ಪುತ್ತೂರು: ಸರಸ್ವತಿ ಕಾನೂನು ಕಾಲೇಜು ಚಿತ್ರದುರ್ಗದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆ ಹಾಗೂ ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಪ್ರಕ್ರಿಯೆ ನಡೆಯಿತು. ಇದರಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ವಿದ್ಯಾಲಯದ ವಿದ್ಯಾರ್ಥಿನಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಈ ತಂಡದಲ್ಲಿ ಸಂಧ್ಯಾ ಕೆ.ಎಸ್. ತೃತೀಯ ಎಲ್.ಎಲ್.ಬಿ., ಲವೀನ ತೃತೀಯ ಬಿ.ಎ.ಎಲ್.ಎಲ್.ಬಿ., ಪೂರ್ಣಿಮಾ ತೃತೀಯ ಬಿ.ಎ.ಎಲ್.ಎಲ್.ಬಿ., ಹರ್ಷಿತಾ ತೃತೀಯ ಎಲ್.ಎಲ್.ಬಿ., ಜ್ಯೋತಿ ದ್ವಿತೀಯ ಎಲ್.ಎಲ್.ಬಿ. ಹಾಗೂ ಅರ್ಪಿತ ಪ್ರಶಾಂತ್ ಪ್ರಥಮ ಬಿ.ಎ.ಎಲ್.ಎಲ್.ಬಿ. ಇವರು ಭಾಗವಹಿಸಿದ್ದರು.
ಸಂಧ್ಯಾ ಕೆ.ಎಸ್. ತೃತೀಯ ಎಲ್.ಎಲ್.ಬಿ. ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ವಿಶ್ವವಿದ್ಯಾನಿಲಯದ ತಂಡಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಆಂದ್ರಪ್ರದೇಶ ಅಂತರ್ ವಿಶ್ವ ವಿದ್ಯಾನಿಲಯದ ಗುಡ್ಡಗಾಡು ಓಟದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ನವೀನ್ ಕುಮಾರ್ ಎಮ್.ಕೆ. ದೈಹಿಕ ಶಿಕ್ಷಕರು ತರಬೇತಿಯನ್ನು ನೀಡಿರುತ್ತಾರೆ.