ಗೂನಡ್ಕ ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ

September 30, 2019
2:30 PM

ಸುಳ್ಯ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಗೂನಡ್ಕ ಬ್ರಾಂಚ್ ಇದರ ಪ್ರಥಮ ವಾರ್ಷಿಕ ಕೌನ್ಸಿಲ್ ಸಭೆಯು ಹಯಾತುಲ್ ಇಸ್ಲಾಂ ಮದ್ರಸ ಸಭಾ ಭವನದಲ್ಲಿ ನಡೆಯಿತು.

Advertisement

 

ಬ್ರಾಂಚ್ ಅದ್ಯಕ್ಷ ಎಸ್ ಎಂ ಅಬ್ದುಲ್ಲ ರವರು ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಮುಹಮ್ಮದಲೀ ಸಖಾಫಿ  ಉದ್ಘಾಟಿಸಿದರು. ಎಸ್ ವೈ ಎಸ್ ಸುಳ್ಯ ಸೆಂಟರ್ ಸಮಿತಿ ಅಧ್ಯಕ್ಷರಾದ ಎ ಬಿ ಅಶ್ರಫ್ ಸಅದಿ, ಪ್ರಧಾನ ಕಾರ್ಯದರ್ಶಿ ಅಂದುಞಿ ಗೋರಡ್ಕ, ಟೀಮ್ ಇಸಾಬ ಕನ್ವೀನರ್ ಸಿದ್ದೀಖ್ ಕಟ್ಟೆಕ್ಕಾರ್ಸ್ ಅವರು ವೀಕ್ಷಕರಾಗಿ ಆಗಮಿಸಿದರು. ಎಸ್ ವೈ ಎಸ್ ಗೂನಡ್ಕ ಬ್ರಾಂಚ್ ಸಮಿತಿಯು ಹಮ್ಮಿಕೊಂಡ ವಿವಿಧ ಸಮಾಜ ಸೇವೆಗಳನ್ನು ಗುರುತಿಸಿ ಶ್ಲಾಘಿಸಿದರು.

ಗತ ವರ್ಷದ ವರದಿ ಮತ್ತು ಲೆಕ್ಕ ಪತ್ರಗಳನ್ನು ಪ್ರಧಾನ ಕಾರ್ಯದರ್ಶಿ ಪಿ ಎ ಉಮ್ಮರ್ ಸಭೆಯಲ್ಲಿ ಮಂಡಿಸಿದರು.  ಹಾಫಿಳ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ರವರು ವಿಷಯ ಮಂಡಿಸಿದರು.ಸುಳ್ಯ ರೀಜನಲ್ ಎಸ್ ಎಮ್ ಎ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಕಾರ್ಯದರ್ಶಿ ಅಬ್ದುಲ್‌ ಲತೀಪ್ ಸಖಾಫಿ ಗೂನಡ್ಕ ಭಾಷಣಗೈದರು.

Advertisement

ಈ ಸಂಧರ್ಭ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಗೌರವ ಸಲಹೆಗಾರರಾಗಿ, ಖತೀಬ್ ಮುಹಮ್ಮದಲೀ ಸಖಾಫಿ, ಜಮಾಅತ್ ಅಧ್ಯಕ್ಷರಾದ ಹಾಜಿ ಉಮ್ಮರ್ ಪಿ ಎ, ಹಿರಿಯರಾದ ಅಬ್ದಲ್ಲ ಮುಸ್ಲಿಯಾರ್, ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ , ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಎ ಅಶ್ರಫ್ ಕೋಶಾಧಿಕಾರಿಯಾಗಿ ಎಸ್ ಎಮ್ ಅಬ್ದುಲ್ಲ
ಉಪಾಧ್ಯಕ್ಷರಾಗಿ ಪಿ ಎ ಉಮ್ಮರ್ ದರ್ಕಾಸ್, ಕಾರ್ಯದರ್ಶಿಗಳಾಗಿ ಟಿ ಎಮ್ ಹನೀಫ್ ಝೈನಿ, ಪಿ ಕೆ ಅಬೂಶಾಲಿ , ಸದಸ್ಯರುಗಳಾಗಿ ಮಹಮ್ಮದ್ ಕುಂಞಿ ಗೂನಡ್ಕ,
ಹಾಜಿ ಪಿ ಎ ಅಬ್ದುಲ್ಲ ಕೊಪ್ಪತ್ತಕಜೆ,ಎಂ ಬಿ ಇಬ್ರಾಹಿಂ, ಹಂಸ ಎಮ್ ಕೆ, ಜಿ ಎಮ್ ಅಬ್ದುಲ್ಲ, ಕೆ ಯು ಸೂಫಿ,  ಕುಂಬಕೊಡ್ ಮಹಮ್ಮದ್, ಟಿ ಬಿ ಅಬ್ದುಲ್ ಅಝೀಜ್,ಎಂ ಬಿ ಮುನೀರ್ ಇವರನ್ನು ಆಯ್ಕೆಗೊಳಿಸಲಾಯಿತು. ಜಮಾಅತ್ ಅದ್ಯಕ್ಷರಾದ ಹಾಜಿ ಪಿ ಎ ಉಮ್ಮರ್,ಕೋಶಾಧಿಕಾರಿ ಎಂ ಬಿ ಇಬ್ರಾಹಿಂ , ಎಸ್ ಎಸ್ ಎಫ್ ಅಧ್ಯಕ್ಷ ಹಾರಿಸ್ ಮುಂತಾದವರು ಸಭೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಪಿ ಕೆ ಅಬೂಶಾಲಿ ಸ್ವಾಗತಿಸಿ,ನೂತನಾಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಂದಿಸಿದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

33 ಕೆವಿ ವಿದ್ಯುತ್‌ ಉಪಕೇಂದ್ರ | ತ್ವರಿತ ಕಾಮಗಾರಿಗೆ ಭಾಕಿಸಂ ಒತ್ತಾಯ
July 1, 2025
11:37 AM
by: The Rural Mirror ಸುದ್ದಿಜಾಲ
ಕೆಂಪು ಕಲ್ಲು ಅಲಭ್ಯತೆ | ಕೆಲಸ ಕಳಕೊಂಡಿರುವ ಕಟ್ಟಡ ಕಾರ್ಮಿಕರು | ನೆರವಿಗೆ ಧಾವಿಸಬೇಕೆಂದು ಕಾರ್ಮಿಕ ಸಚಿವರಿಗೆ ಮನವಿ
June 29, 2025
11:14 PM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ
June 26, 2025
7:05 AM
by: The Rural Mirror ಸುದ್ದಿಜಾಲ
ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
June 11, 2025
10:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group