ಗಾಯಗೊಂಡ ಕಡವೆಗೆ ಚಿಕಿತ್ಸೆ

June 25, 2019
10:00 PM

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಪದೇಲ ಎಂಬಲ್ಲಿ ಕೃಷಿ ಜಮೀನಿನ ಪಕ್ಕ ಗಾಯಗೊಂಡ ಸ್ಥಿತಿಯಲ್ಲಿ ಕಡವೆಯೊಂದು ಸೋಮವಾರ ಕಂಡು ಬಂದಿದ್ದು ಸ್ಥಳಿಯರ ನೆರವಿನಿಂದ ಅರಣ್ಯ ಇಲಾಖೆ ರಕ್ಷಿಸಿ ಚಿಕಿತ್ಸೆ  ನೀಡಿದೆ.
ಪದೇಲ ಎಂಬಲ್ಲಿ ಕೃಷಿಕ ರಮಾನಂದ ಅವರಿಗೆ ಸೇರಿದ ಕೃಷಿ ತೋಟದ ಪಕ್ಕದಲ್ಲಿ ತೋಟಕ್ಕೆ ಅಳವಡಿಸಿದ ತಂತಿ ಬೇಲಿಯಲ್ಲಿ ಹೆಣ್ಣು ಕಡವೆಯೊಂದು ಸೋಮವಾರ ಸಿಕ್ಕಿ ಹಾಕಿಕೊಡು ಮಲಗಿತ್ತು. ಅದನ್ನು ಗಮನಿಸಿದ ಸ್ಥಳಿಯರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಅದರ ಕಾಲಿಗೆ ಬೇಲಿ ಪರದೆಗಳು ಸಿಕ್ಕಿ ಹಾಕಿಕೊಂಡಿತ್ತು. ಬಳಿಕ ಅವುಗಳನ್ನು ಬಿಡಿಸಿ ತೆರಳಲು ಅವಕಾಶ ಮಾಡಿಕೊಟ್ಟಿದ್ದರು.

Advertisement
Advertisement

ಮಂಗಳವಾರ ಬೆಳಗ್ಗೆ ಕಡವೆ ಅಲ್ಲಿಯೇ ಮಲಗಿಕೊಂಡು ಇದ್ದು ತೆರಳದಿರುವುದನ್ನು ಗಮನಿಸಿದ ಸ್ಥಳಿಯರು ಮತ್ತೆ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಬಳಿಕ ಸ್ಥಳಿಯರ ನೆರವಿನಿಂದ ಅರಣ್ಯ ಇಲಾಖೆ ಸಿಬಂದಿಗಳು ಕಡವೆಯನ್ನು ಅರಣ್ಯ ಇಲಾಖೆ ದೇವರಹಳ್ಳಿ ಸಸ್ಯಪಾಲನ ಕ್ಷೇತ್ರಕ್ಕೆ ಕೊಂಡು ಹೋಗಿ ಅಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿದರು. ಗುತ್ತಿಗಾರು ಪಶುವೈದ್ಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ. ವೆಂಕಟಾಚಲಪತಿ ಅವರು ಆಗಮಿಸಿ ಕಡವೆಗೆ ಚಿಕಿತ್ಸೆ ನೀಡಿದರು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಗೋವಾದಲ್ಲಿ ಗೇರು ಕೃಷಿಗೆ ಕೋತಿಗಳ ಉಪಟಳ | ಕರಾವಳಿ ಕರ್ನಾಟಕದ ಗೇರು ಕೃಷಿಗೆ ಮುನ್ನೆಚ್ಚರಿಕೆಯ ಸಂದೇಶ ?
February 15, 2026
6:13 AM
by: ಮಿರರ್‌ ಡೆಸ್ಕ್
ಅಂಕದ “ಸುರಕ್ಷತೆ”ಯಾ? ಬದುಕಿನ “ಸುರಕ್ಷತೆ”ಯಾ? – ಗ್ರಾಮೀಣ ಶಿಕ್ಷಣದ ಮಣ್ಣಿನ ಸತ್ವ ಕಳೆದುಕೊಳ್ಳದಿರೋಣ
February 15, 2026
5:54 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror