ಗುಡಿಸಲೂ ಅಲ್ಲದ ಮನೆಯ ಕತೆ ಇದು…!

June 22, 2019
12:00 PM

ಸುಳ್ಯ: ಇದು ಗುಡಿಸಲೂ ಅಲ್ಲದ ಮನೆಯೊಂದರ ಕತೆ. ಅಚ್ಚರಿಯಾಗುತ್ತದೆ, ಆಧುನಿಕ ಎಲ್ಲಾ ಸೌಲಭ್ಯಗಳು ಈಗ ಸಾಲದೆನ್ನುವ ಕಾಲದಲ್ಲಿ , ಆಡಳಿತ ಸುಧಾರಣೆ ಎನ್ನುವ ಕಾಲದಲ್ಲಿ  ಈಗಲೂ ಇಂತಹದ್ದೊಂದು ಮನೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.

Advertisement
Advertisement
Advertisement
Advertisement

ಸುಳ್ಯ ತಾಲೂಕಿನ ಮಂಡೆಕೋಲು ಬಳಿ ಒಂದು ಗುಡಿಸಲು ಇದೆ. ಪ್ಲಾಸ್ಟಿಕ್ ಹೊದಿಕೆ ಹಾಕಿದ, ಸರಿಯಾದ ನೆಲವೂ ಇಲ್ಲದ ಮನೆ ಇದೆ. ಈಗ ಯುವ ಬ್ರಿಗೆಡ್ ಇವರಿಗೊಂದು ಪುಟ್ಟ ಮನೆ ನಿರ್ಮಾಣಕ್ಕೆ ಮುಂದಾಗಿದೆ. ಆಡಳಿತ ವ್ಯವಸ್ಥೆಗೆ ಈಗಲಾದರೂ ಇದು ಕಾಣಬೇಕು…!

Advertisement

 

Advertisement

 

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಡಿವಾಳ ಮೂಲೆ ಎಂಬಲ್ಲಿ  ಪಕೀರ ಎಂಬವರ ಮನೆಯ ಕತೆ ಇದು. ಸಣ್ಣ ಕುಟುಂಬ ಇದು. ಪುಟ್ಟ ಪುಟ್ಟ ಮಕ್ಕಳೊಂದಿಗಿನ ಕುಟುಂಬ.  ದಿನವೂ ದುಡಿದು ಬದುಕು ಸಾಗಿಸುವ ವ್ಯವಸ್ಥೆ ಇವರದು. ಸ್ವಂತ ಜಾಗ ಇದೆ. ಸ್ಥಳೀಯರು ಕೊಡಮಾಡಿದ ಜಾಗ ಇದೆ. ಆದರೆ ರೇಶನ್ ಕಾರ್ಡ್, ಆಧಾರ್ ಕಾರ್ಡ್ ಸಹಿತ ಯಾವುದೇ ದಾಖಲೆ ಇಲ್ಲ. ಹೀಗಾಗಿ ಯಾವ ವ್ಯವಸ್ಥೆಯೂ ಇದುವರೆಗೆ ಆಗಿಲ್ಲ ಎನ್ನುವುದು  ಈಗಿನ ಮಾಹಿತಿ.

Advertisement

ಕಳೆದ ಅನೇಕ ವರಷಗಳಿಂದ ಇದೇ ಮನೆಯಲ್ಲಿ  ಅವರು ವಾಸ ಮಾಡುತ್ತಿದ್ದಾರೆ. ಮಳೆಗಾಲವಂತೂ ಇವರ ಬದುಕು ಅಯೋಮಯ. ವ್ಯವಸ್ಥೆಯ ಕಾರಣದಿಂದ  ಮಕ್ಕಳೂ ಶಾಲೆಗೂ ಹೋಗಲಾಗದೆ ಮನೆಯಲ್ಲೂ ಉಳಿದುಕೊಳ್ಳಲಾದರ ಸ್ಥಿತಿ ಇದೆ. ಚುನಾವಣೆ ಬಂದಾಗ ಇಲ್ಲಿನ ಎರಡು ಓಟಿಗಾಗಿ ಹೆಚ್ಚು ಗಮನವೂ  ಪಕ್ಷಗಳು ನೀಡದೇ ಇದ್ದರೆ ಪಕೀರ ಅವರ ಮದ್ಯಪಾನದ ಚಟವೂ ಅವರನ್ನು ದೂರ ಮಾಡಿದೆ. ಹೀಗಾಗಿ ಅವರ  ಮಕ್ಕಳೂ ದಿಕ್ಕಿಲ್ಲದಾಗಿದ್ದಾರೆ.

 

Advertisement

 

Advertisement

ಇದೀಗ ಯುವ ಬ್ರಿಗೇಟ್ ಈ ಕುಟುಂಬನ್ನು  ಗಮನಿಸಿ ಸಹಾಯಕ್ಕೆ ಮುಂದಾಗಿದೆ. ಪುಟ್ಟ ಮನೆಯನ್ನು  ದಾನಿಗಳ ಸಹಾಯದಿಂದ ನಿರ್ಮಾಣ ಮಾಡಲು ಮುಂದಾಗಿದೆ. ಭಾನುವಾರ ಮನೆಯನ್ನು  ಕಟ್ಟಿಕೊಡುವ ಕೆಲಸ ಮಾಡುತ್ತದೆ.

ಪಕೀರ ಕುಟುಂಬದ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ . ಅವರಿಗೆ ಓದಿನ ವ್ಯವಸ್ಥೆಗೆ ಮಾತುಕತೆ ನಡೆಯುತ್ತದೆ ಎನ್ನುತ್ತಾರೆ ಯುವಬ್ರಿಗೆಡ್ ಮುಂದಾಳು ಶರತ್.   ಈ ಮೂಲಕ ಪಕೀರ ಕುಟುಂಬಕ್ಕೆ ಆಧಾರ ಸಿಗಲಿ. ಆಧಾರ್ ಕಾರ್ಡ್ ಇಲ್ಲದೇ ಇದ್ದರೂ ಈಗ ಬದುಕಿಗೆ ಆಧಾರ ಸಿಗುವಂತಾಗಲಿ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |
March 3, 2025
11:46 AM
by: ಸಾಯಿಶೇಖರ್ ಕರಿಕಳ
ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ
Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |
March 3, 2025
7:28 AM
by: The Rural Mirror ಸುದ್ದಿಜಾಲ
ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!
March 3, 2025
7:06 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...