ಗ್ರಾಮೀಣ ಜನರಿಗೆ ಸಂತಸದ ಸುದ್ದಿ : ಬಿ ಎಸ್ ಎನ್ ಎಲ್ ಪುನರುಜ್ಜೀವನದ ನಿರೀಕ್ಷೆ……

October 16, 2019
8:00 AM

ಗ್ರಾಮೀಣ ಭಾಗದ ಜನರ ಪ್ರಮುಖವಾದ ಸಂಪರ್ಕ ವ್ಯವಸ್ಥೆ ಬಿ ಎಸ್ ಎನ್ ಎಲ್ ಪುನರುಜ್ಜೀವನಗೊಳ್ಳುವ ನಿರೀಕ್ಷೆ ಇದೆ. ಹಣಕಾಸು ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿ 50,000 ಕೋಟಿ ರೂಪಾಯಿ ನೀಡಲು ಮುಂದಾಗಿದೆ ಎಂಬ ಸುಳಿವು ಲಭ್ಯವಾಗಿದ್ದು ಮುಂದಿನ ವಾರ ಈ ಬಗ್ಗೆ ಕೇಂದ್ರ ಸರಕಾರದಲ್ಲಿ ಚರ್ಚೆಯಾಗಲಿದೆ. ಹೀಗಾಗಿ ಮತ್ತೆ ಬಿ ಎಸ್ ಎನ್ ಎಲ್ ಸುಧಾರಣೆಯ ಹಾದಿಯತ್ತ ಸಾಗಲಿದೆ.

ಇದೇ ವೇಳೆ ವೇತನವೂ ಬಿ ಎಸ್ ಎನ್ ಎಲ್ ನೌಕರರಿಗೆ ಸಿಗಲಿದೆ. ಸೆಪ್ಟೆಂಬರ್ ತಿಂಗಳ ಸಂಬಳ  ದೀಪಾವಳಿಗೂ ಮುನ್ನವೇ ನೌಕರರಿಗೆ ಸಿಗಲಿದೆ. ದೀಪಾವಳಿ ಹಬ್ಬದ ಮೊದಲು ಕಂಪನಿಯು ತನ್ನ ಸಂಪನ್ಮೂಲಗಳ ಮೂಲಕ ನೌಕರರಿಗೆ ಸಂಬಳ ನೀಡಲಿದೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷರು ಹೇಳಿದ್ದಾರೆ.  ವಿಆರ್‌ಎಸ್ ಯೋಜನೆಯ ಬಗ್ಗೆ ಇದೇ ವೇಳೆ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ. ಕಂಪನಿ ಪ್ರತಿ ತಿಂಗಳು 1,600 ಕೋಟಿ ಗಳಿಸುತ್ತಿದೆ. ಅದೇ ಸಮಯದಲ್ಲಿ ನೌಕರರಿಗೆ ಸಂಬಳ ನೀಡಲು ಕಂಪನಿ 850 ಕೋಟಿ ರೂಪಾಯಿ ವೆಚ್ಚ  ಮಾಡುತ್ತಿದೆ.

ಇಲ್ಲಿ ವೇತಕ್ಕೆ ಅಧಿಕ ಖರ್ಚಾಗುತ್ತಿದೆ. ಅದೇ ಮಾದರಿಯ ಕೆಲಸಗಳು ನಡೆಯುತ್ತಿಲ್ಲ ಎಂಬ ಕಾರಣದಿಂದಲೇ ಬಿ ಎಸ್ ಎನ್ ಎಲ್ ಕಡೆಗೆ ಆಸಕ್ತಿ ಕಡಿಮೆಯಾಗಿತ್ತು. ಖಾಸಗಿ ಕಂಪನಿಗೆ ಪೈಪೋಟಿ ನೀಡಲು ಕಾರ್ಯತತ್ಪರತೆಯೂ ಅಗತ್ಯವಾಗಿತ್ತು. ಅಧಿಕ ಸಂಬಳ ಪಡೆದರೂ, ಸರಕಾರ ನೀಡಿದರೂ ಅದೇ ಮಾದರಿಯಲ್ಲಿ ಕೆಲಸಗಳು , ಸರಕಾರದ ನಿಯಮಗಳಲ್ಲಿ ಬದಲಾವಣೆ ಆಗದೇ ಇರುವುದು, ಹಿರಿಯ ಅಧಿಕಾರಿಗಳ ನಿರಾಸಕ್ತಿ, ಖಾಸಗಿ ಕಂಪನಿಗಳೊಂದಿಗೆ ಒಳ ಒಪ್ಪಂದ   ಬಿ ಎಸ್ ಎನ್ ಎಲ್ ಹಿಂದೆ ಉಳಿಯಲು ಕಾರಣವಾದರೆ, ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಶಕ್ತವಾಗಲಿಲ್ಲ ಎಂಬ ವಿಶ್ಲೇಷಣೆ ಹಿರಿಯ ತಜ್ಞರಿಂದ ನಡೆದಿತ್ತು. ಇದೀಗ ಕೇಂದ್ರ ಸರಕಾರವು ಮತ್ತೆ ಬಿ ಎಸ್ ಎನ್ ಎಲ್ ಸುಧಾರಣೆಯತ್ತ ಮುಖ ಮಾಡಿರುವುದು ಗ್ರಾಮೀಣ ಭಾಗದ ಜನರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಯಾಗುವ ನಿರೀಕ್ಷೆ ಮೂಡಿಸಿದೆ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ
May 23, 2026
6:45 AM
by: ಮಿರರ್‌ ಡೆಸ್ಕ್
ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ
May 22, 2026
8:17 PM
by: ದ ರೂರಲ್ ಮಿರರ್.ಕಾಂ
“ಕಾಕ್ರೋಚ್‌ ಜನತಾ ಪಾರ್ಟಿ” ಸದ್ದು | 60 ಲಕ್ಷ ಫಾಲೋವರ್ಸ್‌ ದಾಟಿದ ರಾಜಕೀಯ ಚಳವಳಿ..!
May 20, 2026
9:29 PM
by: ದ ರೂರಲ್ ಮಿರರ್.ಕಾಂ
ಉತ್ತರ ಭಾರತ ಉರಿಯುತ್ತಿದೆ – ಮೇ 25ರವರೆಗೆ ತೀವ್ರ ಬಿಸಿಗಾಳಿ ಎಚ್ಚರಿಕೆ
May 20, 2026
7:18 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror