ಸುಳ್ಯ: ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ, ಸಸ್ಯರಾಶಿಗಳ ಮಹತ್ವ ಜಾಗೃತಿಗಾಗಿ ಗುಬ್ಬಚ್ಚಿಗೂಡು ಕಾರ್ಯಾಗಾರ ನಡೆಯಿತು. ನಮ್ಮ ಮನೆಗಳಲ್ಲಿ ಪಕ್ಷಿಗಳಿಗೆ ಧಾನ್ಯ ಮತ್ತು ನೀರಿಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಲ್ಕುಡ ದೈವಸ್ಥಾನದ ಆವರಣದಲ್ಲಿ ಗುಬ್ಬಚ್ಚಿಗೂಡು ಕಾರ್ಯಾಗಾರ ನಡೆಸಲಾಯಿತು.
Advertisement
ಈ ಸಂದರ್ಭದಲ್ಲಿ ರಂಜಿತ್ ಬೇಕರಿಯ ರಂಜಿತ್ ರವರಿಗೆ ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಇಡುವ ಮಣ್ಣಿನ ಪಾತ್ರೆಯನ್ನು ಉಚಿತವಾಗಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ನೀಡಿದರು.
Advertisement
ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ಕರಪತ್ರದ ಮೂಲಕ ಅಭಿಯಾನದ ಉದ್ದೇಶ ವಿವರಿಸಿದರು. ಸ್ಥಳೀಯರಾದ ದಾಸಪ್ಪ ಬಂಗ್ಲೆಗುಡ್ಡೆ ಹಾಗೂ ಸುನೀತಾ ವಿಶ್ವನಾಥ ಪಡ್ಡಬೈಲು ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement