ಗುತ್ತಿಗಾರು ಸಹಕಾರಿ ಸಂಘದ ಮಹಾಸಭೆ : 1.01 ಕೋಟಿ ಲಾಭ – ಶೇ.6 ಡಿವಿಡೆಂಡ್ ಘೋಷಣೆ

September 21, 2019
2:31 PM

ಗುತ್ತಿಗಾರು: ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಶನಿವಾರ ಸಂಘದ ಆವರಣದಲ್ಲಿ  ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ವಹಿಸಿದ್ದರು. ಸಂಘವು ಸದ್ರಿ ವರ್ಷದಲ್ಲಿ  1, 01,59,122 ರೂಪಾಯಿ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.6 ಡಿವಿಡೆಂಡ್ ಘೋಷಣೆ ಮಾಡಲಾಯಿತು.

Advertisement
Advertisement

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಒಟ್ಟು 5503 ಸದಸ್ಯರಿದ್ದು ಒಟ್ಟು 8.04 ಕೋಟಿ ಪಾಲುಬಂಡವಾಳ ಹೊಂದಿದೆ. ವರ್ಷಾಂತ್ಯದಲ್ಲಿ ಒಟ್ಟು 308.63 ಕೋಟಿ ವ್ಯವಹಾರ ನಡೆಸಿ  1.01 ಕೋಟಿ ರೂಪಾಯಿ ಲಾಭ ಗಳಿಸಿದೆ.

Advertisement

ರಸಗೊಬ್ಬರ , ಕೃಷಿ ಬಳಕೆ ಮಾರಾಟ ಇತ್ಯಾದಿಗಳಿಂದ ಒಟ್ಟು92.41 ಲಕ್ಷ ರೂಪಾಯಿ ವ್ಯವಹಾರ ನಡೆಸಿ 7.06 ಲಕ್ಷ ರೂಪಾಯಿ ಲಾಭ ಗಳಿಸಿದ್ದರೆ, ಪೆಟ್ರೋಲಿಯಂ ವ್ಯವಹಾರದಲ್ಲಿ ಒಟ್ಟು 8.89 ಕೋಟಿ ರೂಪಾಯಿ ವ್ಯವಹಾರ ನಡೆಸಿ 23.73 ಲಕ್ಷ ರೂಪಾಯಿ ಲಾಭ ಗಳಿಸಿದೆ. ಸಂಘದ 1612 ಮಂದಿ ಸದಸ್ಯರು ಸಾಲಾ ಮನ್ನಾಕ್ಕೆ ಅರ್ಹತೆ ಪಡೆದಿದ್ದಾರೆ.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಎಂ.ಡಿ ಮಂಜುಳ ಮುತ್ಲಾಜೆ, ನಿರ್ದೇಶಕರುಗಳಾದ ಬಿ.ಕೆ ಬೆಳ್ಯಪ್ಪ ಗೌಡ, ಭರತ್ ಮುಂಡೋಡಿ, ಕೃಷ್ಣಯ್ಯ ಮೂಲೆತೋಟ, ದಿನೇಶ್ ಕೆ ಸರಸ್ವತಿ ಮಹಲ್, ಆನಂದ ಕೆಂಬಾರೆ, ಶೈಲಜಾ ಮುಂಡೋಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಎ.ಕೆ ಉಪಸ್ಥಿತರಿದ್ದರು.

Advertisement

ಅಧ್ಯಕ್ಷ ಮುಳಿಯ ಕೇಶವ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಎ.ಕೆ ವರದಿ ವಾಚಿಸಿ ವಂದಿಸಿದರು. ಕಿಶೋರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಪ್ರಸ್ತುತ ವರ್ಷ ಮೃತಪಟ್ಟ ಸದಸ್ಯರಿಗೆ ಹಾಗೂ ವೀರ ಮರಣ ಹೊಂದಿದ ಯೋಧರಿಗೆ  ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಇದೇ ಸಂದರ್ಭ ಸಂಘದ ಪೆಟ್ರೋಲ್ ಪಂಪ್ ನಿಂದ ಹೆಚ್ಚು ಡೀಸೆಲ್/ಪೆಟ್ರೋಲ್ ಖರೀದಿ ಮಾಡಿದವರನ್ನು ಗುರುತಿಸಲಾಯಿತು. ವರ್ಷಕ್ಕೆ 37 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ಸೌರಭ ವ್ಯಾನ್ ಮಾಲಕ ಕುಮಾರ್ , 26 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ದೇವಿಪ್ರಸಾದ್ ಚಿಕ್ಮುಳಿ, 8 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ಜ್ಞಾನದೀಪ ವಿದ್ಯಾಸಂಸ್ಥೆಯನ್ನು ಗೌರವಿಸಲಾಯಿತು.

Advertisement

ಕ್ಯಾಂಪ್ಕೋ ಶಾಖೆಗೆ ಅಧಿಕ ಪ್ರಮಾಣದಲ್ಲಿ ಅಡಿಕೆ ಹಾಕಿದ ಕೃಷಿಕರಾದ ಉಣ್ಣಿಕೃಷ್ಣನ್, ರತ್ಮಾ ಎಂ ಡಿ ಹಾಗೂ ಪರಮೇಶ್ವರ ಭಟ್ ವಳಲಂಬೆ ಅವರನ್ನು ಗುರುತಿಸಲಾಯಿತು.ಕ್ಯಾಂಪ್ಕೋ ಶಾಖೆಗೆ ಅಧಿಕ ಪ್ರಮಾಣದಲ್ಲಿ ಕೊಕೋ ಹಾಕಿದ ಕಮಲಾಕ್ಷ ಸಂಪ್ಯಾಡಿ, ತಿರುಮಲೇಶ್ವರ‌ ಚಣಿಲ , ಕೇಶವ ಮುಳಿಯ ಅವರನ್ನು ಗುರುತಿಸಲಾಯಿತು. ಅಧಿಕ ಗೊಬ್ಬರ ಖರೀದಿ ಮಾಡಿದ ಸುರೇಶ್ ಸಾಲ್ತಾಡಿ, ತೀರ್ಥರಾಮ ಕಮಿಲ, ಸುಬ್ಬಣ್ಣ ಗೌಡ ಎಂಡಿ ಅವರನ್ನು ಕೂಡಾ ಗೌರವಿಸಲಾಯಿತು.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror