ಚಳಿಗಾಲದಲ್ಲಿ ಮತ್ತೆ ಕಾಡಲಿದೆಯಂತೆ ಸಾಂಕ್ರಾಮಿಕ ರೋಗ….! | ಭಯವಲ್ಲ ಬೇಕಿದೆ ಅಭಯ |

August 17, 2020
11:54 AM

ಕೊರೋನಾ ವೈರಸ್‌ ಇಡೀ ಪ್ರಪಂಚದಲ್ಲಿ  ತಲೆ ಎತ್ತಿ ನಿಂತಿದೆ. ಕೊರೋನಾ ವೈರಸ್‌ ಇದೆ-ಇಲ್ಲ ಎಂಬ ಚರ್ಚೆ ಹೆಚ್ಚಾಗಿರುವ ನಡುವೆಯೇ ಚಳಿಗಾಲದಲ್ಲಿ  ಮತ್ತೆ ಸಾಂಕ್ರಾಮಿಕ ರೋಗ ಬಾಧೆ ಕಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳು ಈ ಪರಿಸ್ಥಿತಿಯನ್ನು ‘ಟ್ವೈನೆಡೆಮಿಕ್’ ಎಂದು ಹೆಸರಿಸಿದ್ದಾರೆ.

Advertisement

ಈಗಿನ ಮಾಹಿತಿ ಪ್ರಕಾರ ಋತುಮಾನಗಳು ಬದಲಾಗುವ ವೇಳೆ ಸಾಮಾನ್ಯವಾಗಿ ಶೀತ-ಜ್ವರ ಬಾಧೆ ಇರುತ್ತದೆ. ಇದು ಒಂದೆರಡು ದಿನಗಳ ಕಾಲ ಇದ್ದು ನಂತರ ವಾಸಿಯಾಗುತ್ತದೆ. ಇದು ಕೂಡಾ ವೈರಸ್‌ ಜ್ವರವಾಗಿದೆ. ಆದರೆ ಈಗಾಗಲೇ ಕೋವಿಡ್ ಇರುವ ಕಾರಣದಿಂದ ಋತುಮಾನ  ಬದಲಾವಣೆಯ ಜ್ವರವೂ ಸಾಂಕ್ರಾಮಿಕವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ರೋಗಿಗಳ ಸಂಖ್ಯೆ ಹೆಚ್ಚಾದರೆ, ಆಸ್ಪತ್ರೆಗಳ ಮುಂದೆ ದೊಡ್ಡ ಸಮಸ್ಯೆ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ  ಜನರು ಭಯಗೊಂಡರೆ ಕೋವಿಡ್‌ ಪರಿಸ್ಥಿತಿಯೇ ಬರಲಿದೆ. ಹೀಗಾಗಿ ಭಯ ನಿವಾರಣೆ ಹಾಗೂ ಆಸ್ಪತ್ರೆಗಳಲ್ಲಿ  ದಟ್ಟಣೆ ನಿವಾರಣೆಗೆ ಕ್ರಮ ಅನಿವಾರ್ಯ ಎಂದೂ ತಜ್ಞರು  ಎಚ್ಚರಿಸಿದ್ದಾರೆ. ಈಗಾಗಲೇ ಕೊರೋನಾ ಭಯ ಜಗತ್ತನ್ನು ಆವರಿಸಿದೆ. ಈ ಭಯದ ನಡುವೆ ಮುಂದಿನ ಋತುಮಾನ ಬದಲಾವಣೆಯ ಸಮಯದ ಜ್ವರ ಬಗ್ಗೆ ಧೈರ್ಯ ತುಂಬುವ ಕೆಲಸವಾಗಬೇಕಿದೆ. ಗ್ರಾಮೀಣ ಭಾಗದಲ್ಲೂ ವೈದ್ಯರು, ತಜ್ಞ ವೈದ್ಯರು ಲಭ್ಯವಾಗುವಂತೆ, ಸೂಕ್ತ ಔಷಧಿ ಲಭ್ಯವಾಗುವಂತೆ, ತಮ್ಮ ಕುಟುಂಬ ವೈದ್ಯರೇ ಲಭ್ಯವಾಗುವಂತೆ ವ್ಯವಸ್ಥೆ ಆಗಬೇಕಾಗಿದೆ. ಇದಕ್ಕಾಗಿ ಈಗಲೇ ತಯಾರಿ ನಡೆಯಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

 

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂತರ ರಾಷ್ಟ್ರೀಯ ಹಲಸು ದಿನ | ಗ್ರಾಮೀಣ ಉದ್ಯಮಿಗಳ ಸಬಲೀಕರಣಕ್ಕೆ ಹಲಸು ಬೆಳೆ ಪೂರಕ |
July 5, 2025
8:12 AM
by: ದ ರೂರಲ್ ಮಿರರ್.ಕಾಂ
ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ಶುಕ್ರ- ಶನಿ ಸೇರಿ ಲಾಭ ದೃಷ್ಟಿ ಯೋಗ: ಈ 5 ರಾಶಿಯವರಿಗೆ ಶ್ರೀಮಂತಿಕೆಯ ಸುಯೋಗ..!
July 5, 2025
7:17 AM
by: ದ ರೂರಲ್ ಮಿರರ್.ಕಾಂ
ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group