ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಬಹುತೇಕ ಯಶಸ್ಸು ಕಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ನಿರಾಸೆ ಮೂಡಿಸಿತ್ತು. ಆದರೆ ಆರ್ಬಿಟರ್ ಮೂಲಕ ವಿಕ್ರಂ ಇರುವ ಸ್ಥಳ ಪತ್ತೆಯಾಗಿತ್ತು. ಅಂದಿನಿಂದ ನಿರಂತರವಾಗಿ ಸಂಪರ್ಕಕ್ಕೆ ಪ್ರಯತ್ನ ಮಾಡಲಾಗಿತ್ತು. ಸೆಪ್ಟೆಂಬರ್ 7 ರಂದು ಆರ್ಬಿಟರ್ ಜೊತೆ ಸಂಪರ್ಕ ಕಳೆದುಕೊಂಡಿತ್ತು. ಸಂಪರ್ಕಕ್ಕೆ ಇಂದು ಕೊನೆಯ ದಿನವಾಗಿದೆ. ನಂತರ ವಿಕ್ರಂ ಕರಗಲಿದೆ. ಹೀಗಾಗಿ ಭರವಸೆ ಕಳೆದುಕೊಳ್ಳದೆ ಕೊನೆಯ ಕ್ಷಣದವರೆಗೆ ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಿದ್ದಾರೆ.
ಇಸ್ರೋ ಸತತ ಪ್ರಯತ್ನದ ಮೂಲಕ ಚಂದ್ರಯಾನ-2 ಕೈಗೊಂಡಿತ್ತು. ಈ ಸಂದರ್ಭ ಇಡೀ ಜಗತ್ತು ಭಾರತದ ಕಡೆಗೆ ದೃಷ್ಟಿ ಇಟ್ಟಿತ್ತು. ಚಂದ್ರಯಾನಕ್ಕಿಂತಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇದುವರೆಗೆ ಇಳಿದಿರುವ ಹಾಗೂ ಚಂದ್ರನ ಅಂಗಳದ ಸ್ಪಷ್ಟ ಚಿತ್ರಣ ಸಿಗುವ ಕಾರಣಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಕೊನೆಯ ಕ್ಷಣಕ್ಕೆ ಆರ್ಬಿಟರ್ ಜೊತೆ ವಿಕ್ರಂ ಸಂಪರ್ಕ ಕಳೆದುಕೊಂಡಿತ್ತು. ಇಂದಿಗೆ ಅದರ ಆಯಸ್ಸು ಮುಗಿಯಲಿದೆ. ಹೀಗಾಗಿ ಪರೋಕ್ಷವಾಗಿ ವಿಕ್ರಂ ಲ್ಯಾಂಡರ್ ಜೊತೆ ಇನ್ನೆಂದೂ ಸಂಪರ್ಕ ಸಾಧ್ಯವಿಲ್ಲ. ಸಂಪರ್ಕ ಕಡಿತದ ಕುರಿತಂತೆ ತಜ್ಞರ ಸಮಿತಿ ವರದಿ ನೀಡಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.
ಮಹತ್ವದ ಚಂದ್ರಯಾನ ಯೋಜನೆಯ ವಿಕ್ರಂ ಲ್ಯಾಂಡರ್ ಸೆಪ್ಟೆಂಬರ್ 7 ರಂದು ಆರ್ಬಿಟರ್ ಜೊತೆ ಸಂಪರ್ಕ ಕಳೆದುಕೊಂಡಿತ್ತು. ಇಂದಿಗೆ ಲ್ಯಾಂಡರ್ ನ ಆಯಸ್ಸು ಮುಗಿಯಲಿದ್ದು, ಕೊನೆಯ ಕ್ಷಣದವರೆಗೆ ಸಂಪರ್ಕಕ್ಕೆ ಪ್ರಯತ್ನ ನಡೆಯುತ್ತಿದೆ. ಇಂದು ಸಂಜೆಯ ನಂತರ ವಿಕ್ರಂ ಲ್ಯಾಂಡರ್ ಜೊತೆ ಇನ್ನೆಂದೂ ಸಂಪರ್ಕ ಸಾಧ್ಯವಿಲ್ಲ. ಸಂಪರ್ಕ ಕಡಿತದ ಕುರಿತಂತೆ ತಜ್ಞರ ಸಮಿತಿ ವರದಿ ನೀಡಲಿದೆ.ಆದರೆ ಆರ್ಬಿಟರ್ ಮಾತ್ರ ಇನ್ನು ಏಳು ವರ್ಷ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಿದೆ. ಸೆಪ್ಟೆಂಬರ್ 7 ರಂದು ಶನಿವಾರ ಬೆಳಗ್ಗಿನ ಜಾವ ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಇನ್ನು ಕೇವಲ 2.1 ಕಿ.ಮೀ. ಅಂತರವಿದೆ ಎನ್ನುವಾಗ ಸಂಪರ್ಕ ಕಳೆದುಕೊಂಡಿತ್ತು. ಆದರೆ ಲ್ಯಾಂಡರ್ ಸುರಕ್ಷಿತವಾಗಿರುವ ಚಿತ್ರನ್ನು ಆರ್ಬಿಟರ್ ಕಳಿಸಿದ ಮೇಲೆ ಅದು ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಜೀವ ಪಡೆದಿತ್ತು. ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ತಲುಪಿ ಈಗಾಗಲೇ ಒಂದು ಪಾಕ್ಷಿಕ ಮುಗಿಯುತ್ತಿದ್ದು, ಇನ್ನು ಹದಿನೈದು ದಿನ ಘೋರ ಚಳಿ ಆರಂಭವಾಗಲಿದೆ. ಕನಿಷ್ಠ -200 ಡಿಗ್ರಿ ಸೆಲ್ಷಿಯ್ ವರೆಗೂ ತಾಪಮಾನ ತಲುಪಲಿದ್ದು, ಈ ವಾತಾವರಣದಲ್ಲಿ ಲ್ಯಾಂಡರ್ ನ ಹೆಪ್ಪುಗಟ್ಟಿ ನಾಶವಾಗುತ್ತದೆ.
( ಮಾಹಿತಿ -ಆನ್ ಲೈನ್)