ಗುತ್ತಿಗಾರು ಸಹಕಾರಿ ಸಂಘದ ಚುನಾವಣೆ : 3 ಸ್ಥಾನಗಳಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

February 16, 2020
2:15 PM

ಗುತ್ತಿಗಾರು : ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣಾ ನಾಮಪತ್ರ ಪರಿಶೀಲನೆ ಭಾನುವಾರ ಸಂಘದ ಕಚೇರಿಯಲ್ಲಿ  ಚುನಾವಣಾಧಿಕಾರಿ ನಾಗೇಂದ್ರ ಅವರಿಂದ ನಡೆಯಿತು. ಒಟ್ಟು 32 ನಾಮಪತ್ರ ಸಲ್ಲಿಕೆಯಾಗಿತ್ತು. ಪರಿಶೀಲನೆ ಬಳಿಕ ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಫೆ.17 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.

ನಾಮಪತ್ರ ಪರಿಶೀಲನೆ ಬಳಿಕ ಸಾಲಗಾರರಲ್ಲದ ಕ್ಷೇತ್ರದಿಂದ ಹಾಲಿ ಅದ್ಯಕ್ಷ ಮುಳಿಯ ಕೇಶವ ಭಟ್ ಅವಿರೋಧವಾಗಿ ಆಯ್ಕೆಯಾದರೆ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಆನಂದ ಹಾಗೂ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕುಂಞ ಅವಿರೋಧವಾಗಿ ಆಯ್ಕೆಯಾದರು. ಇವರು 3 ಮಂದಿ ಕೂಡಾ ಸಹಕಾರ ಭಾರತಿ-ಬಿಜೆಪಿ ಬೆಂಬಲಿತರಾಗಿದ್ದಾರೆ.

ಸಾಲಗಾರರ ಕ್ಷೇತ್ರದಿಂದ  ಮಹೇಶ್ ಕುಮಾರ್ ಪುಚ್ಚಪ್ಪಾಡಿ, ಜನಾರ್ಧನ ಡಿ ಜೆ, ನವೀನ್ ಬಾಳುಗೋಡು, ಬೆಳ್ಯಪ್ಪ ಗೌಡ ಕಡ್ತಲ್ ಕಜೆ , ವೆಂಕಟ್ ದಂಬೆಕೋಡಿ  , ಕೇಶವ ಹೊಸೋಳಿಕೆ, ದಿವಾಕರ ಮುಂಡೋಡಿ, ಪದ್ಮನಾಭ ಎಂ, ಕಿಶೊರ್ ಕುಮಾರ್ ಅಂಬೆಕಲ್ಲು , ದುರ್ಗಾದಾಸ್ ಎಂ, ನಾಗೇಶ್ ಪಿ, ಉದಯಕುಮಾರ್ ಡಿ ಆರ್ , ರವಿಪ್ರಕಾಶ್ ಬಿ ವಿ,  ಭರತ್ ಮುಂಡೋಡಿ, ವೆಂಕಟ್ ವಳಲಂಬೆ, ತೀರ್ಥರಾಮ ಎವಿ,ಭುವನೇಶ್ವರ ಎಚ್ ಆರ್

ಹಾಗೂ ಮಹಿಳಾ ಕ್ಷೇತ್ರದಿಂದ ಶಶಿಕಲಾ ಡಿ ಪಿ, ಮಂಜುಳಾ ಎಂ ಡಿ, ಚಂದ್ರಾವತಿ , ಪ್ರೇಮಲತಾ ಕಣದಲ್ಲಿದ್ದಾರೆ.

ಉಳಿದಂತೆ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಕೃಷ್ಣಯ್ಯ ಮೂಲೆತೋಟ ಹಾಗೂ ದಿನೇಶ್ ಕೆ   ಮತ್ತು ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಜಯಪ್ರಕಾಶ್ ಎ ಆರ್ ಹಾಗೂ ಶೈಲೇಶ್ ಅಂಬೆಕಲ್ಲು ಕಣದಲ್ಲಿದ್ದಾರೆ.

Advertisement

4 ನಾಮಪತ್ರಗಳು ತಿರಸ್ಕೃತಗೊಂಡಿತ್ತು. ಆನಂದ ಕೆಂಬಾರೆ, ಎರಡು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ಜನಾರ್ಧನ ಡಿಜೆ , ಜಾತಿ ಸರ್ಟಿಫಿಕೇಟ್ ನೀಡದ ಹಿನ್ನೆಲೆಯಲ್ಲಿ ದಿನಕರ ಹಾಗೂ ಸಾಲರಹಿತ ಕ್ಷೇತ್ರದಲ್ಲಿ ಸೂಕ್ತ  ಚುನಾವಣಾ ಠೇವಣಿ ಪಾವತಿಸದ ಹಿನ್ನೆಲೆಯಲ್ಲಿ ಚಂಚಲಾಕ್ಷಿ ಅವರ ನಾಮಪತ್ರ ತಿರಸ್ಕೃತವಾಗಿತ್ತು.

 

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
September 22, 2025
7:04 PM
by: ದ ರೂರಲ್ ಮಿರರ್.ಕಾಂ
ನವರಾತ್ರಿ – ದಸರಾ | ಶಕ್ತಿ ತತ್ತ್ವದ ವಿಜ್ಞಾನ ಮತ್ತು ಸಂಸ್ಕೃತಿ
September 22, 2025
7:35 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಇಂದಿನಿಂದ ‘ನವರಾತ್ರ ನಮಸ್ಯಾ’ | ವೈಭವದೊಂದಿಗೆ ಸಂಪನ್ನವಾದ ರಾಘವೇಶ್ವರ ಶ್ರೀಗಳ ಪುರಪುವೇಶ ಮೆರವಣಿಗೆ
September 22, 2025
7:26 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 21-09-2025 | ಸೆ.29 ರವರೆಗೆ ಅಲ್ಲಲ್ಲಿ ಮಳೆ ನಿರೀಕ್ಷೆ | ವಾಯುಭಾರ ಕುಸಿತದ ಪರಿಣಾಮ ಏನು..?
September 21, 2025
9:24 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group