ ಕುರಿತ ಓದು ಮತ್ತು ಅಧ್ಯಯನ ವ್ಯಾಪಕವಾಗಬೇಕು. ದೇಶದ ಚಿಂತನೆ ಹಚ್ಚುವ ನಾಯಕರು ಮಹಾತ್ಮರಾಗುತ್ತಾರೆ ಎನ್ನುವುದಕ್ಕೆ ಗಾಂಧೀಜಿಯೇ ಉತ್ತಮ ಉದಾಹರಣೆ ಎಂದು ಹೇಳಿದರು.

ಡಾ.ಯು. ಪಿ. ಶಿವಾನಂದ ಮಾತನಾಡಿ ಕತ್ತಲಿನಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ಎನ್ನುವ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸಿದ ಮತ್ತು ಅದರಂತೆ ಬದುಕಿದ ಗಾಂಧೀಜಿಯವರ ಚಿಂತನೆ ಸಾರ್ವಕಾಲಿಕ ಪ್ರಸ್ತುತತೆ ಇರುವಂತದ್ದು ಎಂದು ಅಭಿಪ್ರಾಯಪಟ್ಟರು.

Advertisement

ಗಾಂಧಿ ಚಿಂತನಾ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವನೆಗೈದರು‌. ಡಾ.ಎಂ.ಸಿ ಮನೋಹರ್, ಡಾ. ಛಲಪತಿ ಆರ್, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ್ ಪೆರಾಜೆ, ಗಾಂಧಿನಡಿಗೆ ಕಾರ್ಯಕ್ರಮದ ಸಂಚಾಲಕರಾದ ಡಾ. ಸುಂದರ್ ಕೇನಾಜೆ, ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ
February 25, 2025
7:10 AM
by: The Rural Mirror ಸುದ್ದಿಜಾಲ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ
ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror