ಗುದ್ದಲಿಪೂಜೆಗೆ ಸೀಮಿತವಾದ ಕಾರ್ಯ – ನಿರ್ಮಾಣವಾಗದ ಸೇತುವೆ : ಇದು ಜನರ ಅಳಲು…..

October 12, 2019
12:27 PM

ಆರು ತಿಂಗಳ ಹಿಂದೆ  ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಲಸಾಗಿದೆ.ಈದೀಗ ಸೇತುವೆ ಕಾಮಗಾರಿಗೆ ಟೆಂಡರ್ ಆದರೂ ಕಾಮಗಾರಿ ಆರಂಭವಾಗಿಲ್ಲ. ಕೇಳಿದರೆ ಮಳೆಗಾಲದ ನೆಪ. ಹೀಗೇ ಅನೇಕ ವರ್ಷಗಳು ಉರುಳಿದವು… ಈಗ ಗುದ್ದಲಿ ಪೂಜೆಯಾದರೂ ಸೇತುವೆ ನಿರ್ಮಾಣ ಆಗುತ್ತೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.. ಹೀಗೆಂದು ಆತಂಕ, ನೋವು ತೋಡಿಕೊಳ್ಳುವವರು ತೊಡಿಕಾನ- ಮುಪ್ಪಸೇರು -ಕುದರೆಪಾಯ-ಮಾಪಳಕಜೆ ಪ್ರದೇಶದ ಜನತೆ. ಏನಿದು ಕತೆ ? ಇಲ್ಲಿ  ಓದಿ…

Advertisement

ತೊಡಿಕಾನ- ಮುಪ್ಪಸೇರು -ಕುದರೆಪಾಯ-ಮಾಪಳಕಜೆಗೆ ಮತ್ಸ್ಯ ತೀರ್ಥ ಹೊಳೆಗೆ ಸಂಪರ್ಕ ಸೇತುವೆ ನಿರ್ಮಾಣವಾದ ಹಿನ್ನಲೆಯಲ್ಲಿ ಈ ಭಾಗದ ಜನರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಕೆಲ ದಿನಗಳ ಹಿಂದೆ ವಾಹನ ಸಂಪರ್ಕ ಸಾದ್ಯವಾಗದ ಪರಿಣಾಮ ಸ್ಥಳೀಯ ಮಹಿಳೆಗೆ ದಾರಿ ಮದ್ಯೆ ಹೆರಿಗೆಯಾದ ಘಟನೆ ನಡೆದಿದೆ.ಇದು ಒಂದು ಉದಾಹರಣೆಯಾದರೆ ಐದಾರು ವರ್ಷಗಳ ಹಿಂದೆ ಮಳೆಗಾಲ ಅಸೌಖ್ಯಕೊಳಗಾದ ವ್ಯಕ್ತಿಯೊಬ್ಬರನ್ನು ತುರ್ತಾಗಾಗಿ ಸಕಾಲಕ್ಕೆ ಆಸ್ಪತ್ರೆಗೆ ಕೊಂಡುಹೋಲು ಸಾಧ್ಯವಾಗದೇ ದಾರಿ ಮದ್ಯೆ ಅವರು ಮೃತಪಟ್ಟಿದ್ದರು.

 

ಸೇತುವೆ ನಿರ್ಮಾಣಕ್ಕೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬೇಡಿಕೆ ಇಟ್ಟಿದ್ದರು.ಪರಿಣಾಮವಾಗಿ ಸಂಸದರ ನಿಧಿಯಿಂದ ರೂ.20 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು ಟೆಂಡರ್ ಆಗಿದೆ ಎಂದು ತಿಳಿದು ಬಂದಿದೆ.ಅಲ್ಲದೆ ಈ ರಸ್ತೆ ಅಭಿವೃದ್ದಿಗಾಗಿ 10 ಲಕ್ಷ ಅನುದಾನ ಇಡಲಾಗಿದೆ ಎಂದು ಶಾಸಕರೂ  ತಿಳಿಸಿದ್ದಾರೆ. ಈ ನಡುವೆ ತಕ್ಷಣವೇ ಕಾಮಗಾರಿ ಆರಂಭವಾಗುತ್ತದೆ ಎನ್ನುತ್ತಾರೆ ಜಿಪಂ ಸದಸ್ಯ ಹರೀಶ್ ಕಂಜಿಪಿಲಿ.

ಇದೆಲ್ಲದರ ಪರಿಣಾಮ 6 ತಿಂಗಳ ಹಿಂದೆ ಈ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ.ಈದೀಗ ಸೇತುವೆ ಕಾಮಗಾರಿಗೆ ಟೆಂಡರ್ ಆದರೂ ಕಾಮಗಾರಿ ಪ್ರಾರಂಭಿಸದಿರುವುದು ಈ ಭಾಗದ ಜನರ ನೋವಿಗೆ ಕಾರಣವಾಗಿದೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಮತ್ಸ್ಯ ತೀರ್ಥ ಹೊಳೆಯಿಂದ ದ.ಕ ಕೊಡಗು ಜಿಲ್ಲೆಯ ಗಡಿಭಾಗ ತನಕ ದ.ಕ ಜಿಲ್ಲೆಯ ವ್ಯಾಪ್ತಿಗೆ ಈ ರಸ್ತೆ ಒಳಪಡುತ್ತದೆ. ಮತ್ಸ್ಯ ತೀರ್ಥ ಹೊಳೆ ಬದಿಯಿಂದ ಗಡಿಭಾಗ ಸುಮಾರು 1.5 ಕಿ.ಮೀ ರಸ್ತೆ ಅಭಿವೃದ್ದಿಯಾಗಬೇಕಾಗಿದೆ.ಸುಮಾರು ಎರಡು ವರ್ಷಗಳ ಹಿಂದೆ ಪೆರಂಬಾರು ಬಳಿ 60 ಮೀಟರ್ ರಸ್ತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್,ಜಿಲ್ಲಾ ಪಂಚಾಯತ್,ಶಾಸಕ ಅನುದಾನದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿದೆ. ಇದರಲ್ಲಿ ಸುಮಾರು 100 ಮೀ ರಸ್ತೆ ಕಾಂಕ್ರೀಟಿಕರಣವಾಗಲು ಬಾಕಿ ಉಳಿದಿದೆ.

