ಸುಳ್ಯ: ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ರೋನಾಲ್ಡ್ ಗೋಮ್ಸ್ ಅಧಿಕೃತ ಭೇಟಿ ನೀಡಿದರು. ಲಯನ್ಸ್ ಸೇವಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುತ್ತಿಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಮೋಹನ್ ಕೆ ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಯದರ್ಶಿ ಲಿಜೋ ಜೋಸ್, ಕೋಶಾಧಿಕಾರಿ ಕುಶಾಲಪ್ಪ ಟಿ, ಪ್ರಾಂತೀಯ ಅಧ್ಯಕ್ಷ ಕೃಷ್ಣ ಪ್ರಶಾಂತ್,ವಲಯಾಧ್ಯಕ್ಷ ರುಗಳಾದ ಬಿಟ್ಟಿ ಬಿ ನೆಡುವಿಲಂ, ರೇಣುಕಾ ಸದಾನಂದ ಜಾಕೆ, ಆನಂದ ರೈ, ಜಿಲ್ಲಾ ಸಂಪುಟ ಖಜಾಂಜಿ ಹರೀಶ್ ಶೆಟ್ಟಿ, ಲಯನ್ಸ್ ಗಳಾದ ಡಾ. ಪ್ರಕಾಶ್ ಡಿಸೋಜಾ, ಸುದರ್ಶನ್ ಪಡಿಯಾರ್, ಶರಶ್ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಚಿಕಿತ್ಸಾ ಮತ್ತು ಶಿಕ್ಷಣ ಸಹಾಯಧನವನ್ನು ವಿತರಿಲಸಾಯಿತು. ಉತ್ತಮ ಸೇವೆಯನ್ನು ನೀಡುತ್ತಿರುವ ಗುತ್ತಿಗಾರು ಮೆಸ್ಕಾಂನ ವೆಂಕಟ್ರಮಣ ಮೊಟ್ನೂರು, ಸುಧಾಕರ ಪಂಜಿಪಳ್ಳ, ರವೀಂದ್ರ ಕುಚ್ಚಾಲ, ಪಾಲಾಕ್ಷ ಹೊಳೆನರಸೀಪುರ, ದಿನೇಶ್ ಪೂಜಾರಿ ಕೋಡಿ ಇವರುಗಳನ್ನು ಸನ್ಮಾನಿಸಲಾಯಿತು. ಮೋಹನ್ ಕೆ ಸ್ವಾಗತಿಸಿ, ಲಿಜೋ ಜೋಸ್ ವರದಿ ವಾಚಿಸಿದರು. ಕುಶಾಲಪ್ಪ ಟಿ ವಂದಿಸಿದರು.
ಬಸ್ ತಂಗುದಾಣ ಕೊಡುಗೆ: ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಗುತ್ತಿಗಾರು ಗ್ರಾಮದ ಕಾಜಿಮಡ್ಕ ಎಂಬಲ್ಲಿ ಹೊಸ ಬಸ್ ತಂಗುದಾಣವನ್ನು ಕ್ಲಬ್ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ಜಿಲ್ಲಾ ಗವರ್ನರ್ ರೋನಾಲ್ಡ್ ಗೋಮ್ಸ್ ನೂತನ ತಂಗುದಾಣವನ್ನು ಉದ್ಘಾಟಿಸಿದರು .