Advertisement

ಕೊಡಗು ರಸ್ತೆ ಅಭಿವೃದ್ದಿ : ದ.ಕ ಜಿಲ್ಲೆಯ ಗಡಿಭಾಗ ತನಕ ಕೊಡಗು ಜಿಲ್ಲೆಗೆ ಸೇರಿದ ರಸ್ತೆ ಸಂಪೂರ್ಣ ಸರ್ವ ಋತು ರಸ್ತೆಯಾಗಿ ಅಭಿವೃದ್ದಿಗೊಂಡಿದೆ.ಇಲ್ಲಿಯ ಮಾಪಳಕಜೆ ತೋಡಿಗೆ ಕಿರು ಸೇತುವೆ ಕಾಮಗಾರಿ ನಡೆಯುತ್ತಿದ್ದು ಅದು ಕೊನೆ ಹಂತದಲ್ಲಿದೆ.ಇದೀಗ ತೊಡಿಕಾನ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣಗೊಂಡು ರಸ್ತೆ ಅಭಿವೃದ್ದಿಯಾದರೆ ತೊಡಿಕಾನ- ಕುದರೆಪಾಯ ಮಾಪಳಕೆ ರಸ್ತೆ ಸರ್ವ ಋತು ರಸ್ತೆಯಾಗಿ ಅಭಿವೃದ್ದಿಗೊಳ್ಳಲು ಸಹಕಾರಿಯಾಗುತ್ತದೆ.ಇದರಿಂದ ಅಂತರ್ ಜಿಲ್ಲಾ ಸಂಪರ್ಕ ರಸ್ತೆ ಅಭಿವೃದ್ದಿಯಾಗುತ್ತದೆ. ತೊಡಿಕಾನ ಪ್ರವಾಸಿ,ಧಾರ್ಮಿಕ ಕೇಂದ್ರವಾಗಿ ಅಭಿವೃದ್ದಿಗೊಳ್ಳಲು ಸಹಕಾರಿಯಾಗುತ್ತದೆ.ಸುಮಾರು ಒಂದುವರೆ ಕಿ ಮೀ ನಷ್ಟು ರಸ್ತೆಯನ್ನು ಅಬಿವೃದ್ದಿ ಮಾಡಲು ದ.ಕ ಜಿಲ್ಲೆಯ ಜನಪ್ರತಿನಿಧಿಗಳು ಮುಂದೆಯೂ ಪ್ರಮಾಣಿಕ ಪ್ರಯತ್ನ ಮಾಡಬೇಕಾಗಿದೆ.ಅಲ್ಲದೆ ಕಿರು ಸೇತುವೆ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಸಂಬಂಧಪಟ್ಟ ಇಲಾಖೆ,ಜನಪ್ರತಿನಿಧಿಗಳು ಸೂಚಿಸಬೇಕಾಗಿದೆ.

ತೊಡಿಕಾನ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದ ಸುದ್ದಿ ಕೇಳಿ ಕುಸಿಯಾಯಿತು.ಆದರೆ ಇನ್ನು ಕಾಮಗಾರಿ ಪ್ರಾರಂಭವಾಗದಿರುವುದು ನಿರಾಶೆ ತಂದಿದೆ.ಕಾಮಗಾರಿ ಆದಷ್ಟು ಬೇಗ ಪ್ರಾರಂಬಿಸುವಂತೆ ಜನಪ್ರತಿನಿಧಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಬೇಕಾಗಿದೆ ಎನ್ನುತ್ತಾರೆ ಸ್ಥಳಿಯರಾದ ಪುರುಷೋತ್ತಮ

 

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂತರ ರಾಷ್ಟ್ರೀಯ ಹಲಸು ದಿನ | ಗ್ರಾಮೀಣ ಉದ್ಯಮಿಗಳ ಸಬಲೀಕರಣಕ್ಕೆ ಹಲಸು ಬೆಳೆ ಪೂರಕ |
July 5, 2025
8:12 AM
by: ದ ರೂರಲ್ ಮಿರರ್.ಕಾಂ
ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ಶುಕ್ರ- ಶನಿ ಸೇರಿ ಲಾಭ ದೃಷ್ಟಿ ಯೋಗ: ಈ 5 ರಾಶಿಯವರಿಗೆ ಶ್ರೀಮಂತಿಕೆಯ ಸುಯೋಗ..!
July 5, 2025
7:17 AM
by: ದ ರೂರಲ್ ಮಿರರ್.ಕಾಂ
ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group